ಬೆಂಗಳೂರು: ಪಕ್ಷದ ಶಿಸ್ತು ಮೀರಿ ಮಾತನಾಡುತ್ತಿರುವ ಸಚಿವರು ಶಿಶುಪಾಲರಿದ್ದಂತೆ ಹೈಕಮಾಂಡ್ ಶ್ರೀಕೃಷ್ಣ ಇದ್ದಂತೆ ಎಂದು ಕೆಪಿಸಿಸಿ ಕಾರ್ಯಧ್ಯಕ್ಷ ಹಾಗೂ ಸಂಸದ ಜಿ.ಸಿ ಚಂದ್ರಶೇಖರ್ (GC Chandrashekhar) ಬಣ್ಣಿಸಿದ್ದಾರೆ.
ಬೆಂಗಳೂರಿನಲ್ಲಿ (Bengaluru) ಮಾತನಾಡಿದ ಅವರು, ಸಚಿವರು ಕಳೆದ ಒಂದು ವರ್ಷದಿಂದ ಬದಲಾವಣೆ ಬಗ್ಗೆ ಸಿಎಂ ವಿಚಾರದ ಬಗ್ಗೆ ಹೇಳುತ್ತಿದ್ದಾರೆ. ಆದರೆ ಯಾವ ಬದಲಾವಣೆಯೂ ಆಗಿಲ್ಲ. ಎಲ್ಲಾ ಸಚಿವರು ಹಿರಿಯರಿದ್ದಾರೆ, ಇದು ಶ್ರೀಕೃಷ್ಣ ಶಿಶುಪಾಲನ ಕಥೆಯಂತೆ. ಇಲ್ಲಿ ಹೈಕಮಾಂಡ್ ಶ್ರೀಕೃಷ್ಣ ಇದ್ದಂತೆ ಶಿಶುಪಾಲ ಯಾರು ಅಂತ ನಿಮಗೆ ಬಿಡುತ್ತೇನೆ ಎಂದಿದ್ದಾರೆ. ಇದನ್ನೂ ಓದಿ: ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇನಲ್ಲಿ ಭೀಕರ ಅಪಘಾತ – ಸವಾರರು ಗ್ರೇಟ್ ಎಸ್ಕೇಪ್
ಇದಕ್ಕೆಲ್ಲ ಕಾಲವೇ ಉತ್ತರ ಕೊಡುತ್ತದೆ. ದೆಹಲಿಯಲ್ಲಿ ಹೈಕಮಾಂಡ್ ಮಾತನಾಡಿದೆ. ಅಲ್ಲಿ ಮಾತನಾಡಿದ ಮೇಲೆ ಇಲ್ಲಿ ಬಂದು ಮಾತನಾಡುವಂತದ್ದು ಏನಿದೆ..? ಯಾರೂ ಮಾತನಾಡಬಾರದು ಅಂತ ಕಾಂಗ್ರೆಸ್ ಅಧ್ಯಕ್ಷರು, ಕೆ.ಸಿ ವೇಣುಗೋಪಾಲ್ ಸಹ ಹೇಳಿದ್ದಾರೆ. ಅವರನ್ನ ಮಂತ್ರಿಮಾಡಿದ್ದು ಹೈಕಮಾಂಡ್, ಅವರನ್ನ ಶಾಸಕರನ್ನ ಮಾಡಿದ್ದು ಹೈಕಮಾಂಡ್, ಕಾಲ ಬಂದಾಗ ಹೈಕಮಾಂಡ್ ತೀರ್ಮಾನ ಮಾಡುತ್ತೆ. ನಾವು ಅಲ್ಲಿ-ಇಲ್ಲಿ ಮಾತನಾಡೋದು ಸರಿಯಲ್ಲ. ನಮಗೂ ಬಿಜೆಪಿಗೂ ಯಾವುದೇ ವ್ಯತ್ಯಾಸ ಇರಲ್ಲ ಎಂದು ಕಿವಿಮಾತು ಹೇಳಿದ್ದಾರೆ. ಇದನ್ನೂ ಓದಿ: ಸಿಬಿಐ ನಿರ್ದೇಶಕರಂತಹ ಕಾರ್ಯನಿರ್ವಾಹಕ ನೇಮಕಾತಿಗಳಲ್ಲಿ ಸಿಜೆಐ ಯಾಕೆ ಭಾಗಿಯಾಗಬೇಕು – ಉಪ ರಾಷ್ಟ್ರಪತಿ ಪ್ರಶ್ನೆ
ಬಿಜೆಪಿಯಲ್ಲಿ ಏನೇನಾಗ್ತಿದೆ ಎಲ್ಲರಿಗೂ ಗೊತ್ತಿದೆ. ಆರೀತಿ ಇಲ್ಲಿ ಗೊಂದಲ ಮೂಡಿಸೋದು ಬೇಡ. ನಾಯಕರಾದವರು ಪಕ್ಷ ಸಂಘಟನೆ ಮಾಡಬೇಕು. ಪಕ್ಷಕ್ಕೆ ತೊಂದರೆಯಾಗುವಂತೆ ಮಾಡಬಾರದು. ಕಾರ್ಯಾಧ್ಯಕ್ಷನಾಗಿ ನಾನು ಇದನ್ನ ಹೇಳ್ತೇನೆ, ಯಾವುದೇ ಸಮಸ್ಯೆ ಉದ್ಭವವಾಗಲಿ. ಪಕ್ಷ ಇಲ್ಲವೇ ಸರ್ಕಾರದಲ್ಲಿ ಆಗಲಿ ತಕ್ಷಣವೇ ಅದಕ್ಕೆ ಪರಿಹಾರ ಸಿಗಲ್ಲ. ಕಾಲವೇ ಅದಕ್ಕೆ ಉತ್ತರಿಸಬೇಕು. ನಿನ್ನೆ ಏನೇನು ಮಾತನಾಡಿದ್ರು ಎಲ್ಲರಿಗೂ ಗೊತ್ತಿದೆ. ಹೈಕಮಾಂಡ್ ಹೇಳಿ ಕಳಿಸಿದೆ ಹೇಳಿದ ಮೇಲೂ ಈ ರೀತಿ ಮಾತನಾಡಿದರೆ ಹೇಗೆ? ಕಾರ್ಯಕರ್ತರಿಗೆ ಒಂದು ಫ್ಯೂಚರ್ ಇದೆ. ಅವರಿಗೂ ಆಸೆಗಳು ಇರುತ್ತವೆ. ಅವರ ಪ್ಯೂಚರ್ ಯಾಕೆ ಹಾಳು ಮಾಡಬೇಕು? ಅಂತ ಪ್ರಶ್ನೆ ಮಾಡಿದ್ದಾರೆ.