– ಮಾಸ್ಕ್ ಬೆಲೆ ಬಗ್ಗೆ ಸಂಸದ ಆತಂಕ
ಹಾಸನ: ನನಗೂ ಭಯ ಆಗಿ 900 ರೂಪಾಯಿ ಕೊಟ್ಟು ದೆಹಲಿಯಿಂದ ಬರುವಾಗ ಮಾಸ್ಕ್ ಖರೀದಿಸಿ ತಂದಿದ್ದೇನೆ. ನಾನೇ 900 ರೂಪಾಯಿ ಕೊಟ್ಟು ಮಾಸ್ಕ್ ಖರೀದಿಸಲು ಹಿಂದೆ ಮುಂದೆ ನೋಡುವಾಗ ಜನ ಎಲ್ಲಿಂದ ತರುತ್ತಾರೆ ಎಂದು ಸಂಸದ ಪ್ರಜ್ವಲ್ ರೇವಣ್ಣ ಮಾಸ್ಕ್ ಬೆಲೆ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ.
ಇಂದು ಸಂಸದ ಪ್ರಜ್ವಲ್ ರೇವಣ್ಣ ಹಾಸನದ ಹಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿದ್ದರು. ಅಲ್ಲಿ ಕೊರೊನಾ ಸೋಂಕಿತರಿಗಾಗಿ ತೆರೆದಿರುವ ಸ್ಪೆಷಲ್ ವಾರ್ಡ್ ವೀಕ್ಷಣೆ ಮಾಡಿ ಅಧಿಕಾರಿಗಳ ಕಾರ್ಯವೈಖರಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
Advertisement
Advertisement
ಈ ವೇಳೆ ಮಾತನಾಡಿದ ಪ್ರಜ್ವಲ್, ನನಗೂ ಭಯ ಆಗಿ 900 ರೂಪಾಯಿ ಕೊಟ್ಟು ದೆಹಲಿಯಿಂದ ಬರುವಾಗ ಮಾಸ್ಕ್ ಖರೀದಿಸಿ ತಂದಿದ್ದೇನೆ. ನಾನೇ 900 ರೂಪಾಯಿ ಕೊಟ್ಟು ಮಾಸ್ಕ್ ಖರೀದಿಸಲು ಹಿಂದೆ ಮುಂದೆ ನೋಡುವಾಗ ಜನ ಎಲ್ಲಿಂದ ತರುತ್ತಾರೆ. ಹೊರಗಡೆ ಮಾಸ್ಕ್ ದುಬಾರಿಯಾಗಿದ್ದು, ಆಸ್ಪತ್ರೆ ವತಿಯಿಂದಲೇ ಸೂಕ್ತ ಬೆಲೆಗೆ ಮಾರಲು ವ್ಯವಸ್ಥೆ ಮಾಡಲು ಅಧಿಕಾರಿಗಳೊಂದಿಗೆ ಚರ್ಚಿಸಿರುವುದಾಗಿ ತಿಳಿಸಿದರು.
Advertisement
Advertisement
ಹಾಸನದಲ್ಲಿ ಈಗಾಗಲೇ 75 ಬೆಡ್‍ಗಳ ವಾರ್ಡ್ ರೆಡಿಯಿದೆ. ಇದನ್ನು 100 ಹಾಸಿಗೆಗಳಿಗೆ ಏರಿಸಲಾಗುವುದು. ಸಸ್ಪೆಕ್ಟೆಡ್ ಮತ್ತು ಪಾಸಿಟಿವ್ ಇರುವವರಿಗೆ ಪ್ರತ್ಯೇಕ ವಾರ್ಡ್ ವ್ಯವಸ್ಥೆ ಮಾಡಲಾಗುವುದು. ಹಾಸನದಲ್ಲಿ ಇದುವರೆಗೂ ಯಾರಲ್ಲೂ ಕೊರೊನಾ ಸೋಂಕು ಪತ್ತೆಯಾಗಿಲ್ಲ. ಹೀಗಾಗಿ ಸಾರ್ವಜನಿಕರು ಧೈರ್ಯವಾಗಿರಿ. ಈಗಾಗಲೇ ಕೊರೊನಾ ಸೋಂಕು ಪರೀಕ್ಷೆಯಲ್ಲಿ ನೆಗೆಟಿವ್ ರಿಪೋರ್ಟ್ ಬಂದವರ ಮೇಲೂ ನಿಗಾ ಇರಿಸಲಾಗಿದೆ. ಒಂದು ವಾರದ ನಂತರ ಪುನಃ ಅವರನ್ನು ಪರಿಶೀಲಿಸಲಾಗುವುದು ಎಂದು ತಿಳಿಸಿದರು.