ಪಾಟ್ನಾ: ಬಿಹಾರದ (Bihar) ಪುರ್ನಿಯಾದ (Purnia) ಸ್ವತಂತ್ರ ಪಕ್ಷದ ಸಂಸದ ಪಪ್ಪು ಯಾದವ್‌ಗೆ (Pappu Yadav) ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನಿಂದ (Lawrence Bishnoi Gang) ಕೊಲೆ ಬೆದರಿಕೆ ಸಂದೇಶ ಬಂದಿದೆ.
ಗ್ಯಾಂಗಸ್ಟರ್ ಲಾರೆನ್ಸ್ ಬಿಷ್ಣೋಯ್‌ನಂತಹ ಕ್ರಿಮಿನಲ್‌ನ ಜಾಲವನ್ನು 24 ಗಂಟೆಗಳ ಒಳಗೆ ಕೆಡವುದಾಗಿ ಸಂಸದ ಪಪ್ಪು ಯಾದವ್‌ಗೆ ಸವಾಲು ಹಾಕಿದ್ದರು. ಸವಾಲ್ ಹಾಕಿದ ಬೆನ್ನಲ್ಲೇ ಈ ಬೆದರಿಕೆ ಸಂದೇಶ ಬಂದಿದೆ.ಇದನ್ನೂ ಓದಿ: ಕಾಂಗ್ರೆಸ್ ಸರ್ಕಾರದಿಂದ ಲ್ಯಾಂಡ್ ಜಿಹಾದ್, ಜಮೀರ್ ಒಬ್ಬ ಆಧುನಿಕ ಟಿಪ್ಪು ಸುಲ್ತಾನ್: ಆರ್.ಅಶೋಕ್
Advertisement
Advertisement
ಬಾಬಾ ಸಿದ್ದಿಕಿ ಹತ್ಯೆ (Baba Siddique case) ಬಳಿಕ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ವಿರುದ್ಧ ಮಾತನಾಡಿದ್ದ ಪಪ್ಪು ಯಾದವ್, ಸರ್ಕಾರದ ಬೆಂಬಲಿತ ಮಾಜಿ ಸಚಿವರ ಹತ್ಯೆಯು ಮಹಾರಾಷ್ಟ್ರದಲ್ಲಿ ಸಂಪೂರ್ಣ ಕಾನೂನು ಸುವ್ಯವಸ್ಥೆ ಹಾಳಾಗಿರುವುದು ಎತ್ತಿ ತೋರಿಸುತ್ತದೆ. ಬಿಹಾರದ ಮಗ ಬಾಬಾ ಸಿದ್ದಿಕ್ ಹತ್ಯೆ ಇದೊಂದು ದುರಂತವಾಗಿದೆ. ಬಿಜೆಪಿ ನೇತೃತ್ವದ ಸರ್ಕಾರವು ತನ್ನ ಪ್ರಭಾವಿ ನಾಯಕರನ್ನು ರಕ್ಷಿಸಲು ಸಾಧ್ಯವಾಗದಿದ್ದರೆ, ಸಾಮಾನ್ಯ ಜನರಿನ್ನು ರಕ್ಷಿಸುವ ಭರವಸೆ ಇದೆಯಾ? ನಾನು ಈ ಕ್ರಿಮಿನಲ್ ಜಾಲವನ್ನು 24 ಗಂಟೆಗಳ ಒಳಗೆ ಕೆಡವುದಾಗಿ ಹೇಳಿದ್ದರು.
Advertisement
ಈ ಹೇಳಿಕೆ ಬೆನ್ನಲ್ಲೇ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನಿಂದ ಆಡಿಯೋ ಸಂದೇಶದ ಮೂಲಕ ವ್ಯಾಟ್ಸಪ್‌ಗೆ ಬೆದರಿಕೆ ಬಂದಿದೆ. ನಿಮ್ಮ ಚಲನವಲನಗಳನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ. ನಟ ಸಲ್ಮಾನ್ ಖಾನ್‌ನ ಸಮಸ್ಯೆಗಳಿಂದ ದೂರವಿರಬೇಕು, ಇದನ್ನು ನಿರ್ಲಕ್ಷ್ಯಿಸಿದರೆ ಕೊಲ್ಲುವುದಾಗಿ ಆಡಿಯೋದಲ್ಲಿ ಬೆದರಿಕೆ ಹಾಕಿದ್ದಾರೆ.
Advertisement
ಆದಷ್ಟು ಬೇಗ ವಿಷಯವನ್ನು ಇತ್ಯರ್ಥಪಡಿಸಿ. ನಾನು ನಿನ್ನನ್ನು ಅಣ್ಣ ಎಂದು ಪರಿಗಣಿಸಿದ್ದೆ. ಆದರೆ ನೀವು ನನಗೆ ಮುಜುಗರವನ್ನುಂಟು ಮಾಡಿದ್ದೀರಿ. ಮತ್ತೆ ಕರೆ ಮಾಡಿ ಮತ್ತು ನಾನು ನಿಮ್ಮನ್ನು `ಭಾಯ್’ ನೊಂದಿಗೆ ಸಂಪರ್ಕಿಸುತ್ತೇನೆ. ಜೈಲಿನ ಸಿಗ್ನಲ್ ಜಾಮರ್‌ಗಳನ್ನು ನಿಷ್ಕ್ರಿಯಗೊಳಿಸಲು ಲಾರೆನ್ಸ್ ಬಿಷ್ಣೋಯ್ ಗಂಟೆಗೆ 1 ಲಕ್ಷ ರೂ.ಯನ್ನು ಪಾವತಿಸುತ್ತಿದ್ದೇವೆ ಎಂದು ಆಡಿಯೋದಲ್ಲಿ ಉಲ್ಲೇಖಿಸಿದೆ. ಬೆದರಿಕೆ ಬೆನ್ನಲ್ಲೇ ಪಪ್ಪು ಯಾದವ್ ಅವರು ತಕ್ಷಣ ಬಿಹಾರದ ಪೊಲೀಸ್ ಮಹಾನಿರ್ದೇಶಕರಿಗೆ (ಡಿಜಿಪಿ) ಕ್ರಮಕ್ಕೆ ಒತ್ತಾಯಿಸಿದ್ದಾರೆ.ಇದನ್ನೂ ಓದಿ:BBK 11: ಕಿಚ್ಚನ ಶೋನಲ್ಲಿ ದರ್ಶನ್ ನಟನೆಯ ‘ನವಗ್ರಹ’ ರೀ ರಿಲೀಸ್ ವಿಚಾರ ಚರ್ಚೆ