ನವದೆಹಲಿ: ಮಹತ್ವದ ಬೆಳವಣಿಗೆಯಲ್ಲಿ ವಿಶ್ವವಿದ್ಯಾನಿಲಯ ಧನಸಹಾಯ ಆಯೋಗ (UGC) ದೇಶದ ವಿಶ್ವವಿದ್ಯಾಲಯಗಳಿಗೆ (University) 2023-24ನೇ ಸಾಲಿನ ಎಂಫಿಲ್ (MPhil) ಕೋರ್ಸ್‌ಗೆ ಪ್ರವೇಶಾತಿ ತೆಗೆದುಕೊಳ್ಳುವುದನ್ನು ನಿಲ್ಲಿಸುವಂತೆ ಸೂಚಿಸಿದೆ. ಅಷ್ಟೇ ಅಲ್ಲದೇ ಇದು ಮಾನ್ಯತೆ ಪಡೆದ ಪದವಿ ಅಲ್ಲ ಎಂದು ಹೇಳಿದೆ.
“ಕೆಲವು ವಿಶ್ವವಿದ್ಯಾನಿಲಯಗಳು ಎಂಫಿಲ್ (Master of Philosophy) ಕಾರ್ಯಕ್ರಮಕ್ಕಾಗಿ ಹೊಸದಾಗಿ ಅರ್ಜಿಗಳನ್ನು ಆಹ್ವಾನಿಸುತ್ತಿರುವುದು ಯುಜಿಸಿಯ ಗಮನಕ್ಕೆ ಬಂದಿದೆ. ಎಂಫಿಲ್ ಪದವಿಯು ಮಾನ್ಯತೆ ಪಡೆದ ಪದವಿಯಲ್ಲ ಎಂಬುದನ್ನು ಈ ಮೂಲಕ ಎಲ್ಲರ ಗಮನಕ್ಕೆ ತರಲಾಗುತ್ತಿದೆ” ಎಂದು ಯುಜಿಸಿ ಕಾರ್ಯದರ್ಶಿ ಮನೀಶ್ ಜೋಶಿ ಹೇಳಿದ್ದಾರೆ ಎಂದು ಸುದ್ದಿ ಸಂಸ್ಥೆ ವರದಿ ಮಾಡಿದೆ. ಇದನ್ನೂ ಓದಿ: ಅಯೋಧ್ಯೆ ರಾಮಮಂದಿರ: ಮತ್ತೆ 500 ಕಾರ್ಮಿಕರಿಗೆ ಬುಲಾವ್, 4000 ಕಾರ್ಮಿಕರಿಂದ ಹಗಲಿರುಳು ಕೆಲಸ
Advertisement
Advertisement
Advertisement
ಯುಜಿಸಿಯ (ಪಿಎಚ್‌ಡಿ ಪದವಿ ಪ್ರದಾನ ಮಾಡಲು ಕನಿಷ್ಠ ಮಾನದಂಡಗಳು ಮತ್ತು ಕಾರ್ಯವಿಧಾನಗಳು) ನಿಯಮಗಳು 2022ರ ನಿಯಮಾವಳಿ 14ರ ಪ್ರಕಾರ, ಉನ್ನತ ಶಿಕ್ಷಣ ಸಂಸ್ಥೆಗಳು ಯಾವುದೇ ಎಂಫಿಲ್ ಕಾರ್ಯಕ್ರಮವನ್ನು ನೀಡುವುದಿಲ್ಲ ಎಂದು ಸ್ಪಷ್ಟವಾಗಿ ಹೇಳುತ್ತದೆ ಎಂದು ಅವರು ತಿಳಿಸಿದ್ದಾರೆ. ಇದನ್ನೂ ಓದಿ: 39 ದಿನಗಳಲ್ಲಿ ಶಬರಿಮಲೆಗೆ 204 ಕೋಟಿ ರೂ. ಆದಾಯ- ಕಳೆದ ವರ್ಷ ಎಷ್ಟಿತ್ತು?
Advertisement
ಶಿಕ್ಷಣ ಸಚಿವಾಲಯದ ಅಂಕಿಅಂಶಗಳ ಪ್ರಕಾರ, ಕಳೆದ ಐದು ವರ್ಷಗಳಲ್ಲಿ ಭಾರತದ ವಿವಿಧೆಡೆ 140 ಖಾಸಗಿ ವಿಶ್ವವಿದ್ಯಾಲಯಗಳು ಸ್ಥಾಪನೆಯಾಗಿವೆ. ಗುಜರಾತ್‌ನಲ್ಲಿ ಗರಿಷ್ಠ ಖಾಸಗಿ ವಿವಿಗಳು ಸ್ಥಾಪನೆಯಾಗಿವೆ. ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶಗಳು ನಂತರದ ಸ್ಥಾನಗಳಲ್ಲಿವೆ. ಗುಜರಾತ್‌ನಲ್ಲಿ 28, ಮಹಾರಾಷ್ಟ್ರದಲ್ಲಿ 15, ಕರ್ನಾಟಕದಲ್ಲಿ 10 ಖಾಸಗಿ ವಿವಿಗಳು ಸ್ಥಾಪನೆಯಾಗಿವೆ.