ಬೆಂಗಳೂರು: ತಣ್ಣಗಾಗಿದ್ದ ಮಂಗಳೂರು ಗಲಭೆ ವಿಚಾರ ಮತ್ತೆ ರಾಜಕೀಯ ಕೆಸರೆರಚಾಟಕ್ಕೆ ಕಾರಣವಾಗಿದೆ. ಗಲಭೆ ಸಂಬಂಧ ಪೊಲೀಸರು ದೃಶ್ಯವಾವಳಿಗಳನ್ನ ಬಿಡುಗಡೆ ಮಾಡಿದರು. ಆದರೆ ಇದೀಗ ಬಹಳ ದಿನಗಳ ಬಳಿಕ ಪೊಲೀಸರ ವಿರುದ್ಧ ದೃಶ್ಯಗಳನ್ನು ಬಿಡುಗಡೆ ಮಾಡಿರೋದು ಬಿಜೆಪಿ ಆಕ್ರೋಶಕ್ಕೆ ಕಾರಣವಾಗಿದೆ. ಹೆಚ್‍ಡಿಕೆ ಸಿ.ಡಿ ಬಿಡುಗಡೆ ಬೆನ್ನಲ್ಲೇ ಬಿಜೆಪಿ ನಾಯಕರು ವಾಗ್ಬಾಣ ಪ್ರಯೋಗಿಸಿದ್ದಾರೆ.
ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಸಂಸದೆ ಶೋಭಾ ಕರಂದ್ಲಾಜೆ, ಕುಮಾರಸ್ವಾಮಿ ಸಿ.ಡಿ ಪ್ರಿಯರು. ಹಲವಾರು ವರ್ಷಗಳಲ್ಲಿ ಆರೇಳು ಸಿ.ಡಿಗಳನ್ನು ಬಿಡುಗಡೆ ಮಾಡಿದ್ದಾರೆ. ಯಾವುದನ್ನೂ ತುದಿ ಮುಟ್ಟಿಸಲು ಆಗಿಲ್ಲ. ಕುಮಾರಸ್ವಾಮಿ ಬಿಡುಗಡೆ ಮಾಡಿದ ಸಿ.ಡಿ ಕಟ್ ಆ್ಯಂಡ್ ಪೇಸ್ಟ್. ಸಿ.ಡಿ ಎಲ್ಲಿ ತಯಾರಾಯ್ತು..? ಕೇರಳದಿಂದ ಬಂತೋ..? ಜೆಎನ್ ಯು ನಿಂದ ಬಂತೋ..? ಈ ಬಗ್ಗೆ ತನಿಖೆ ಆಗಬೇಕು ಎಂದು ಒತ್ತಾಯಿಸಿದರು. ಇದನ್ನೂ ಓದಿ: ಮಂಗ್ಳೂರನ್ನು ‘ಕಾಶ್ಮೀರ’ ಮಾಡಲು ಹೊರಟಿದೆ, ಇದನ್ನು ತೋರಿಸಲು 35 ವಿಡಿಯೋ ರಿಲೀಸ್ – ‘ಸಿಡಿ’ದ ಎಚ್‍ಡಿಕೆ
Advertisement
Advertisement
ಅಷ್ಟೇ ಅಲ್ಲ ಕುಮಾರಸ್ವಾಮಿಗೂ ಮಂಗಳೂರಿಗೆ ಏನು ಸಂಬಂಧ..? ಅಂತ ಖಾರವಾಗಿಯೇ ಪ್ರಶ್ನಿಸಿದ್ರು. ಚುನಾವಣೆಗೆ ಇನ್ನೂ ಮೂರೂವರೆ ವರ್ಷ ಇದೆ. ಚುನಾವಣೆ ಬಂದಾಗ ಸಿ.ಡಿ ಬಿಡುಗಡೆ ರಾಜಕಾರಣ ಮಾಡಿ. ಆದರೆ ನೀವು ಪೊಲೀಸರ ನೈತಿಕ ಸ್ಥೈರ್ಯ ಕುಗ್ಗಿಸಬೇಡಿ. ಈಗ ಕೆಲಸ ಮಾಡುತ್ತಿರುವ ಪೊಲೀಸ್ ಕಮಿಷನರ್ ನಿಮ್ಮ ಕೆಳಗೆ ಕೆಲಸ ಮಾಡಿದವರು ಎಂದು ವಾಗ್ದಾಳಿ ನಡೆಸಿದ್ರು. ಇದನ್ನೂ ಓದಿ: ಶಾಂತವಾಗಿರೋ ಮಂಗ್ಳೂರನ್ನು ಮತ್ತೆ ಕೆಣಕಿದ್ದಾರೆ- ಹೆಚ್‍ಡಿಕೆ ವಿರುದ್ಧ ಬೊಮ್ಮಾಯಿ ವಾಗ್ದಾಳಿ
Advertisement
ಮೆಕ್ಕಾ, ಮದೀನಾಕ್ಕೆ ಹೋದರೆ ಸೈತಾನರಿಗೆ ಕಲ್ಲು ಬಿಸಾಕುತ್ತಾರೆ. ಇಲ್ಲಿ ಮುಸುಕುಧಾರಿಗಳು ಕಲ್ಲು ಎಸೆಯುತ್ತಾರೆ. ಹಾಗಾದರೆ ಇಲ್ಲಿ ಯಾರು ಸೈತಾನರು ಕುಮಾರಸ್ವಾಮಿ ಅವರೇ..? ನೀವು ವಿದೇಶದಲ್ಲಿ ಕಾಲ ಕಳೆಯುತ್ತಿದ್ದವರು. ವಿದೇಶದಲ್ಲಿ ಇದ್ರಿ ತಾವು. ನಿಮಗೆ ಮಂಗಳೂರಿನಲ್ಲಿ ಬೇಸ್ ಇಲ್ಲ. ಆ ಬೇಸ್ ಸಿಗಲು ನಾವು ಬಿಡೋದಿಲ್ಲ ಅಂತ ಸಂಸದೆ ಹೆಚ್‍ಡಿಕೆಗೆ ಟಾಂಗ್ ಕೊಟ್ಟರು.