ಚಾಮರಾಜನಗರ: (Chamarajanagara) ಹೊರಗಿನಿಂದ ಬಂದವರಿಗೆ ಟಿಕೆಟ್ ನೀಡುವುದಕ್ಕೆ ಬಿಜೆಪಿ (BJP) ಸಂಸದ ಶ್ರೀನಿವಾಸ್ ಪ್ರಸಾದ್ (Srinivas Prasad) ವಿರೋಧ ವ್ಯಕ್ತಪಡಿಸಿದರು.
ನಗರದಲ್ಲಿ ಜಿಲ್ಲಾ ಬಿಜೆಪಿ ಕಾರ್ಯಕಾರಿಣಿ ಸಭೆ ನಡೆಯಿತು. ನಗರದ ಅಂಬೇಡ್ಕರ್ ಭವನದಲ್ಲಿ ಆಯೋಜಿಸಲಾಗಿದ್ದ ಕಾರ್ಯಾಕಾರಿಣಿ ಸಭೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಹಾಗೂ ಸಂಸದ ವಿ.ಶ್ರೀನಿವಾಸ್ ಪ್ರಸಾದ್ ಉದ್ಘಾಟಿಸಿದರು. ಇದನ್ನೂ ಓದಿ: ಕಾಂಗ್ರೆಸ್‌ನಿಂದ `ಸಿಎಂ ಅಂಕಲ್’ ಅಭಿಯಾನ – ಭುಗಿಲೆದ್ದ ಕೇಸರಿ ವಿವಾದ, ಸರ್ಕಾರಕ್ಕೆ ಹಲವು ಪ್ರಶ್ನೆ
Advertisement
Advertisement
ಹೊರಗಿನಿಂದ ಬಂದವರಿಗೆ ಟಿಕೆಟ್ ನೀಡಲು ಸಂಸದ ವಿ.ಶ್ರೀನಿವಾಸ ಪ್ರಸಾದ್ ಇದೇ ವೇಳೆ ವಿರೋಧ ವ್ಯಕ್ತಪಡಿಸಿದರು. ನಮ್ಮ ಅಭಿಪ್ರಾಯ ಪರಿಗಣಿಸದಿದ್ದರೆ ಅವರು ಅನುಭವಿಸಬೇಕಾಗುತ್ತದೆ ಎಂದು ಖಡಕ್ ವಾರ್ನಿಂಗ್ ನೀಡಿದ ಅವರು, ಕ್ಷೇತ್ರದಲ್ಲಿ ಹಗಲು ರಾತ್ರಿ ಯಾರೂ ಕೆಲಸ ಮಾಡಿದ್ದಾರೆ ಎಂದು ನನಗೆ ಗೊತ್ತಿದೆ. ಯಾರು ಹೋರಾಟ ಮಾಡಿದ್ದಾರೆ, ಯಾರು ಪಕ್ಷ ಸಂಘಟನೆ ಮಾಡಿದ್ದಾರೆ ಅವರನ್ನು ಆಯ್ಕೆ ಮಾಡುವ ಬಗ್ಗೆ ಹೈಕಮಾಂಡ್ ಚಿಂತನೆ ನಡೆಸಬೇಕು ಎಂದು ತಿಳಿಸಿದರು.
Advertisement
ಸಿದ್ದರಾಮಯ್ಯ (Siddaramaiah) ಸ್ಪರ್ಧೆ ಕುರಿತು ಮಾತನಾಡಿದ ಅವರು, ಕೋಲಾರ ಸೇಫೆಸ್ಟ್ ಪ್ಲೇಸ್. ಅಲ್ಲಿ ಆರಾಮಾಗಿ ಗೆದ್ದು ಬರಬಹುದು ಅಂತ ಸಿದ್ದರಾಮಯ್ಯ ಅಲ್ಲಿಗೆ ಹೋಗಿದ್ದಾರೆ. ಸಿದ್ದರಾಮಯ್ಯ ಕೋಲಾರದಲ್ಲಿ ನಿಂತಾಯ್ತು. ದೇವಸ್ಥಾನ, ಮಸೀದಿ, ಚರ್ಚ್ ಎಲ್ಲಾ ಕಡೆ ಹೋಗಿದ್ದಾರೆ. ಸುರಕ್ಷಿತ ಸ್ಥಳ ಹುಡುಕಿ, ಹುಡುಕಿ ಕೊನೆಗೆ ಕೋಲಾರಕ್ಕೆ ಹೋಗಿದ್ದಾರೆ ಎಂದು ವ್ಯಂಗ್ಯವಾಡಿದರು. ಇದನ್ನೂ ಓದಿ: ಕೋಲಾರದಲ್ಲಿ ಸಿದ್ದರಾಮಯ್ಯಗೆ ಒಳ್ಳೆಯದಾಗಲ್ಲ: ಸುಧಾಕರ್
Advertisement
ಸುರಕ್ಷಿತ ಇಲ್ಲದಿದ್ರೆ ಬಾದಾಮಿ, ಚಾಮುಂಡೇಶ್ವರಿಯಲ್ಲಿ ಯಾಕೆ ನಿಲ್ಲಲಿಲ್ಲ? ಚಾಮರಾಜಪೇಟೆಯನ್ನು ನೋಡಿ ಆಗಿದೆ, ಹುಣಸೂರು ಆಯ್ತು, ಚಿಕ್ಕನಾಯಕನಹಳ್ಳಿ ಆಯ್ತು. ಕೊನೆಗೆ ಕೋಲಾರ ಸುರಕ್ಷಿತ ಅಂತ ಹೋಗಿದ್ದಾರೆ. ಕೋಲಾರದಲ್ಲಿ ಕುರುಬರು ಮುಸ್ಲಿಮರ ಮತ ಹೆಚ್ಚಾಗಿವೆ. ಹಾಗಾಗಿ ಸುಲಭವಾಗಿ ಗೆದ್ದು ಸಿಎಂ ಆಗಬಹುದು ಅಂತ ಅಲ್ಲಿಗೆ ಹೋಗಿದ್ದಾರೆ ಎಂದು ಕುಟುಕಿದರು.