ಬೆಂಗಳೂರು: ಮಹಿಳೆಯರಿಗೆ ಆಗಿರುವ ಅನ್ಯಾಯ ಕಾನೂನು ಅಡಿಯಲ್ಲಿ ನ್ಯಾಯ ಸಿಗಬೇಕು. ಯಾರಿಗೇ ಆಗಲಿ ಕಾನೂನಿನ ಅಡಿಯಲ್ಲಿ ನ್ಯಾಯ ಪಡೆಯುವ ಹಕ್ಕು ಇದೆ ಅಂತ ಹೇಳುವ ಮೂಲಕ ಸಂಸದೆ ಶೋಭಾ ಕರಂದ್ಲಾಜೆ ಅವರು ಮಿಟೂ ಅಭಿಯಾನವನ್ನು ಸ್ವಾಗತಿಸಿದ್ದಾರೆ.
ನಗರದ ಬಿಜೆಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಟಿಯ ವೇಳೆ ರಾಷ್ಟ್ರವ್ಯಾಪಿ ಹರಡಿರುವ ಮಿಟೂ ಅಭಿಯಾನದ ಬಗ್ಗೆ ಮಾತನಾಡಿದ್ರು. ಕಾನೂನಿನ ಅಡಿಯಲ್ಲಿ ಮಹಿಳೆಯರಿಗೆ ನ್ಯಾಯ ಸಿಗಬೇಕು. ಕಾನೂನಿನಲ್ಲಿ ಮಹಿಳೆಯರಿಗೆ ನ್ಯಾಯ ಪಡೆಯುವ ಹಕ್ಕು ಇದೆ. ಈ ಮೂಲಕ ಅವರು ತಮ್ಮ ಅನ್ಯಾಯ ಹೊರಗಡೆ ಹಾಕುತ್ತಿದ್ದಾರೆ ಅಂತ ಹೇಳಿದ್ರು.
Advertisement
ಈ ಹಿಂದೆಯೂ ಜಿಲ್ಲೆಗಳಲ್ಲಿ ಎಸ್ಪಿ ಕಚೇರಿಯಲ್ಲಿ ದೂರು ಕೇಂದ್ರ ತೆರೆಯಲಾಗಿತ್ತು. ನ್ಯಾಯ ಪಡೆಯಲು ಬೇರೆ ಬೇರೆ ವೇದಿಕೆಗಳಿವೆ. ತಪ್ಪಿತಸ್ಥರು ಯಾರು ಅಂತಾ ತನಿಖೆ ಮಾಡಿ ಕಾನೂನಿನಡಿ ಕ್ರಮ ಕೈಗೊಳ್ಳಬೇಕು. ಇದರ ಬಗ್ಗೆ ನನಗೆ ಹೆಚ್ಚಿನ ಮಾಹಿತಿ ಇಲ್ಲ. ಯಾವುದೇ ಹೆಣ್ಣು ಮಕ್ಕಳಿಗೆ ಅನ್ಯಾಯವಾದರೆ ಹೇಳಿಕೊಳ್ಳಲು ವೇದಿಕೆ, ಸಂಸ್ಥೆ, ಕಾನೂನು ಇದೆ ಅಂದ್ರು.
Advertisement
ಏನಿದು ಅಭಿಯಾನ?:
ಬಾಲಿವುಡ್ ನಟಿ ತನುಶ್ರೀ ದತ್ತ ಲೈಂಗಿಕ ಕಿರುಕುಳ ಆರೋಪದ ನಂತರ ದೇಶದಲ್ಲಿ ಮಿ ಟೂ ಅಭಿಯಾನ ಚುರುಕುಗೊಂಡಿದೆ. ಈ ಅಭಿಯಾನದಲ್ಲಿ ಪುರುಷರಿಂದ ಲೈಂಗಿಕ ಕಿರುಕುಳಕ್ಕೆ ಒಳಗಾದ ಮಹಿಳೆಯರು #ಮಿಟೂ ಅಭಿಯಾನದ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಆರೋಪಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಚಿತ್ರ ನಟಿಯರು, ಕ್ರೀಡಾಪಟುಗಳು ಹಾಗೂ ಇತರ ಮಹಿಳೆಯರು ತಮಗೆ ಆದಂತಹ ಲೈಂಗಿಕ ಕಿರುಕುಳದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ದನಿಯೆತ್ತುತ್ತಿದ್ದಾರೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv