ಕೋಲಾರ: ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ (HD Kumaraswamy) ಹೇಳಿಕೆಯನ್ನು ಸಮರ್ಥಿಸಿಕೊಂಡ ಕೋಲಾರ ಸಂಸದ ಎಸ್.ಮುನಿಸ್ವಾಮಿ, ಮಹಿಳೆಯರ ಬಗ್ಗೆ ಗೌರವ ಇರುವುದರಿಂದಲೇ ತೆನೆ ಹೊತ್ತ ಮಹಿಳೆ ಚಿಹ್ನೆ ಇರಿಸಿಕೊಂಡಿದ್ದಾರೆ. ಹೀಗಿರುವಾಗ ಡಿಕೆಶಿ ಹಾಗೂ ಸಿದ್ದರಾಮಯ್ಯ (Siddaramaiah) ಸರ್ಟಿಫಿಕೇಟ್ ಬೇಕಾಗಿಲ್ಲ ಎಂದು ಟಾಂಗ್ ನೀಡಿದ್ರು.
ಕೋಲಾರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೆಡಿಎಸ್ ಕಾಂಗ್ರೆಸ್ ಮೈತ್ರಿ ಇದ್ದಾಗ ಕುಮಾರಣ್ಣನ ಮಗನನ್ನ ಸೋಲಿಸಲು ಕಾಂಗ್ರೆಸ್ ನವವರು ಹುನ್ನಾರ ಮಾಡಿದ್ರು. ರಾಷ್ಟ್ರಪತಿ ದ್ರೌಪತಿ ಮುರ್ಮು, ಕಂಗನಾ, ನಮ್ಮ ಅಭ್ಯರ್ಥಿ ಹೇಮಮಾಲಿನಿ ಕುರಿತು ಕಾಂಗ್ರೆಸ್ಸಿಗರು ಮಾತನಾಡಿದ್ದಾರೆ. ಮಾಜಿ ಸ್ಪೀಕರ್ ರಮೇಶ್ ಕುಮಾರ್ (Ramesh Kumar) ವಿಧಾನಸೌಧದಲ್ಲಿ ಅವಹೇಳನಕಾರಿಯಾಗಿ ಮಾತನಾಡಿದೆಲ್ಲಾ ಇರುವಾಗ ಹೀಗೆ ವೋಟ್ ಬ್ಯಾಂಕ್ ಗೋಸ್ಕರ ಅಪಪ್ರಚಾರ ಮಾಡಲಾಗುತ್ತಿದೆ ಎಂದು ಕಿಡಿಕಾರಿದರು.
Advertisement
Advertisement
10 ಸಾವಿರ ಕೊಟ್ಟು ಗಲಾಟೆಗೆ ಪ್ರಚೋದನೆ: ಸಾಧನೆಗಳನ್ನ ಹೇಳಿ ಚುನಾವಣೆಗೆ ಹೋಗಬೇಕು, ಅಪಾರ್ಥ ಮಾಡಿಕೊಂಡು ಚುನಾವಣೆಗೆ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಇದರಿಂದ ಕಾಂಗ್ರೆಸ್ಸಿಗರಿಗೆ ನಾಚಿಕೆ ಆಗಬೇಕು ಮಹಿಳೆಯರಿಗೆ ಹಣ ಕೊಟ್ಟು ಉದ್ದೇಶಪೂರ್ವಕವಾಗಿ ಜಗಳ ಮಾಡಿಸುತ್ತಿದ್ದಾರೆ. ಗಲಾಟೆ ಮಾಡಿದ ಮಹಿಳೆಯರಿಗೆ ಹತ್ತು ಸಾವಿರ ಕೊಟ್ಟು ಪ್ರಚೋದನೆ ಮಾಡಿಸುತ್ತಿದ್ದಾರೆ. ಈ ರೀತಿಯ ಕೀಳುಮಟ್ಟದ ರಾಜಕಾರಣ ಮಾಡುತ್ತಿದ್ದಾರೆ. ಡಿಕೆಶಿ ಸಿದ್ದರಾಮಯ್ಯ ಅವರಿಗೆ ಕೋಲಾರಮ್ಮ ಒಳ್ಳೆಯ ಬುದ್ಧಿ ಕೊಡಲಿ ಎಂದ್ರು. ಸಿದ್ದರಾಮಯ್ಯ ಅವರು ಮಹಿಳೆಯ ಸೆರಗು ಎಳೆದಾಗ ಅಚಾನಕ್ಕಾಗಿ ಆಗಿದೆ ಎಂದು ನಾವು ಅಂದುಕೊಂಡೆವು. ಅದನ್ನ ಆಕಸ್ಮಿಕವಾಗಿ ಆಗಿದೆ ಎಂದು ನಾವು ಬಿಟ್ಟಿದ್ದೇವೆ. ಈ ಎಲ್ಲವನ್ನ ನಾವು ಈಗ ವೀಡಿಯೋ ಮಾಡಿ ರಾಜಕೀಯ ಮಾಡಿದ್ರೆ ಚೆನ್ನಾಗಿರಲ್ಲ ಎಂದ್ರು. ಇದನ್ನೂ ಓದಿ: ಕಾಂಗ್ರೆಸ್‌ನವರದ್ದು ಗೂಂಡಾ ಸಂಸ್ಕೃತಿ, ನಮ್ಮ ಕಾರ್ಯಕರ್ತರ ವಾಹನ ತಡೆದಿದ್ದಾರೆ: ಜೋಶಿ ಕಿಡಿ
Advertisement
Advertisement
ಈ ಬಾರಿ ಚುನಾವಣೆಯಲ್ಲಿ ಲೀಡ್ ಕೊಡಲಿಲ್ಲ. ಅಂದರೆ ಸಚಿವ ಸ್ಥಾನದಿಂದ ತೆಗೆಯಲಾಗುವುದು ಎಂಬ ಕೈಗಾರಿಕಾ ಸಚಿವ ಶರಣಬಸಪ್ಪ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಈಗಾಗಲೇ ಸಿದ್ದರಾಮಯ್ಯ ವರುಣ ಕ್ಷೇತ್ರದಲ್ಲಿ ಹೇಳಿದ್ದಾರೆ. ಲೀಡ್ ಬಂದಿಲ್ಲ ಎಂದರೆ ಸಿಎಂ ಸ್ಥಾನದಿಂದ ವಾಪಸ್ ಪಡೆಯುತ್ತಾರೆ ಎಂದು, ಡಿಕೆಶಿ ಅವರು ಪೆನ್ನು ಪೇಪರ್ ಕೊಡಿ ಸಿಎಂ ಆಗ್ತೀನಿ ಎಂದರು ಲೋಡ್ ಲೋಡ್ ಪೆನ್ನು ಪೇಪರ್ ಕೊಟ್ಟರು ಸಿಎಂ ಆಗುವ ಲಕ್ಷಣಗಳು ಕಾಣಿಸ್ತಿಲ್ಲ. ಈಗ ಅವರದ್ದೇ ಮಂತ್ರಿಗಳನ್ನ ಬ್ಲಾಕ್ ಮೇಲ್ ಮಾಡುತ್ತಿದ್ದು, ಈ ಮೂಲಕ ಹಣದ ಹೊಳೆ ಹರಿಸಲು ಮುಂದಾಗಿದ್ದಾರೆ. ಕಾಂಗ್ರೆಸ್ಸಿಗೆ ಸೋಲು ಖಚಿತವಾಗಿದೆ. ಹೀಗಾಗಿ 16 ಸಚಿವರು ಸ್ಪರ್ಧೆ ಮಾಡಲು ಹಿಂದೇಟು ಹಾಕಿದ್ದಾರೆ ಎಂದು ವ್ಯಂಗ್ಯವಾಡಿದ್ರು.
ಬುಧವಾರ ಕೋಲಾರಕ್ಕೆ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಬರುತ್ತಿರುವ ಕುರಿತು ಮಾತನಾಡಿದ ಅವರು, ರಾಹುಲ್ ಗಾಂಧಿ ತಾತ, ಅವರ ಅಜ್ಜಿ, ಅವರ ಅಮ್ಮ ಬಂದರೂ, ಕೋಲಾರ ಲೋಕಸಭಾ ಕ್ಷೇತ್ರದಲ್ಲಿ ನರೇಂದ್ರ ಮೋದಿಯ ಜನಪ್ರಿಯತೆ, ಅಭಿವೃದ್ಧಿ ಕೆಲಸಗಳಿಂದ ಎನ್‍ಡಿಎ ಅಭ್ಯರ್ಥಿ ಗೆಲುವು ಖಚಿತ ಎಂದ್ರು. ಇನ್ನೂ ರಾಹುಲ್ ಗಾಂಧಿ ಇಲ್ಲಿಯೇ ಹೊಕ್ಕಂ ಹೂಡಿದರು ಸಹ ಎನ್‍ಡಿಎ ಅಭ್ಯರ್ಥಿ ಮಲ್ಲೇಶ್ ಬಾಬು ಅವರನ್ನು ಸೋಲಿಸಲು ಆಗಲ್ಲ, ನೂರಕ್ಕೆ ನೂರಷ್ಟು ಮಲ್ಲೇಶ್ ಬಾಬು ಅವರನ್ನು ಜನ್ರು ಗೆಲ್ಲಿಸುತ್ತಾರೆ. ದೇಶಕ್ಕೆ ನರೇಂದ್ರ ಮೋದಿ ಬೇಕೆಂದು ದೇವೇಗೌಡರು ತೀರ್ಮಾನ ಮಾಡಿದ್ದಾರೆ. ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಹಾಲಿನಲ್ಲಿ ಜೇನು ತುಪ್ಪ ಸೇರಿದಂತೆ ಆಗಿದೆ.
ಈ ಹಿಂದೆ ಕಾಂಗ್ರೆಸ್ ಜೆಡಿಎಸ್ ಮೈತ್ರಿ ಹಾಲಿನಲ್ಲಿ ಹುಳಿ ಹಿಂಡಿದಂತೆ ಇತ್ತು, ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡಿ ಎಷ್ಟು ಚಿತ್ರಹಿಂಸೆ ಕೊಟ್ಟು ಅವರನ್ನು ಇಳಿಸಿದ್ದಾರೆ ಅಂತಾ ಜನ್ರಿಗೆ ಗೊತ್ತು ಎಂದು ಹೇಳಿದ್ರು.