ವಿಜಯಪುರ: ನಗರದ ಐಶ್ವರ್ಯ ನಗರದ ಸಾಯಿ ಕಲ್ಯಾಣ ಮಂಟಪದಲ್ಲಿ ನಡೆದ ಬಿಜೆಪಿ ಜಿಲ್ಲಾ ಕಾರ್ಯಕಾರಣಿ ಸಭೆಯಲ್ಲೇ ವಿಜಯಪುರ ಸಂಸದ ಜಿಗಜಿಣಗಿ ಬಹಿರಂಗವಾಗಿ ಅಸಮಧಾನ ಹೊರಹಾಕಿದ್ದಾರೆ.
45 ವರ್ಷ ನನ್ನ ರಾಜಕಾರಣ ಇದೆ. ನನ್ನ ಪಕ್ಷ ನನ್ನ ಯಾಕೆ ಉಪಯೋಗ ಮಾಡಿಕೊಂಡಿಲ್ಲ ಅನ್ನೋ ನೋವು ನನಗಿದೆ. ನನ್ನ ಮೇಲೆ ಈ ವಕ್ರ ದೃಷ್ಟಿ ಏಕೆ. ನನ್ನ ಸ್ವಲ್ಪ ರಾಜ್ಯದ ತುಂಬ ಓಡಾಡಲು ಬಿಟ್ರೆ ಏನಾದ್ರು ಆಗುತ್ತಾ ಎಂದು ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: ಅಧ್ಯಕ್ಷ ಸ್ಥಾನಕ್ಕೆ ನವಜೋತ್ ಸಿಂಗ್ ಸಿಧು ರಾಜೀನಾಮೆ
Advertisement
Advertisement
ಇದು ನನ್ನ ಅಭಿಪ್ರಾಯ. ಇದನ್ನ ನೀವು ಹಿತಿಯ ನಾಯಕರಿಗೆ ತಿಳಿಸಲೆಬೇಕೆಂದು ಕಾರ್ಯಕಾರಣಿ ಸಭೆಗೆ ಬಂದಿದ್ದ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಟೆಂಗಿನಕಾಯಿ ಅವರಿಗೆ ವೇದಿಕರ ಮೇಲೆ ಸೂಚಿಸಿದ್ದಾರೆ. ನಾನು ಬಹಳ ಸಲ ಹೇಳಬೇಕು ಅಂತಾ ಅನ್ಕೊಂಡಿದ್ದೇನೆ ಆಗಿಲ್ಲ ಎಂದರು. ಇದನ್ನೂ ಓದಿ: ಆಗಾಗ ‘ಸಿಕ್ಸರ್’ ಹೇಳಿಕೆ ನೀಡಿ ಕೊನೆಗೂ ಕ್ಯಾಪ್ಟನನ್ನು ಕೆಳಗೆ ಇಳಿಸಿದ ಸಿಧು
Advertisement
ರಾಜ್ಯದ ಯಾವೊಬ್ಬ ಮುಖಂಡರು ಇದುವರೆಗೂ ಇಂತಹ ಕೆಲಸ ಮಾಡು ಅಂತಾ ಪಕ್ಷದ ಜವಾಬ್ದಾರಿ ಕೊಟ್ಟಿಲ್ಲ ಎಂದು ರಾಜ್ಯ ನಾಯಕರ ವಿರುದ್ದ ಬಹಿರಂಗ ಆಕ್ರೋಶ ಹೊರಹಾಕಿದ್ದಾರೆ.