ಕಲಬುರಗಿ: ಮಹಾರಾಷ್ಟ್ರದಲ್ಲಿ ಗಾಂಜಾ (Ganja) ಆರೋಪಿಗಳನ್ನು ಬಂಧಿಸಲು ತೆರಳಿದಾಗ ಮಾರಣಾಂತಿಕವಾಗಿ ಹಲ್ಲೆಗೊಳಗಾದ ಸಿಪಿಐ (CPI) ಶ್ರೀಮಂತ್ ಇಲ್ಲಾಳ್ ಅವರನ್ನು ಇಂದು ಸಂಸದ ಉಮೇಶ್ ಜಾಧವ್ (Dr Umesh Jadhav) ಭೇಟಿಯಾಗಿ ಆರೋಗ್ಯ ವಿಚಾರಿಸಿದ್ದಾರೆ.
Advertisement
ಸಿಪಿಐ ಶ್ರೀಮಂತ್ ಇಲ್ಲಾಳ್ ಅವರು ನಗರದ ಯುನೈಟೆಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅಗತ್ಯ ಬಿದ್ದರೆ ಹೆಚ್ಚಿನ ಚಿಕಿತ್ಸೆಗಾಗಿ ಏರ್ ಲಿಫ್ಟ್ ಮಾಡಲಾಗುವುದು. ಸಿಪಿಐಗೆ ಯಾವುದೇ ಕುಂದುಕೊರತೆಯಾಗದಂತೆ ಸಿಎಂ ಬಸವರಾಜ್ ಬೊಮ್ಮಾಯಿ (Basavaraj Bommai) ಸೂಚನೆ ನೀಡಿದ್ದಾರೆ ಎಂದು ಡಾ ಉಮೇಶ್ ಜಾಧವ್ ಹೇಳಿದ್ದಾರೆ. ಇದೇ ವೇಳೆ ಕುಟುಂಬಸ್ಥರನ್ನ ಭೇಟಿಯಾಗಿ ಸಂಸದರು ಸಾಂತ್ವನ ಹೇಳಿದರು.
Advertisement
ಪ್ರಕರಣ ಸಂಬಂಧ 40 ಮಂದಿ ಮೇಲೆ ಎಫ್‍ಐಆರ್ ದಾಖಲು ಮಾಡಲಾಗಿದೆ. ಇದನ್ನೂ ಓದಿ: ಗಾಂಜಾ ದಂಧೆಕೋರರಿಂದಲೇ ಪೊಲೀಸರ ಮೇಲೆ ಮಾರಣಾಂತಿಕ ಹಲ್ಲೆ – ICUನಲ್ಲಿ ಸಿಪಿಐ
Advertisement
Advertisement
ಏನಿದು ಗಾಂಜಾ ಕೇಸ್?
ಗಾಂಜಾ ದಂಧೆ ಕೇಸ್‌ನಲ್ಲಿ ಕಾರ್ಯಾಚರಣೆಗೆ ಹೋಗಿದ್ದ ಇಲ್ಲಾಳ ನೇತೃತ್ವದ ಪೊಲೀಸ್ ತಂಡ, ಕಳೆದ 2-3 ದಿನಗಳ ಹಿಂದೆ ಆರೋಪಿ ಸಂತೋಷ ಸೇರಿದಂತೆ ಅನೇಕ ಗಾಂಜಾ ದಂಧೆಕೋರರನ್ನೂ ಬಂಧಿಸಲಾಗಿತ್ತು. ಶುಕ್ರವಾರ ಮಧ್ಯಾಹ್ನವು ಸಹ ಗಾಂಜಾ ದಂಧೆ ಬೇಧಿಸಲು ಸಿಪಿಐ ಶ್ರೀಮಂತ ಇಲ್ಲಾಳ್ ನೇತೃತ್ವದಲ್ಲಿ 10 ಜನರ ಪೊಲೀಸ್ ತಂಡ ಮಹಾರಾಷ್ಟ್ರಕ್ಕೆ (Maharashtra) ಹೋಗಿತ್ತು.
ಗಾಂಜಾ ಬೆಳೆಯುವ ಹೊಲಗಳಿಗೆ (Ganja Plant) ಹೋಗಿದ್ದ ಪೊಲೀಸರ ಮೇಲೆ ರಾತ್ರಿ 9:30ರ ವೇಳೆಗೆ ಸುಮಾರು 30-40 ಮಂದಿ ಗಾಂಜಾ ದಂಧೆಕೋರರು ಕಟ್ಟಿಗೆಗಳಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ದಾಳಿ ಮಾಡುತ್ತಿದ್ದಂತೆ ಸಿಪಿಐ ಶ್ರೀಮಂತ ಇಲ್ಲಾಳ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಆದರೂ ಗಾಂಜಾ ದಂಧೆಕೋರರು ಪೊಲೀಸರನ್ನೆ ಅಟ್ಟಾಡಿಸಿದ್ದಾರೆ. ಕೊನೆಗೆ ಪ್ರಾಣ ಉಳಿಸಿಕೊಳ್ಳಲು ಪೊಲೀಸರು ಚೆಲ್ಲಾಪಿಲ್ಲಿಯಾಗಿ ಓಡಿಹೋಗಿದ್ದಾರೆ. ಗಂಭೀರ ಗಾಯಗೊಂಡು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಸಿಪಿಐ ಇಲ್ಲಾಳ ಅವರನ್ನ ಮಧ್ಯರಾತ್ರಿ 2:30ರ ವೇಳೆಗೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.