ChikkaballapurDistrictsKarnatakaLatestMain Post

ಕೋಲಾರದಲ್ಲಿ ಸಿದ್ದರಾಮಯ್ಯಗೆ ಒಳ್ಳೆಯದಾಗಲ್ಲ: ಸುಧಾಕರ್

ಚಿಕ್ಕಬಳ್ಳಾಪುರ: ಕೋಲಾರದಲ್ಲಿ (Kolar) ಸಿದ್ದರಾಮಯ್ಯಗೆ (Siddaramaiah) ಒಳ್ಳೆಯದು ಆಗಲ್ಲ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ (Sudhakar) ಭವಿಷ್ಯ ನುಡಿದಿದ್ದಾರೆ.

ಕೋಲಾರ ಕ್ಷೇತ್ರದಿಂದ ಸಿದ್ದರಾಮಯ್ಯ ಸ್ಪರ್ಧಿಸುವ ಸಾಧ್ಯತೆ ವಿಚಾರಕ್ಕೆ ಸಂಬಂಧಿಸಿದಂತೆ ಚಿಕ್ಕಬಳ್ಳಾಪುರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಂವಿಧಾನದ ಪ್ರಕಾರ ಯಾರು ಎಲ್ಲಿ ಬೇಕಾದರೂ ಸ್ಪರ್ಧೆ ಮಾಡಬಹುದು. ಆದರೆ ನನಗೀರುವ ರಾಜಕೀಯ ಅನುಭವದ ಪ್ರಕಾರ ಕೋಲಾರದಲ್ಲಿ ಸಿದ್ದರಾಮಯ್ಯಗೆ ನಿಜವಾಗಿಯೂ ಒಳ್ಳೆಯದು ಆಗಲ್ಲ. ಸಿದ್ದರಾಮಯ್ಯಗೆ ಗೆಲುವು ಬಹಳ ಕಠಿಣ ಆಗಲಿದೆ ಎಂದಿದ್ದಾರೆ. ಇದನ್ನೂ ಓದಿ: ಬಿಜೆಪಿ ಮುಖಂಡನ ಮರ್ಮಾಂಗಕ್ಕೆ ಚಾಕು ಇರಿದು, ಕತ್ತಿಗೆ ಹಗ್ಗ ಬಿಗಿದು ಕೊಲೆ

ಇದೇ ವೇಳೆ ನಾನು ಸಿಎಂ ಆಗಬೇಕು ಅಂದರೆ ಕಾಂಗ್ರೆಸ್‍ಗೆ ವೋಟು ಮಾಡಿ ಎಂಬ ಸಿದ್ದರಾಮಯ್ಯ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಸಿದ್ದರಾಮಯ್ಯ ಸಿಎಂ ಅಭ್ಯರ್ಥಿ ಅಂತ ಕಾಂಗ್ರೆಸ್ ಹೈಕಮಾಂಡ್ ಹೇಳಲಿ, ಇಲ್ಲ ಮಲ್ಲಿಕಾರ್ಜುನ ಖರ್ಗೆಯವರು ಸಿದ್ದರಾಮಯ್ಯ ಸಿಎಂ ಅಭ್ಯರ್ಥಿ ಅಂತ ಹೇಳಲಿ. ಸ್ವಯಂ ಘೋಷಿತವಾಗಿ ಸಿದ್ದರಾಮಯ್ಯ ಘೋಷಣೆ ಮಾಡಿಕೊಂಡರೆ ಆಗಲ್ಲ. ಪಕ್ಷ ಘೋಷಣೆ ಮಾಡದೇ ಹೊರತು ಸ್ವಯಂಘೋಷಣೆಗೆ ಮಾನ್ಯತೆ ಇಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: 7,600 ಶಾಲಾ ಕೊಠಡಿಗಳ ಮುಂದೆ ವಿವೇಕಾನಂದ ಭಾವಚಿತ್ರ ಮುದ್ರಿಸಲು ಸರ್ಕಾರ ಪ್ಲ್ಯಾನ್‌

Live Tv

Leave a Reply

Your email address will not be published. Required fields are marked *

Back to top button