ನವದೆಹಲಿ: ಲೋಕಸಭಾ ಚುನಾವಣೆಯ ಸಮರಕ್ಕೆ ದಿಕ್ಸೂಚಿಯೆಂಬಂತೆ ಇಂದು ಮಧ್ಯಪ್ರದೇಶ ಮತ್ತು ಮಿಜೋರಾಂ ವಿಧಾನಸಭೆಗೆ ಚುನಾವನೆಯ ಮತದಾನ ಆರಂಭವಾಗಿದೆ.
ಮಧ್ಯಪ್ರದೇಶದ 230 ಹಾಗೂ ಮಿಜೋರಾಂ 40 ಸ್ಥಾನಗಳಿಗೆ ವಿಧಾನಸಭಾ ಕ್ಷೇತ್ರಗಳಲ್ಲಿ ಇಂದು ಮತದಾನ ನಡೆಯಲಿದೆ. ಎರಡೂ ರಾಜ್ಯಗಳಲ್ಲಿ ಒಂದೇ ಹಂತದಲ್ಲಿ ಮತದಾನ ನಡೆಯಲಿದ್ದು ಸೂಕ್ತ ಭದ್ರತೆ ಒದಗಿಸಲಾಗಿದೆ. ಎರಡು ರಾಜ್ಯಗಳು ಕಾಂಗ್ರೆಸ್-ಬಿಜೆಪಿಗೆ ಪ್ರತಿಷ್ಠೆ ಕಣವಾಗಿದ್ದು ಅಧಿಕಾರದ ಚುಕ್ಕಾಣಿ ಹಿಡಿಯಲು ಈಗಾಗಲೇ ಸಾಕಷ್ಟು ಸರ್ಕಸ್ ಮಾಡಿವೆ.
Advertisement
Voting underway for 230 assembly seats in #MadhyaPradeshElections, visuals from a polling booth in Indore pic.twitter.com/jxvUY9xVCl
— ANI (@ANI) November 28, 2018
Advertisement
ಮಧ್ಯಪ್ರದೇಶದಲ್ಲಿ 52 ಜಿಲ್ಲೆಗಳ 230 ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದ್ದು 65,341 ಬೂತ್‍ಗಳಲ್ಲಿ ಮತದಾನ ನಡೆಯಲಿದೆ. 2005ರಲ್ಲಿ ಮುಖ್ಯಮಂತ್ರಿ ಹುದ್ದೆಗೇರಿದ ಹಾಲಿ ಸಿಎಂ ಶಿವರಾಜ್ ಸಿಂಗ್ ಚೌವ್ಹಾನ್ ನಾಲ್ಕನೇ ಬಾರಿ ಮುಖ್ಯಮಂತ್ರಿಯಾಗಲು ಶ್ರಮಿಸುತ್ತಿದ್ದಾರೆ. ಇತ್ತ ಮಿಜೋರಾಂನ 40 ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು ಏಳು ಲಕ್ಷ ಮತದಾರರು 209 ಅಭ್ಯರ್ಥಿಗಳ ಹಣೆ ಬರಹ ನಿರ್ಧರಿಸಲಿದ್ದಾರೆ. ಕಾಂಗ್ರೆಸ್ ತೆಕ್ಕೆಯಲ್ಲಿರುವ ಚಿಕ್ಕ ರಾಜ್ಯ ಮಿಜೋರಾಂ ವಶಪಡಿಸಿಕೊಳ್ಳುವ ಬಿಜೆಪಿ ತಂತ್ರ ರೂಪಿಸಿದೆ.
Advertisement
ಉಳಿದಂತೆ ರಾಜಸ್ಥಾನ, ಛತ್ತೀಸ್‍ಗಢ ಹಾಗೂ ತೆಲಂಗಾಣ ರಾಜ್ಯಗಳ ಚುನಾವಣೆ ಬಳಿಕ ಅಂದರೆ ಡಿಸೆಂಬರ್ 11 ರಂದು ಫಲಿತಾಂಶ ಘೋಷಣೆಯಾಗಲಿದೆ. ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮಿಜೋರಾಂ, ಮಧ್ಯಪ್ರದೇಶ ವಿಧಾನಸಭೆ ಚುನಾವಣೆ ರಾಷ್ಟ್ರಮಟ್ಟದಲ್ಲಿ ಎಲ್ಲರ ಗಮನ ಸೆಳೆದಿದೆ.
Advertisement
Madhya Pradesh Chief Minister Shivraj Singh Chauhan prays on the banks of Narmada river, in Budhni. Voting in the state is underway. #MadhyaPradeshElections2018 pic.twitter.com/Hh9hjNds8Y
— ANI (@ANI) November 28, 2018
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv