ಮೈಸೂರು: ಸ್ವ-ಪಕ್ಷೀಯ ಮುಖಂಡರು ಮೈಸೂರು ನಗರದ ಎಲ್ಲೆಡೆ ಸಚಿವರ ಸ್ವಾಗತಕ್ಕೆ ಹಾಕಿದ ಫ್ಲೆಕ್ಸ್ ವಿರುದ್ಧವೇ ಸಂಸದ ಪ್ರತಾಪ್ ಸಿಂಹ ತಿರುಗಿ ಬಿದ್ದಿದ್ದಾರೆ.
ಮೈಸೂರು ನಗರದಲ್ಲಿ ಫ್ಲೆಕ್ಸ್ ಅಳವಡಿಕೆ ವಿರುದ್ಧ ಸಂಸದರು ಕಿಡಿಕಾರಿದ್ದು, ಪಾಲಿಕೆ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಫ್ಲೆಕ್ಸ್ ಅಳವಡಿಸುವ ರಾಜಕೀಯ ಪಕ್ಷಗಳಿಗೆ ನೋಟಿಸ್ ನೀಡುವಂತೆ ಮೈಸೂರು ನಗರ ಪೊಲೀಸ್ ಆಯುಕ್ತರು ಹಾಗೂ ಮೈಸೂರು ಮಹಾ ನಗರ ಪಾಲಿಕೆ ಆಯುಕ್ತರಿಗೆ ಟ್ಲೀಟರ್ ಮೂಲಕ ಆಗ್ರಹಿಸಿದ್ದಾರೆ.
Advertisement
Dear @mysurucorp, I had requested you to issue notices to all political parties under THE KARNATAKA OPEN PLACES (PREVENTION OF DISFIGUREMENT) ACT, 1981 n take strict action. But…! Don’t allow anyone to dirt our beloved city #Mysuru. Sir @DC_Mysuru pls intervene @CPMysuru pic.twitter.com/v4iYuuqrtq
— Pratap Simha (@mepratap) April 28, 2022
Advertisement
ವಿವಿಧ ಕಾರ್ಯಕ್ರಮಗಳ ಹಿನ್ನೆಲೆಯಲ್ಲಿ ಸಚಿವ ಮುರಗೇಶ್ ನಿರಾಣಿ ಮೈಸೂರಿಗೆ ಬಂದ ಕಾರಣ ಅವರ ಅಭಿಮಾನಿಗಳು ಸಂಸದ ಪ್ರತಾಪ್ ಸಿಂಹ ಅವರ ಫೋಟೋ ಸಮೇತ ನಗರದ ವಿವಿಧೆಡೆ ಫ್ಲೆಕ್ಸ್ ಹಾಕಿದ್ದರು. ಇದರ ಜೊತೆಗೆ ಜೆಡಿಎಸ್ ನ ಜನತಾ ಜಲಧಾರೆ ಹಿನ್ನೆಲೆಯಲ್ಲೂ ಜೆಡಿಎಸ್ ಮುಖಂಡರು ಎಲ್ಲಾ ಕಡೆ ಫ್ಲೆಕ್ಸ್ ಹಾಕಿದ್ದಾರೆ.
Advertisement
ಇವುಗಳ ಫೋಟೋ ಸಮೇತ ಟ್ವೀಟ್ ಮಾಡಿ ಫ್ಲೆಕ್ಸ್ ಹಾಕಿರುವ ರಾಜಕೀಯ ಪಕ್ಷಗಳ ಮುಖಂಡರಿಗೆ ನೋಟಿಸ್ ನೀಡುವಂತೆ ಆಗ್ರಹಿಸಿದ್ದಾರೆ. ಇದನ್ನೂ ಓದಿ: ಮತ್ತೆ ಗಲಭೆಕೋರರ ಪರ ನಿಂತ ಜಮೀರ್- ಕಲ್ಲು ಹೊಡೆದವರ ಕುಟುಂಬಕ್ಕೆ 5 ಸಾವಿರ, ಫುಡ್‍ಕಿಟ್