ನವದೆಹಲಿ: ನೀವು ಕರ್ನಾಟಕದ ಚೀಫ್ ಮಿನಿಸ್ಟರ್. ಆದರೆ ಕರ್ನಾಟಕದ ಚೀಫ್ ಲೈಯರ್ (ಸುಳ್ಳುಗಾರ) ಆಗಿದ್ದೀರಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಸಂಸದ ತೇಜಸ್ವಿ ಸೂರ್ಯ (Tejasvi Surya) ಗುಡುಗಿದ್ದಾರೆ.
ಕರ್ನಾಟಕಕ್ಕೆ ಕೇಂದ್ರ ಸರ್ಕಾರ ಅನುದಾನ ನೀಡಿಲ್ಲ ಎಂದು ಆರೋಪಿಸಿ ಸಿಎಂ ಸಿದ್ದರಾಮಯ್ಯ (Siddaramaiah) ಎಕ್ಸ್‌ನಲ್ಲಿ ಪೋಸ್ಟ್ ಹಾಕಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ತೇಜಸ್ವಿ ಸೂರ್ಯ, ನೀವು ಕರ್ನಾಟಕದ ಚೀಫ್ ಲೈಯರ್ ಆಗಿದ್ದೀರಿ ಎಂದು ಟೀಕಿಸಿದ್ದಾರೆ. ಇದನ್ನೂ ಓದಿ: ಬರ ಪರಿಸ್ಥಿತಿ ಅಧ್ಯಯನಕ್ಕೆ ಬಿಜೆಪಿಯ 17 ತಂಡಗಳಿಂದ ರಾಜ್ಯಾದ್ಯಂತ ಪ್ರವಾಸ: ಎನ್ ರವಿಕುಮಾರ್
Advertisement
Advertisement
ಬೆಂಗಳೂರು ಉಪನಗರ ರೈಲು ಯೋಜನೆಗೆ ಕೇಂದ್ರ ಸರ್ಕಾರ ಈಗಾಗಲೇ 500 ಕೋಟಿ ರೂ. ಬಿಡುಗಡೆ ಮಾಡಿದೆ. ಆದರೆ 2023-24 ವರ್ಷಕ್ಕೆ ಕರ್ನಾಟಕ ಸರ್ಕಾರ ಇನ್ನೂ ಯಾವುದೇ ಹಣವನ್ನು ಬಿಡುಗಡೆ ಮಾಡಿಲ್ಲ ಎಂದು ತಿರುಗೇಟು ನೀಡಿದ್ದಾರೆ.
Advertisement
ಪ್ರಿಯಾಂಕಾ ಖರ್ಗೆ ಅವರ ಸತ್ಯ ತಪಾಸಣೆ ಘಟಕವು ನಮ್ಮ ಸುಳ್ಳುಗಾರ ಮುಖ್ಯಮಂತ್ರಿಯನ್ನು ಪರಿಶೀಲಿಸಲು ಹೆಚ್ಚಿನ ಹೊರೆಯಾಗಿರುತ್ತದೆ ಎಂದು ದಾಖಲೆ ಸಹಿತ ಕಾಂಗ್ರೆಸ್ ನಾಯಕರನ್ನು ವ್ಯಂಗ್ಯ ಸಂಸದ ವ್ಯಂಗ್ಯ ಮಾಡಿದ್ದಾರೆ. ಇದನ್ನೂ ಓದಿ: ಒಕ್ಕಲಿಗ ನಾಯಕತ್ವ ಮುಗಿಸಲು ಒಂದು ತಂಡ ಪ್ರಯತ್ನಿಸುತ್ತಿದೆ: ರವಿಕುಮಾರ್ ಗಣಿಗ
Advertisement
ಕೇಂದ್ರದ ಅನುದಾನದ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದ ಸಿದ್ದರಾಮಯ್ಯ ಅವರು, ಬೆಂಗಳೂರು ನಗರದ ಜನರಿಗೆ ಸುಗಮ ಸಂಚಾರ ಸೌಲಭ್ಯ ಕಲ್ಪಿಸುವ ಸಬ್ ಅರ್ಬನ್ ರೈಲು ಯೋಜನೆಯು ಕೇಂದ್ರ ಸರ್ಕಾರದ ಅನುದಾನವಿಲ್ಲದೆ ಇನ್ನೂ ಕನ್ನಡಿಗರ ಕನಸಾಗಿಯೇ ಉಳಿದಿದೆ. ಪ್ರಧಾನಿ ಮೋದಿ ಅವರೇ, ಯಾಕೆ ಕನ್ನಡಿಗರಿಗೆ ಭರವಸೆ ನೀಡಿ ಈ ರೀತಿ ಪದೇ ಪದೇ ವಂಚಿಸುತ್ತಿದ್ದೀರಿ? ಕೇಂದ್ರ ಬಿಜೆಪಿ ಸರ್ಕಾರ ಕರ್ನಾಟಕದ ಮೇಲೆ ಸೇಡು ತೀರಿಸಿಕೊಳ್ಳುತ್ತಿದೆಯೇ? ಇದು ನನ್ನ ಪ್ರಶ್ನೆ ಮಾತ್ರವಲ್ಲ, ನಾಡಿನ ಆರೂವರೆ ಕೋಟಿ ಸ್ವಾಭಿಮಾನಿ ಕನ್ನಡಿಗರ ಪ್ರಶ್ನೆ ಎಂದಿದ್ದರು.
Web Stories