ನವದೆಹಲಿ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರ ಪುತ್ರನ ಕಂಪೆನಿಯಲ್ಲಿ ಅಕ್ರಮ ಹಣಕಾಸು ವ್ಯವಹಾರ ನಡೆದಿದೆ ಎಂದು ಆರೋಪಿಸಿ ಸುದ್ದಿಯನ್ನು ಪ್ರಕಟಿಸಿದ thewire.in ಮಾಧ್ಯಮದ ವಿರುದ್ಧ 100 ಕೋಟಿ ರೂ. ಮಾನಷ್ಟ ಕೇಸ್ ದಾಖಲಿಸಲಾಗುವುದು ಎಂದು ರೈಲ್ವೇ ಸಚಿವ ಪಿಯೂಶ್ ಗೊಯಲ್ ಹೇಳಿದ್ದಾರೆ.
ಟೆಂಪಲ್ ಎಂಟರ್ ಪ್ರೈಸ್ ಕಂಪೆನಿ ವ್ಯವಹಾರ 2015-16 ಅವಧಿಗಿಂತ 16 ಸಾವಿರ ಪಟ್ಟು ದಿಢೀರ್ ಏರಿಕೆಯಾಗಿದ್ದು ಹೇಗೆ ಎಂದು ವೈರ್ ಸುದ್ದಿಯ ಆಧಾರ ಮೇಲೆ ಕಾಂಗ್ರೆಸ್ ನಾಯಕ ಕಪಿಲ್ ಸಿಬಲ್ ಪ್ರಶ್ನೆ ಮಾಡಿದ ಬಳಿಕ ಸುದ್ದಿಗೋಷ್ಠಿ ನಡೆಸಿದ ಪೀಯೂಷ್ ಗೋಯಲ್, ಕಾನೂನು ಬದ್ಧವಾಗಿ ಅಮಿತ್ ಶಾ ಪುತ್ರ ಜೇ ಶಾ ವಿರುದ್ಧ ಬ್ಯಾಂಕಿನಿಂದ ಸಾಲವನ್ನು ಪಡೆದು ವ್ಯವಹಾರ ನಡೆಸಿದ್ದಾರೆ ಎಂದು ತಿಳಿಸಿದರು.
Advertisement
ವೆಬ್‍ಸೈಟ್ ನಲ್ಲಿ ಪ್ರಕಟವಾಗಿರುವ ಸುದ್ದಿಗಳೆಲ್ಲವೂ ಸತ್ಯಕ್ಕೆ ದೂರವಾಗಿದೆ. ಹೀಗಾಗಿ ಜೇ ಶಾ ವಿರುದ್ಧ 100 ಕೋಟಿ ರೂ. ಮಾನನಷ್ಟ ಕೇಸ್ ಹೂಡಲಿದ್ದಾರೆ ಎಂದು ಪೀಯೂಷ್ ಗೋಯಲ್ ತಿಳಿಸಿದರು.
Advertisement
ತನಿಖೆ ನಡೆಸಲಿ: ಟೆಂಪಲ್ ಎಂಟರ್‍ಪ್ರೈಸಸ್ ರಿಜಿಸ್ಟ್ರಾರ್ ಆಫ್ ಕಂಪೆನಿಸ್ ನಲ್ಲಿ 80.5 ಕೋಟಿ ರೂ. ವ್ಯವಹಾರ ನಡೆಸಿದೆ ಎಂದು ತಿಳಿಸಿದೆ. ಯಾವುದೇ ಷೇರು, ಯಾವುದೇ ಆದಾಯ ಇಲ್ಲದೇ 80 ಕೋಟಿ ರೂ. ವಹಿವಾಟು ನಡೆದಿರುವುದು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ್ದ ಕಪಿಲ್ ಸಿಬಲ್ ಅವರು ಪ್ರಧಾನಿ ನರೇಂದ್ರ ಮೋದಿ ಈ ಪ್ರಕರಣವನ್ನು ಸಿಬಿಐಗೆ ವಹಿಸುತ್ತಾರಾ? ಅಮಿತ್ ಶಾ ಪುತ್ರನ ಕಂಪೆನಿ ಮೇಲೆ ತನಿಖೆ ನಡೆಸಲು ಆದೇಶ ನೀಡುತ್ತಾರಾ ಎಂದು ಪ್ರಶ್ನಿಸಿದರು.
Advertisement
ವೈರ್ ಮಾಧ್ಯಮದಲ್ಲಿ ಈ ಸುದ್ದಿ ಪ್ರಕಟವಾದ ಬಳಿಕ ರಾಹುಲ್ ಗಾಂಧಿ ಟ್ವಿಟ್ಟರ್ ನಲ್ಲಿ, ಕೊನೆಗೂ ನೋಟ್ ಬ್ಯಾನ್ ಬಳಿಕ ಯಾರಿಗೆ ಲಾಭವಾಗಿದೆ ಎನ್ನುವುದು ತಿಳಿದಿದೆ. ಆರ್‍ಬಿಐ, ಬಡವರು, ರೈತರಿಗೆ ಲಾಭವಾಗಿಲ್ಲ. ಅಮಿತ್‍ಗೆ ಲಾಭವಾಗಿದೆ ಜೈ ಅಮಿತ್ ಎಂದು ಟ್ವೀಟ್ ಮಾಡಿದ್ದರು.
Advertisement
LIVE: Press Conference by Shri @PiyushGoyal. https://t.co/1rlJSRNe0o
— BJP (@BJP4India) October 8, 2017
Mr. Jay Shah will file criminal defamation suit of Rs. 100 crore against author (of article), editor & owner of The Wire. #LiesAgainstShah
— BJP (@BJP4India) October 8, 2017
All loans were in accordance with law & were paid back with full interest – Shri @PiyushGoyal https://t.co/cWIJeJhLky #LiesAgainstShah
— BJP (@BJP4India) October 8, 2017
We believe in legitimate and honest transactions. We don't take refuge in falsehood as the Congress is known to do: Shri @PiyushGoyal
— BJP (@BJP4India) October 8, 2017
We finally found the only beneficiary of Demonetisation. It's not the RBI, the poor or the farmers. It's the Shah-in-Shah of Demo. Jai Amit https://t.co/2zHlojgR2c
— Rahul Gandhi (@RahulGandhi) October 8, 2017