– ಸಂಘರ್ಷಕ್ಕೂ ಸೈ.. ಹೊಡೆದಾಟಕ್ಕೂ ಸೈ ಎಂದ ಸಂಸದ
– ಮಹಿಷ ದಸರಾ ವಿರುದ್ಧ ಆಕ್ರೋಶ
ಮೈಸೂರು: ಮಹಿಷಾ ದಸರಾದಂತಹ (Mahisha Dasara) ವಿಕೃತಿಗಳನ್ನು ಈಗಲೇ ಸದೆ ಬಡಿಯಬೇಕು. ಇಲ್ಲದಿದ್ದರೆ ವೀರಪ್ಪನ್ ನಮ್ಮ ದೇವರು. ಮಲೆ ಮಹದೇಶ್ವರ ದೆವ್ವ ಎನ್ನುತ್ತಾರೆ ಎಂದು ಮಹಿಷ ದಸರಾ ಆಚರಿಸುವವರ ವಿರುದ್ಧ ಸಂಸದ ಪ್ರತಾಪ್ ಸಿಂಹ (Pratap Simha) ಕಿಡಿಕಾರಿದರು.
ನಗರದಲ್ಲಿ ಚಾಮುಂಡಿ ಬೆಟ್ಟ ಚಲೋ (Chamundi Betta Chalo) ಪೋಸ್ಟರ್ ಬಿಡುಗಡೆ ಮಾಡಿ ಮಾತನಾಡಿದ ಅವರು, ಮಹಿಷ ದಸರಾದಂಥ ವಿಕೃತಿಗಳನ್ನು ಈಗಲೇ ಸದೆಬಡಿಯಬೇಕು. ಇಲ್ಲದೆ ಇದ್ದರೆ ಮಲೆ ಮಹದೇಶ್ವರ ಬೆಟ್ಟಕ್ಕೆ ಹೋಗಿ ವೀರಪ್ಪನ್ ನಮ್ಮ ದೇವರು. ನಮ್ಮ ಮೂಲ ಪುರುಷ ಅಂತ ಹೇಳಿ ಮಲೈ ಮಹದೇಶ್ವರನನ್ನು ದೆವ್ವ ಮಾಡುತ್ತಾರೆ. ವೀರಪ್ಪನ್ ನಮ್ಮ ಮೂಲ ನಿವಾಸಿ. ಅವನು ಪ್ರಕೃತಿ ರಕ್ಷಕ ಅಂತ ಕಥೆ ಕಟ್ಟಿ ಮಲೆ ಮಹದೇಶ್ವರನನ್ನು ದೆವ್ವ ಮಾಡಿ ಬಿಡುತ್ತಾರೆ ಎಂದು ಟೀಕಿಸಿದರು. ಇದನ್ನೂ ಓದಿ: ಮಹಿಷ ದಸರಾ ಆಚರಣೆಗೆ 50 ವರ್ಷ; ಚರ್ಚೆ ಹುಟ್ಟುಹಾಕಿದ ಆಹ್ವಾನ ಪತ್ರಿಕೆ
ಅ.13 ರಂದು ಬೆಳಗ್ಗೆ 8 ಗಂಟೆಗೆ ಚಲೋ ಚಾಮುಂಡಿ ಬೆಟ್ಟ ಜಾಥಾ ನಡೆಸಲಾಗುವುದು. ಐದು ಸಾವಿರಕ್ಕೂ ಹೆಚ್ಚು ಜನ ಜಾಥಾದಲ್ಲಿ ಭಾಗಿಯಾಗಲಿದ್ದಾರೆ. ಚಾಮುಂಡಿಗೆ ಪೂಜೆ ಮಾಡಿ ಮಹಿಷಾಸುರನ ಮುಂದೆ ಕುಳಿತುಕೊಳ್ಳುತ್ತೇವೆ ಎಂದು ತಿಳಿಸಿದರು.
ಬಿ.ಟಿ.ಲಲಿತಾ ನಾಯಕ್ ಅವರ ಮಗ ಅಂಬೇಡ್ಕರ್ ಪ್ರತಿಮೆಗೆ ಮದ್ಯ ಹಾಕಿದ್ದ. ಲಲಿತಾ ನಾಯಕ್ ಸಚಿವೆ ಆಗಿದ್ದಾಗ ಆಕೆ ಮಗ ಅಂಬೇಡ್ಕರ್ ಪ್ರತಿಮೆಗೆ ಮದ್ಯ ಕುಡಿಸಲು ಹೋಗಿದ್ದ. ಅಂಬೇಡ್ಕರ್‌ಗೆ ಅಪಮಾನ ಮಾಡಿದ ವ್ಯಕ್ತಿಯ ತಾಯಿಯನ್ನು ಮಹಿಷ ದಸರಾ ಉದ್ಘಾಟನೆಗೆ ಕೆಲವು ದಲಿತರು ಕರೆದುಕೊಂಡು ಬರುತ್ತಿರುವುದು ಸರಿನಾ? 50 ವರ್ಷದಿಂದ ಯಾವತ್ತೂ ಮಹಿಷಾ ದಸರಾ ಎಲ್ಲಿ ಮಾಡಿದ್ದಾರೆ? ಯಾರನ್ನು ಮೂರ್ಖರನ್ನಾಗಿ ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಜಂಬೂ ಸವಾರಿಗೆ ಬರಲಿದ ಗತವೈಭವ – ರಾಜ ಪೋಷಾಕಿನಲ್ಲಿ ಪೊಲೀಸರು
ಸಂಘರ್ಷಕ್ಕೂ ಸೈ ಹೊಡೆದಾಟಕ್ಕೂ ಸೈ. ಸಂಘರ್ಷಕ್ಕೆ ಸಿದ್ಧರಾಗಿಯೇ ಚಾಮುಂಡಿ ಬೆಟ್ಟ ಚಲೋ ಮಾಡುತ್ತಿರುವುದು. ಸಂಘರ್ಷ ಆದರೂ ಪರವಾಗಿಲ್ಲ. ಇವರನ್ನು ಹೊಸಕಿ ಹಾಕಲೇಬೇಕು. ನಾವು ತೀರ್ಮಾನ ಮಾಡಿಯೇ ಚಾಮುಂಡಿ ಚಲೋ ಮಾಡುತ್ತಿರುವುದು ಎಂದು ಸ್ಪಷ್ಟಪಡಿಸಿದರು.
ದೇಶ, ಧರ್ಮ ರಕ್ಷಣೆಗೆ ನಾವು ಸಂಘರ್ಷಕ್ಕೆ ಸಿದ್ಧ. ನಮ್ಮ ಪಕ್ಷವೂ ಅದೇ ರೀತಿ ಬೆಳೆದಿದ್ದು, ಚಾಮುಂಡಿ ತಾಯಿಗೆ ಅವಮಾನ ಮಾಡುವುದನ್ನು ನಿಲ್ಲಿಸಲು ಸಂಘರ್ಷ ಹಾಗೂ ಹೊಡೆದಾಟಕ್ಕೂ ಸಿದ್ಧ. ಧರ್ಮೋರಕ್ಷತಿ ರಕ್ಷಿತಃ ಎಂಬ ಮಾತನ್ನು ಉಲ್ಲೇಖಿಸಿ ಹೇಳಿದರು.
ಚೀನಾ, ಪಾಕಿಸ್ತಾನ ಗಡಿಯಲ್ಲಿ ಸಂಘರ್ಷವನ್ನೇ ಮಾಡಬೇಕು. ಇಲ್ಲಿ ಧರ್ಮ ಉಳಿಸಲು ಸಂಘರ್ಷ ಮಾಡಬೇಕು. ಸಂಘರ್ಷ ಮಾಡಿಯೇ ನಾವು ಪಕ್ಷ ಕಟ್ಟಿರುವುದು. ಧರ್ಮ ರಕ್ಷಣೆಗೆ ಸಂಘರ್ಷ ತಪ್ಪಲ್ಲ ಎಂದರು. ಇದನ್ನೂ ಓದಿ: ಬಂದೇ ಬಿಡ್ತು ದಸರಾ – ಮೈಸೂರು ಅರಮನೆಯಲ್ಲಿ ಯಾವ ದಿನ ಏನು ಕಾರ್ಯಕ್ರಮ?
Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]