– ಹೆಚ್‌ಡಿಕೆ ಆರೋಗ್ಯ ಸರಿಯಿಲ್ಲ.. ಅವರು ಬೇಗ ಗುಣಮುಖರಾಗಲಿ
– ಕೋವಿಡ್ ವೇಳೆ ಇಡೀ ರಾಜ್ಯವೇ ಮಲಗಿದ್ದಾಗ ನಾನೊಬ್ಬನೇ ಓಡಾಡಿದ್ದೇನೆ
ಬೆಂಗಳೂರು: ಕುಮಾರಸ್ವಾಮಿ ಅವರು ಸುಳ್ಳು ಹೇಳುವುದರಲ್ಲಿ ನಿಸ್ಸೀಮರು. ಸುಳ್ಳು ಹೇಳುವುದೇ ಅವರ ಉದ್ಯೋಗ ಎಂದು ಸಂಸದ ಡಿ.ಕೆ.ಸುರೇಶ್ ಟಾಂಗ್ ಕೊಟ್ಟರು.
Advertisement
ಲೋಕಸಭಾ ಚುನಾವಣೆ ಹಿನ್ನೆಲೆ ‘ಪಬ್ಲಿಕ್ ಟಿವಿ’ ಜೊತೆ ಮಾಡಿದ ಅವರು, ಜೆಡಿಎಸ್ ನಾಯಕರ ಮನೆಗೆ ಹೋಗುವುದು, ಪಕ್ಷಕ್ಕೆ ಅವರನ್ನು ಸೆಳೆಯುವುದು, ಬೆದರಿಕೆ ಹಾಕುವ ಅಭ್ಯಾಸ ಡಿ.ಕೆ.ಶಿವಕುಮಾರ್‌ಗಾಗಲಿ ಅಥವಾ ಡಿ.ಕೆ.ಸುರೇಶ್‌ಗಾಗಲಿ ಇಲ್ಲ. ಆರೋಪ ಮಾಡುವುದು ರಾಜಕೀಯದ ಹುಟ್ಟು ಗುಣ. ಹೆಚ್.ಡಿ.ಕುಮಾರಸ್ವಾಮಿ ಅವರು ವೈದ್ಯಕೀಯ ಸೇವೆಯಲ್ಲಿದ್ದಾರೆ. ಆರೋಗ್ಯ ಸರಿಯಿಲ್ಲ. ಅವರ ಬಗ್ಗೆ ನಾನು ಹೆಚ್ಚಿಗೆ ಮಾತನಾಡುವುದಿಲ್ಲ. ಅವರು ಆದಷ್ಟು ಬೇಗ ಗುಣಮುಖರಾಗಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ ಎಂದರು. ಇದನ್ನೂ ಓದಿ: Exclusive: ಕ್ಷೇತ್ರದ ಜನರ ನಾಡಿಮಿಡಿತ ನನಗೆ ಗೊತ್ತು.. ಡಾ.ಮಂಜುನಾಥ್ ಮಿಡಿತ ಬೇಕಾಗಿಲ್ಲ: ಡಿ.ಕೆ.ಸುರೇಶ್
Advertisement
Advertisement
ಭಯ ಅನ್ನೋದು ಭಗವಂತನ ಸೃಷ್ಟಿ. ಜನ ನನ್ನ ಹಿಂದೆ ಇರೋವರೆಗೂ ಯಾರಿಗೂ ಹೆದರುವ ಪ್ರಶ್ನೆ ಇಲ್ಲ ಎಂದರು. ಕುಕ್ಕರ್, ಸೀರೆ ಹಂಚುವ ಆರೋಪ ಕುರಿತು ಮಾತನಾಡಿ, ಅದನ್ನು ಯಾರು ಹಂಚಿದ್ದಾರೆ ಎಂಬುದನ್ನು ನೀವೇ ಕೇಳಿಕೊಳ್ಳಬೇಕು. ಕೆಲವರು ಹಂಚುತ್ತಿರುತ್ತಾರೆ. ಕೆಲವರು ಒಳಗೊಳಗೆ ಏನೇನೊ ಮಾಡ್ತಿರುತ್ತಾರೆ. ಕುಮಾರಸ್ವಾಮಿ ಅವರು ಸುಳ್ಳು ಹೇಳುವುದರಲ್ಲಿ ನಿಸ್ಸೀಮರು. ಸುಳ್ಳು ಹೇಳುವುದೇ ಅವರ ಉದ್ಯೋಗ ಎಂದು ತಿರುಗೇಟು ನೀಡಿದರು.
Advertisement
ಈಗ ರಂಜಾನ್ ಹಬ್ಬ ಇದೆ. ಷರಿಯತ್ ಗೋಸ್ಕರ ಆ ಕ್ಷೇತ್ರದ ಶಾಸಕರು ಪ್ರತಿ ವರ್ಷ ಉಡುಗೊರೆ ಕೊಡ್ತಾರೆ. ಅದನ್ನು ಬುಕ್ ಮಾಡಿ ತಂದಿಟ್ಟಿದ್ದಾರೆ. ಈ ಸಂದರ್ಭದಲ್ಲೇ ಚುನಾವಣೆ ಬಂದಿದೆ. ಅದರಲ್ಲಿ ಸಿಂಬಲ್ ಏನು ಇಲ್ಲ. ಚುನಾವಣಾ ಆಯೋಗಕ್ಕೆ ಏನು ಸಲ್ಲಿಕೆ ಮಾಡಬೇಕೊ ಅದನ್ನ ಮಾಡ್ತಾರೆ ಎಂದು ಸ್ಪಷ್ಟಪಡಿಸಿದರು. ಇದನ್ನೂ ಓದಿ: ಕಾಂಗ್ರೆಸ್‌ನಲ್ಲಿ ಮಗ-ಮಗಳು, ಸೊಸೆ-ಅಳಿಯ, ಅಣ್ಣ ಎಲ್ಲಾ ಇದ್ದಾರೆ; ಕುಟುಂಬ ರಾಜಕಾರಣ ಆರೋಪಕ್ಕೆ ಡಾ.ಮಂಜುನಾಥ್ ತಿರುಗೇಟು
100% ಗ್ಯಾರಂಟಿ ನಮ್ಮ ಕೈ ಹಿಡಿಯುತ್ತೆ. ಮಹಿಳೆಯರಷ್ಟೇ ಅಲ್ಲ, ಕುಟುಂಬದ ಎಲ್ಲಾ ಸದಸ್ಯರು ನಮ್ಮ ಪರ ನಿಲ್ಲುತ್ತಾರೆ. 5 ಗ್ಯಾರಂಟಿಗಳು ರಾಜ್ಯದ ಮುಂದಿನ ಚಿತ್ರಣವನ್ನು ಬದಲಾಯಿಸುತ್ತೆ. ಯಾವ ರೀತಿ ಆರ್ಥಿಕ ಬದಲಾವಣೆ ಆಗುತ್ತೆ ಎಂಬುದನ್ನ ನೀವೇ ನೋಡ್ತೀರಿ ಎಂದು ಭರವಸೆ ವ್ಯಕ್ತಪಡಿಸಿದರು.
ಮುನಿರತ್ನ ಅವರು ನನ್ನ ಜೊತೆ ಇದ್ದ ಸಂದರ್ಭದಲ್ಲಿ ಸರ್ಕಾರದ ಮಟ್ಟದಲ್ಲಿ ಎಲ್ಲ ಕೆಲಸ ಕಾರ್ಯಗಳನ್ನು ಮಾಡಿಸಿಕೊಟ್ಟಿದ್ದೇನೆ. ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿಗೆ ಎಲ್ಲಾ ರೀತಿಯ ಸಹಕಾರ ಕೊಟ್ಟಿದ್ದೇನೆ. ನೂರಾರು ಕೋಟಿ ಅನುದಾನ ಅವರಿಗೆ ಸಿಗುವಂತೆ ಮಾಡಿದ್ದೇನೆ. ಇವತ್ತೇನಾದರು ಮುನಿರತ್ನ ಅವರು ಅಭಿವೃದ್ಧಿ ಮಾಡಿದ್ದೇನೆ ಎಂದು ಹೇಳಿಕೊಂಡರೆ, ಅದರಲ್ಲಿ ನನ್ನ 50% ಪಾಲಿದೆ. ನಾನು ಅವರ ಜೊತೆ ಕೈಜೋಡಿಸಿ ಕೆಲಸ ಮಾಡಿದ್ದೇನೆ. ಅದು ಕಾಂಗ್ರೆಸ್ ಕೊಟ್ಟ ಕೊಡುಗೆ. ಮುನಿರತ್ನ ಅವರ ವೈಯಕ್ತಿಕ ಅಲ್ಲ. ನಾನು ಕೂಡ ಅದರಲ್ಲಿ ಪಾಲುದಾರ ಎಂದು ತಿರುಗೇಟು ನೀಡಿದರು. ಇದನ್ನೂ ಓದಿ: ರಾಜ್ಯಾದ್ಯಂತ ಒಟ್ಟು 15.78 ಕೋಟಿ ಹಣ, 1.27 ಕೋಟಿ ರೂ. ಮೌಲ್ಯದ ಚಿನ್ನಾಭರಣ ಜಪ್ತಿ
ಕೋವಿಡ್ ಸಂದರ್ಭದಲ್ಲಿ ಇಡೀ ರಾಜ್ಯ ಮಲಗಿತ್ತು. ಈ ಡಿ.ಕೆ.ಸುರೇಶ್ ಒಬ್ಬನೇ ರಸ್ತೆಯಲ್ಲಿ ಓಡಾಡುತ್ತಿದ್ದದ್ದು. ದೇಶದಲ್ಲಿ ಎಲ್ಲರೂ ತಮ್ಮ ಭಾಷಣಗಳನ್ನು ಆನ್‌ಲೈನ್ ಮುಖಾಂತರ ಮಾಡುತ್ತಾ ಅವರ ಕೆಲಸ ಕಾರ್ಯ ನಿರ್ವಹಿಸುತ್ತಿದ್ದರು. ನಾನು ರೈತರು, ರೋಗಿಗಳ ಪರ ನಿಂತಿದ್ದೇನೆ. ನನ್ನ ಜೀವ ಹೋದರೂ ಚಿಂತೆಯಿಲ್ಲ ಅಂತಾ ಐಸಿಯುಗೆ ಹೋಗಿ ರೋಗಿಗಳ ಕಷ್ಟ ಆಲಿಸಿದ್ದೇನೆ. ಕೋವಿಡ್ ಸಂದರ್ಭದಲ್ಲಿ ನಾನು ಮಾಡಿದ ಕೆಲಸಗಳ ಬಗ್ಗೆ ಹೆಮ್ಮೆ ಇದೆ ಎಂದು ಕರಾಳ ಸನ್ನಿವೇಶದಲ್ಲಿ ತಮ್ಮ ಬದ್ಧತೆ ನೆನಪಿಸಿಕೊಂಡರು.