– ಉಡುಪಿಯಲ್ಲಿ ಶಿವಶ್ರೀ ತೇಜಸ್ವಿ ಸಂಗೀತ ಸೇವೆ
ಉಡುಪಿ: ಇತ್ತೀಚೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸಂಸದ ತೇಜಸ್ವಿ ಸೂರ್ಯ (Tejasvi Surya) ಮತ್ತು ಗಾಯಕಿ ಶಿವಶ್ರೀ, ಉಡುಪಿ ಶ್ರೀಕೃಷ್ಣ ಮಠದಲ್ಲಿ ಸಂಗೀತ ಸೇವೆ ನೀಡಿದ್ದಾರೆ.
ರಥಬೀದಿಯಲ್ಲಿ ನಡೆದ ನಿತ್ಯೋತ್ಸವದಲ್ಲಿ ಭಾಗಿಯಾದ ನವದಂಪತಿಯ ಕುಟುಂಬಗಳು, ಕೃಷ್ಣ ದೇವರ ಗರ್ಭಗುಡಿಯಲ್ಲಿ ನಡೆಯುವ ಮಹಾಪೂಜೆ ಮತ್ತು ಶಯನ ಪೂಜೆಯಲ್ಲಿ ಭಾಗಿಯಾಯ್ತು. ಈ ಸಂದರ್ಭದಲ್ಲಿ ಶಿವಶ್ರೀ ತೇಜಸ್ವಿ ದೇವರ ಮುಂದೆ ಸಂಗೀತ ಸೇವೆಯನ್ನು ನೀಡಿದರು. ಇದನ್ನೂ ಓದಿ: ಕಾರು ಬಿಟ್ಟು ಬಸ್‍ನಲ್ಲಿ ಸಂಚರಿಸಿ ಮಲೆನಾಡ ಸೌಂದರ್ಯ ಸವಿದ ತೇಜಸ್ವಿ ಸೂರ್ಯ ದಂಪತಿ
ಜಗದೋದ್ಧಾರನಾ ಆಡಿಸಿದಳು ಯಶೋಧೆ.. ಮತ್ತು ತೊರೆದು ಜೀವಿಸಬಹುದೇ ಹರಿ ನಿನ್ನ ಚರಣಗಳ ಹಾಡನ್ನು ಹಾಡಿದರು. ಪರ್ಯಾಯ ಪುತ್ತಿಗೆ ಮಠ ಮತ್ತು ಉಡುಪಿ ಶ್ರೀಕೃಷ್ಣ ಮಠದ ಸಂಗೀತಗಾರರಾದ ನಾರಾಯಣ ಶರಳಾಯರು ಸಂಗೀತದಲ್ಲಿ ಸಾಥ್ ನೀಡಿದರು. ಪತಿ ಸಂಸದ ತೇಜಸ್ವಿ ಸೂರ್ಯ ವೇದಘೋಷ ಮಾಡಿದರು.