ದಾವಣಗೆರೆ: ತಾಕತ್ ಇದ್ರೆ ನನ್ನನ್ನು ಮುಟ್ಟಿ, ಅದನ್ನು ಬಿಟ್ಟು ನನ್ನ ಮಗನನ್ನು ಬಲಿ ಪಡೆದಿದ್ದು ಸರಿಯಲ್ಲ ಎಂದು ಶಾಸಕ ಎಂ.ಪಿ. ರೇಣುಕಾಚಾರ್ಯ (MP Renukacharya) ವಾಗ್ದಾಳಿ ನಡೆಸಿದರು.
ಚಂದ್ರು (Chandrashekar) ಸಾವಿನ ಪ್ರಕರಣ ದಿನೇ ದಿನೇ ರೋಚಕ ಟ್ವಿಸ್ಟ್ ಪಡೆದುಕೊಳ್ಳುತ್ತಿದ್ದು, ಈ ಬಗ್ಗೆ ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ಅವರು, ತಾಕತ್ ಇದ್ದರೆ ನನ್ನನ್ನು ಮುಟ್ಟಿಕೊಳ್ಳಿ, ಅದನ್ನು ಬಿಟ್ಟು ನನ್ನ ಮಗನನ್ನು ಬಲಿ ಪಡೆದುಕೊಳ್ಳುವುದು ಸರಿಯಲ್ಲ. ನನ್ನ ಹಿಂದೆ ಸರ್ಕಾರ, ನನ್ನ ಕ್ಷೇತ್ರದ ಜನರು ಇದ್ದಾರೆ. ನನ್ನ ಕ್ಷೇತ್ರದ ಜನರು ವಜ್ರದ ಕವಚದಂತೆ ಇದ್ದಾರೆ. ನನಗೆ ಕೊಲೆ ಬೆದರಿಕೆ ಬಂದಿರುವ ಆಡಿಯೋ ಇದೆ. ನಂಬರ್ ಸಹಿತ ದೂರು ಕೂಡ ನೀಡಿದ್ದೆ. ಆದರೆ ನಾನು ನಿನ್ನೆ ಮಾಧ್ಯಮಗಳಲ್ಲಿ ಹೇಳಿದ ಕೂಡಲೇ ವಿಚಾರಣೆಗೆ ತೆರೆದಿದ್ದಾರೆ ಎಂದು ಕಿಡಿಕಾರಿದರು.
ಮಾಧ್ಯಮಗಳಲ್ಲಿ ಮಾತನಾಡಿದಾಗ ತನಿಖೆ ಕೈಗೆತ್ತುಕೊಂಡಿದ್ದಾರೆ. ಇದರಲ್ಲೇ ಗೊತ್ತಾಗುತ್ತೆ ಎಷ್ಟು ವೈಫಲ್ಯ ಇದೆ ಎಂದು. ಜನಪ್ರತಿನಿಧಿಗಳಿಗೆ ರಕ್ಷಣೆ ಇಲ್ಲದ ಕಡೆ ಜನರಿಗೆ ಯಾವ ರಕ್ಷಣೆ ಇದೆ ಎಂದು ಜನರು ಕೇಳ್ತಾರೆ. ಪಂಚನಾಮೆ ಮಾಡುವಾಗ ಕುಟುಂಬಸ್ಥರನ್ನು ಕರೆಯಬೇಕಿತ್ತು. ಇದು ಪೊಲೀಸರ ನಿರ್ಲಕ್ಷ್ಯಕ್ಕೆ ಒಂದು ಉದಾಹರಣೆಯಾಗಿದೆ ಎಂದು ಆರೋಪಿಸಿದರು.
ತನಿಖೆ ಪ್ರಗತಿಯಲ್ಲಿರುವಾಗ ಉನ್ನತ ಮಟ್ಟದ ಅಧಿಕಾರಿಗಳು ಗೌಪ್ಯತೆ ಕಾಪಾಡಬೇಕಿತ್ತು. ಆದರೆ ಗೌಪ್ಯತೆ ಕಾಪಾಡದೇ ಮಾತನಾಡಿದ್ದು ಜನರ ಅನುಮಾನಕ್ಕೆ ಕಾರಣವಾಗಿದೆ. ನನ್ನ ಸಹೋದರ ಹೇಳಿದ ಬಗ್ಗೆ ನಾನು ಮಾತನಾಡುವುದಿಲ್ಲ. ತನಿಖೆ ನಡೆಯುತ್ತಿದೆ, ಅದರ ಸತ್ಯಾಸತ್ಯತೆ ತಿಳಿಯಲಿದೆ. ನಮ್ಮ ಮಗ ಆತ್ಮಹತ್ಯೆ ಮಾಡಿಕೊಳ್ಳುವ ಯುವಕನಲ್ಲ ಎಂದರು. ಇದನ್ನೂ ಓದಿ: ಸಾವಿಗೂ ಮುನ್ನ ಕ್ಲಾಸ್‍ಮೇಟ್‍ಗಳ ಭೇಟಿಗೆ ಹಾತೊರೆದಿದ್ದ ಚಂದ್ರಶೇಖರ್!
ಇನ್ನರ್ ವೇರ್ ಇರ್ಲಿಲ್ಲ, ಆತನ ಕಿವಿ ಕಚ್ಚಿದ್ದಾರೆಂದು ಚಂದ್ರು ತಂದೆ ರಮೇಶ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಆ ರೀತಿ ಮಾತನಾಡಬಾರದು. ತನಿಖೆ ಪೂರ್ಣಗೊಂಡ ನಂತರ ಅದರ ಬಗ್ಗೆ ಮಾತನಾಡುತ್ತೇವೆ. ಕಿರಣ್‍ನನ್ನು ಸರಿಯಾದ ರೀತಿಯಲ್ಲಿ ತನಿಖೆ ನಡೆಸಿಲ್ಲ. ಬೇಕಾಬಿಟ್ಟಿ ವಿಚಾರಣೆ ನಡೆಸಿ ಬಿಟ್ಟು ಕಳಿಸಿದ್ದಾರೆ ಎಂದು ಆರೋಪಿಸಿದರು. ಇದನ್ನೂ ಓದಿ: ಚಂದ್ರು ಕಾರು ಅಪಘಾತ ಆಗಿರೋದು ನಿಜ: FSL ತಜ್ಞ