ಮಂಡ್ಯ: ಸಕ್ಕರೆ ನಾಡು ಮಂಡ್ಯ (mandya) ಗೆ ಶುಕ್ರವಾರ ಕೇಂದ್ರ ಗೃಹ ಸಚಿವ ಅಮಿತ್ ಶಾ (AmitShah) ಆಗಮಿಸುತ್ತಿರುವ ಹಿನ್ನೆಲೆ ಮಂಡ್ಯ ನಗರವನ್ನು ಬಿಜೆಪಿ (BJP) ಮುಖಂಡರು ಕೇಸರಿ ಮಯವಾಗಿ ಮಾಡಿದ್ದಾರೆ. ಜೊತೆಗೆ ಅಮಿತ್ ಶಾ ಅವರನ್ನು ಸ್ವಾಗತಿಸಿ ಹಾಕಿದ ಫ್ಲೆಕ್ಸ್ ನಲ್ಲಿ ಸ್ವಾಭಿಮಾನಿ ಸಂಸದೆ ಸುಮಲತಾ ಅಂಬರೀಶ್ (Sumalatha Ambareesh) ಫೋಟೋ ರಾರಾಜಿಸುತ್ತಿದೆ.
Advertisement
ಹೌದು. ರಸ್ತೆಯ ಇಕ್ಕೆಲಗಳಲ್ಲಿ ಬಿಜೆಪಿ ಬಾವುಟ ಹಾರಾಡುತ್ತಿದ್ದು, ನಾಯಕರು ಅಮಿತ್ ಶಾಗೆ ಸ್ವಾಗತ ಕೋರುವ ಫ್ಲೆಕ್ಸ್ ಗಳು ಕೂಡ ರಾರಾಜಿಸುತ್ತಿವೆ. ಅಮಿತ್ ಶಾ ಗೆ ಸ್ವಾಗತ ಕೋರಿದ ಫ್ಲೆಕ್ಸ್ ನಲ್ಲಿ ಸ್ವಾಭಿಮಾನಿ ಸಂಸದೆ ಸುಮಲತಾ ಭಾವಚಿತ್ರವಿರುವುದು ಗಮನಸೆಳೆದಿದೆ. ಇದನ್ನೂ ಓದಿ: ಪಹಣಿ ತಿದ್ದುಪಡಿಗೆ 5,000 ಲಂಚ ಪಡೆದ ಅಧಿಕಾರಿ – ವೀಡಿಯೋ ಮಾಡಿ ಹರಿಬಿಟ್ಟ ರೈತರು
Advertisement
Advertisement
ಸಂಸದೆ ಆಪ್ತ ಇಂಡವಾಳು ಸಚ್ಚಿದಾನಂದ (Indavalu Sacchidananda) ಸ್ವಾಗತ ಕೋರಿರುವ ಫ್ಲೆಕ್ಸ್ ನಲ್ಲಿ ಸುಮಲತಾ ಫೋಟೋ ಹಾಕಲಾಗಿದೆ. ಸುಮಲತಾ ಅನುಮತಿ ಪಡೆದೆ ಬಿಜೆಪಿ ಸೇರಿರುವುದಾಗಿ ಹೇಳಿದ್ದ ಸಚ್ಚಿದಾನಂದ, ಇದೀಗ ಆಪ್ತ ಕೋರಿರುವ ಫ್ಲೆಕ್ಸ್ ನಲ್ಲಿ ಸುಮಲತಾ ರಾರಾಜಿಸುತ್ತಿದ್ದಾರೆ. ನಾಳೆ 11 ಗಂಟೆಗೆ ಮಂಡ್ಯಗೆ ಹೆಲಿಕಾಪ್ಟರ್ ಮೂಲಕ ಬರಲಿರುವ ಶಾ, 11.15ಕ್ಕೆ ಗೆಜ್ಜಲಗೆರೆಯ ಮನ್‍ಮುಲ್‍ನ ಮೆಗಾ ಡೈರಿ ಉದ್ಘಾಟನೆ ಮಾಡಲಿದ್ದಾರೆ.
Advertisement
ಈ ಹಿನ್ನೆಲೆಯಲ್ಲಿ ಮಂಡ್ಯ ಎಲ್ಲಾ ರಸ್ತೆಗಳು ಕೇಸರಿ ಮಯವಾಗಿದೆ. ಮಂಡ್ಯ ವಿವಿ ಆವರಣದಲ್ಲಿ ನಡೆಯುವ ಬಿಜೆಪಿ ಜನ ಸಂಕಲ್ಪ ಯಾತ್ರೆಗೆ ಬೃಹತ್ ವೇದಿಕೆ ಸಿದ್ಧವಾಗುತ್ತಿದೆ. ಜರ್ಮನ್ ಟೆಂಟ್ ಮೂಲಕ ನಿರ್ಮಾಣವಾಗುತ್ತಿದ್ದು, 1 ಲಕ್ಷ ಮಂದಿ ಸೇರಿಸುವ ಗುರಿಯನ್ನು ಬಿಜೆಪಿ ನಾಯಕರು ಹೊಂದಿದ್ದಾರೆ.