ಮಡಿಕೇರಿ: ಬಿಜೆಪಿ ಕಾರ್ಯಕರ್ತರನ್ನು ಪೊಲೀಸ್ ಠಾಣೆಗೆ ಕರೆಸಿ ಮುಚ್ಚಳಿಕೆ ಬರೆಸುವ ಬದಲು, ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಅವರನ್ನು ಪೊಲೀಸರು ಠಾಣೆಗೆ ಕರೆಸಿ ಮುಚ್ಚಳಿಕೆ ಬರೆಸಬೇಕು ಎಂದು ಸಂಸದ ಪ್ರತಾಪ್ ಸಿಂಹ (Pratap Simmha) ಗುಡುಗಿದ್ದಾರೆ.
ಮಡಿಕೇರಿಯಲ್ಲಿ (Madikeri) ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ಆಡಳಿತಕ್ಕೆ ಬಂದು ಆರು ತಿಂಗಳ ಅವಧಿಯಲ್ಲಿ ಬಿಜೆಪಿ ಕಾರ್ಯಕರ್ತರಿಗೆ ಒಂದಲ್ಲ ಒಂದು ರೀತಿಯಲ್ಲಿ ಮಾನಸಿಕವಾಗಿ ಪೊಲೀಸರಿಂದ ತೊಂದರೆ ನೀಡಲಾಗುತ್ತಿದೆ. ಕಾಂಗ್ರೆಸ್‌ನಲ್ಲಿ ಆಗಿರುವ ಭ್ರಷ್ಟಾಚಾರದ ಬಗ್ಗೆ ಪೇಸ್‌ಬುಕ್‌ನಲ್ಲಿ ಬರೆದುಕೊಂಡರೆ ಪೊಲೀಸ್ ಠಾಣೆಗೆ ಕಾರ್ಯಕರ್ತರನ್ನು ಕರೆಸಿ ಮುಚ್ಚಳಿಕೆ ಬರೆಸುವ ಕೆಲಸವನ್ನು ಪೊಲೀಸರು ಮಾಡುತ್ತಿದ್ದಾರೆ. ಅದರ ಬದಲು, ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಅವರನ್ನು ಪೊಲೀಸ್ ಠಾಣೆಗೆ ಕರೆಸಿ ಮುಚ್ಚಳಿಕೆ ಬರೆಸಿಕೊಳ್ಳಲಿ ಎಂದು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ವಕೀಲನಾಗಿದ್ದರಿಂದಲೇ ಕಾನೂನು ಬಾಹಿರ ತನಿಖೆಯ ಆದೇಶ ವಾಪಸ್: ಸಿದ್ದರಾಮಯ್ಯ
Advertisement
42 ಕೋಟಿ ರೂ. ಕರ್ನಾಟಕದಿಂದ ಲೂಟಿ ಮಾಡಿ ತೆಲಂಗಾಣಕ್ಕೆ ಕಳಿಸಿಕೊಟ್ಟಿದ್ದಾರೆ ಎಂದು ನಮ್ಮ ಒಬ್ಬ ಕಾರ್ಯಕರ್ತ ಪೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಬಗ್ಗೆ ಕಾಂಗ್ರೆಸ್‌ನವರು ದೂರು ನೀಡಿದ್ದಾರೆ. ಅವರನ್ನು ಪೊಲೀಸ್ ಠಾಣೆಗೆ ಕರೆಸಿ ಯಾಕೆ ಪೋಸ್ಟ್ ಮಾಡಿದೆ? ಡಿಲಿಟ್ ಮಾಡು, ಮುಚ್ಚಳಿಕೆ ಬರೆದುಕೊಡು. ಇನ್ಮುಂದೆ ತಪ್ಪು ಮಾಡುವುದಿಲ್ಲ ಅಂತ ಎಂದು ಮುಚ್ಚಳಿಕೆ ಬರೆಸಿಕೊಂಡಿದ್ದಾರೆ. ಮರುದಿನವೇ ಮತ್ತೆ 10 ಗಂಟೆಗೆ ಬಾ ಎಂದು ತೊಂದರೆ ನೀಡಿದ್ದಾರೆ ಎಂದು ತಿಳಿಸಿದ್ದಾರೆ.
Advertisement
Advertisement
ನಾನು ವಿರಾಜಪೇಟೆ ಗ್ರಾಮಾಂತರ ಠಾಣೆಗೆ ಹೋಗಿ ನೇರವಾಗಿ ಕೇಳಿದ್ದೇನೆ. ಈ ರೀತಿಯ ಮುಚ್ಚಳಿಕೆ ಬರೆಸಿಕೊಳ್ಳಲು ಕಾನೂನಿನಲ್ಲಿ ಅವಕಾಶ ಇದ್ರೆ ಮೊದಲು ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಕರೆಸಿ ಮುಚ್ಚಳಿಕೆ ಬರೆಸಿಕೊಂಡು ಕಳಿಸಿ. ಕಾರಣ ಈ ಹಿಂದೆ ಬಿಜೆಪಿ ಸರ್ಕಾರ ಇರುವಂತಹ ಸಂದರ್ಭದಲ್ಲಿ ಅವರು ಮುಖ್ಯಮಂತ್ರಿ ಸೀಟ್ ಎರಡೂವರೆ ಕೋಟಿ ರೂ., ಬಿಡಿಎ ಛೇರ್ಮನ್ ನೂರು ಕೋಟಿ ರೂ., ಕಾವೇರಿ ನೀರಾವರಿ ನಿಗಮದ ಅದ್ಯಕ್ಷ ಸ್ಥಾನಕ್ಕೆ ಇಷ್ಟು ಕೋಟಿ ರೂ., ಡಿಸಿ ಪೋಸ್ಟ್‌ಗೆ ಇಷ್ಟು ಕೋಟಿ, ಎಸ್‌ಪಿ ಪೋಸ್ಟ್‌ಗೆ ಇಷ್ಟು. ಎಲ್ಲಾ ಪೇಪರ್‌ಗಳಲ್ಲಿ ಜಾಹೀರಾತು ಕೊಟ್ರು. ಪೇ ಸಿಎಂ ಎಂದು ಊರು ಊರಿಗೆ ತಮಟೆ ಹೊಡೆದಿದ್ದಾರೆ. ಆಗ 40% ಅಂತ ತಮಟೆ ಹೊಡೆದರು ಎಂದು ಕಾಂಗ್ರೆಸ್ ವಿರುದ್ಧ ಗುಡುಗಿದ್ದಾರೆ. ಇದನ್ನೂ ಓದಿ: ವಿಜಯೇಂದ್ರ ರಾಜ್ಯಾಧ್ಯಕ್ಷರಾದ ಬಳಿಕ ಕಾರ್ಯಕರ್ತರಲ್ಲಿ ಉತ್ಸಾಹ ತುಂಬಿ ತುಳುಕುತ್ತಿದೆ: ಬಿಎಸ್‍ವೈ
Advertisement
ಬಿಟ್ ಕಾಯಿನ್ ಅಂದ್ರು. ಅವರೇ ಅಧಿಕಾರಕ್ಕೆ ಬಂದು ಐದು ತಿಂಗಳಾಯ್ತು. ಒಂದರ ಬಗ್ಗೆ ಮಾತು ಇದೆಯಾ? ಮಾತಿಲ್ಲ. ಬರಿ ಊರಿಗೆಲ್ಲ ತಮಟೆ ಹೊಡೆದು ಬಾಯಿ ಬಡಿದುಕೊಂಡಿದ್ದು ಇವರಿಬ್ಬರು. ಅದರ ಬಗ್ಗೆ ನಾವು ಪೊಲೀಸರಿಗೆ ದೂರು ನೀಡಿದ್ದೇವೆ. ಹಾಗಾಗಿ ಅವರನ್ನು ಕರೆಸಿ ಮೊದಲು ಮುಚ್ಚಳಿಕೆ ಬರೆಸಿಕೊಳ್ಳಿ. ನಿಮಗೆ ಕಾನೂನಿನಲ್ಲಿ ಅವಕಾಶ ಇದ್ರೆ. ಅವರನ್ನು ಕರೆದು ಮುಚ್ಚಳಿಕೆ ಬರೆಸಿಕೊಳ್ಳಲಿಲ್ಲ ಅಂದ್ರೆ, ನಮ್ಮ ಕಾರ್ಯಕರ್ತರನ್ನು ಕರೆಸಿ ಮುಚ್ಚಳಿಕೆ ಬರೆಸಿಕೊಳ್ಳುವ ಸಾಹಸಕ್ಕೆ ಕೈ ಹಾಕಬೇಡಿ ಎಂದು ಪೊಲೀಸರಿಗೆ ಎಚ್ಚರಿಕೆ ನೀಡಿದ್ದಾರೆ.