Connect with us

Latest

ರಾಜಸ್ಥಾನದಲ್ಲಿ ಗೌರವಾನ್ವಿತ ಹಿನ್ನಡೆಯಾಗಿದೆ- ಪ್ರಹ್ಲಾದ್ ಜೋಷಿ

Published

on

ನವದೆಹಲಿ: ರಾಜಸ್ಥಾನದಲ್ಲಿ ಬಿಜೆಪಿ ಸೋತಿದೆ. ಸೋತ್ರೂ ಕೂಡ ಅತ್ಯಂತ ಗೌರವಾನ್ವಿತ ಹಿನ್ನಡೆಯಾಗಿದೆ ಅಂತ ಸಂಸದ ಪ್ರಹ್ಲಾದ್ ಜೋಷಿ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಎಲ್ಲೆಲ್ಲಿ ಸೋತಿದೆಯೋ ಅಲ್ಲಿ ತೀರಾ ಕಳಪೆಯಾಗಿ ಸೋತಿದೆ. ರಾಜಸ್ಥಾನದಲ್ಲಿ ನಾವು ಸೋತಿದ್ರೂ ಬಹಳ ಗೌರವಯುತವಾದ ಹಿನ್ನಡೆಯಾಗಿದೆ. ಹಾಗಾಗಿ ಇಂದು ಈ ಪರಿಣಾಮವನ್ನು ಆತ್ಮಾವಲೋಕನ ಮಾಡಿ ಸರಿಪಡಿಸಿಕೊಳ್ಳಬೇಕು. ಬಿಜೆಪಿಯ ಪರ್ಫಾಮೆನ್ಸ್ ಮತ್ತು ಬಿಜೆಪಿಯ ಮುಂದಿನ ಲೋಕಸಭಾ ಚುನಾವಣೆಗೆ ಈ ಫಲಿತಾಂಶ ಪರಿಣಾಮ ಬೀರುತ್ತದೆ ಅನ್ನೋ ಚರ್ಚೆಯನ್ನು ನಾನು ಖಂಡಿತ ಒಪ್ಪಲ್ಲ. ಸ್ಥಳೀಯ ಸಣ್ಣ ಪುಟ್ಟ ಅಸಮಾಧಾನಗಳು ಸೋಲಿಗೆ ಕಾರಣವಾಗಿರುತ್ತದೆ ಅಂದ್ರು.

ಛತ್ತಿಸ್‍ಗಢ ನಮಗೆ ನಿಜಕ್ಕೂ ಶಾಕ್ ನೀಡಿದೆ. ಯಾಕಂದ್ರೆ ಅಲ್ಲಿ ನಮಗೆ ತೀವ್ರ ಹಿನ್ನಡೆ ಆಗಿದೆ. ಒಟ್ಟಾರೆ ಹೇಳೋದಾದ್ರೆ ಛತ್ತೀಸ್‍ಗಢ ಮತ್ತು ಮಧ್ಯಪ್ರದೇಶದಲ್ಲಿ ಕಳೆದ 15 ವರ್ಷಗಳಿಂದ ಬಿಜೆಪಿ ಆಡಳಿತ ನಡೆಸುತ್ತಿದೆ. ಹೀಗಾಗಿ ಹಿಂದುಳಿದ ಹಾಗೂ ನಕ್ಸಲ್ ಪೀಡಿತ ಪ್ರದೇಶ ಹಾಗೂ ಅತ್ಯಂತ ಬಡತನ ಇರೋ ರಾಜ್ಯದಲ್ಲಿ ಬಿಜೆಪಿ 15 ವರ್ಷ ಆಡಳಿತ ನಡೆಸಿದೆ. ಸ್ಥಳೀಯ ಆಡಳಿತಕ್ಕೆ ವಿರೋಧಿ ಅಲೆ ಇರುವುದು ಸಹಜವಾಗಿದೆ. ಇದರ ಪರಿಣಾಮವಾಗಿ ನಮಗೆ ಸೀಟುಗಳ ಸಂಖ್ಯೆ ಕಡಿಮೆ ಇತ್ತು ಅಂದ್ರು.

ಮಧ್ಯಪ್ರದೇಶದಲ್ಲಿ ನಾವು ತೀರಾ ಕೆಟ್ಟದಾಗಿ ಫರ್ಮಾಮೆನ್ಸ್ ಮಾಡಿಲ್ಲ. 5 ರಾಜ್ಯಗಳಲ್ಲಿ ನಡೆದ ಚುನಾವಣೆಯಲ್ಲಿ ದೊಡ್ಡ ರಾಜ್ಯ ಮಧ್ಯಪ್ರದೇಶವಾಗಿದೆ. ಎರಡನೇಯದಾಗಿ ರಾಜಸ್ಥಾನದಲ್ಲಿ ಎಲ್ಲಾ ರೀತಿಯ ನಮ್ಮ ಎಕ್ಸಿಟ್ ಪೋಲ್ ಹಾಗೂ ಸರ್ವೇಗಳು ಈ ಎಲ್ಲಾ ಸಂಗತಿಯನ್ನು ಗಮನಿಸಿದಾಗ ಅಲ್ಲಿ ಕೂಡ ನೆಕ್ ಟು ನೆಕ್ ಫೈಟೇ ಇತ್ತು ಎಂದರು.

ಒಟ್ಟಿನಲ್ಲಿ ದೇಶದ ಪ್ರಧಾಮಂತ್ರಿ ಯಾರಾಗಬೇಕು ಅಂತ ಕೇಳಿದ್ರೆ ಜನ ನಿಶ್ಚಿತವಾಗಿ ನರೇಂದ್ರ ಮೋದಿ ನೇತೃತ್ವದ ಭಾರತೀಯ ಜನತಾ ಪಾರ್ಟಿಯ ಪರವಾಗಿಯೇ ತೀರ್ಪು ನೀಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

Click to comment

Leave a Reply

Your email address will not be published. Required fields are marked *