ಬೆಂಗಳೂರು: ಸರ್ಕಾರ ಬೀಳಲಿದೆ, ಅಜಿತ್ ಪವಾರ್ ಹಾಗೂ ಶಿಂಧೆಗಳಿದ್ದಾರೆ ಅನ್ನೋ ಮಾಜಿ ಸಿಎಂ ಕುಮಾರಸ್ವಾಮಿ ಹೇಳಿಕೆಗೆ ಸಂಸದ ಡಿ.ಕೆ.ಸುರೇಶ್ (D.K.Suresh) ತಿರುಗೇಟು ನೀಡಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಡಿ.ಕೆ.ಸುರೇಶ್, ವಿಪಕ್ಷಗಳಿಗೆ ಅಧಿಕಾರ ಒಂದೇ ಮುಖ್ಯ ಅಂತೇಳಿ ಪದೇ ಪದೇ ಎಲ್ಲಾ ನಾಯಕರು ಸ್ಪಷ್ಟಪಡಿಸುತ್ತಿದ್ದಾರೆ. ವಿಪಕ್ಷವಾಗಿ ಸೃಜನಾತ್ಮಕ ಕೆಲಸ ಮಾಡಬೇಕು. ಅದನ್ನ ಬಿಟ್ಟು. ಅಧಿಕಾರ ಹೇಗೆ ಹಿಡಿಯಬೇಕು ಅಂತ ವಾಮ ಮಾರ್ಗದ ಮುಖಾಂತರ ಪ್ರಯತ್ನ ಮಾಡ್ತಿದಾರೆ ಎಂದು ಟೀಕಿಸಿದ್ದಾರೆ. ಇದನ್ನೂ ಓದಿ: ಸಿದ್ದರಾಮಯ್ಯ ಮೂರ್ಖರಲ್ಲ, ತುಷ್ಟೀಕರಣದಿಂದಲೇ 2018ರಲ್ಲಿ ಅವರು ಸೋತಿದ್ದು: ಪ್ರಹ್ಲಾದ್ ಜೋಶಿ ವಾಗ್ದಾಳಿ
Advertisement
Advertisement
ಕುದುರೆ ವ್ಯಾಪಾರ ಹೇಗೆ ಮಾಡಬೇಕು ಅನ್ನೋ ಬಗ್ಗೆ ಚಿಂತನೆ ಮಾಡ್ತಿದ್ದಾರೆ. ವಿಪಕ್ಷಗಳು ಬೇರೇನೂ ಮಾಡ್ತಿಲ್ಲ. ಕೆಲವರಿಗೆ ಅಭ್ಯಾಸ ಆಗೋಗಿದೆ. ಅಂಥವರು ಹೀಗೆಲ್ಲಾ ಮಾತಾಡುತ್ತಿರುತ್ತಾರೆ. ಅವರ ಆಸೆ ಖಂಡಿತ ಈಡೇರಲ್ಲ. ಐದು ವರ್ಷಗಳ ಕಾಲ ಕಾಂಗ್ರೆಸ್ ಅಧಿಕಾರದಲ್ಲಿ ಇರಲಿದೆ ಎಂದು ತಿಳಿಸಿದ್ದಾರೆ.
Advertisement
ಯಾರು ಏನೂ ಮಾಡಲು ಸಾಧ್ಯವಿಲ್ಲ. ಸದ್ಯ ಬಿಜೆಪಿ, ಜೆಡಿಎಸ್ ನಾಯಕರು ಭ್ರಮೆಯಲ್ಲಿದ್ದಾರೆ. ಭ್ರಮೆಯಿಂದ ಈಚೆ ಬರಬೇಕು. ಅವರಲ್ಲಿರುವ ಲೋಪ ಮುಚ್ಚಿಕೊಳ್ಳಲು, ಪಕ್ಷ ಉಳಿಸಿಕೊಳ್ಳಲು, ಅಸ್ತಿತ್ವ ಉಳಿಸಿಕೊಳ್ಳಲು ಬೇರೆ ರೀತಿ ದೂಷಣೆ ಮಾಡ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಮದ್ಯಪ್ರಿಯರ ಬೇಡಿಕೆಗಳು ನ್ಯಾಯಯುತವಾಗಿವೆ: ಸಚಿವ ಲಾಡ್
Advertisement
ಸಂಸದರ ಅಮಾನತು ವಿಚಾರ ಕುರಿತು ಮಾತನಾಡಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಂಸತ್ ದೇಗುಲ. ವಿಪಕ್ಷಗಳನ್ನ ಸಂಪೂರ್ಣ ಹೊರಗಿಟ್ಟು ಸದನ ನಡೆಸಿದ್ದಾರೆ. 75 ವರ್ಷಗಳು ಕಳೆದಿದೆ. ಪ್ರತಿ ಬಾರಿಯೂ ವಿಪಕ್ಷಗಳು ಸಂಸತ್ ಒಳಗೆ, ಹೊರಗೆ ಪ್ರತಿಭಟನೆ ಮಾಡಿಕೊಂಡು ಬಂದಿವೆ. ದೇಶದ, ರಾಜ್ಯದ ವಿಚಾರ ಇಟ್ಟುಕೊಂಡು ಪ್ರತಿಭಟನೆ ಮಾಡಲಾಗಿದೆ. ಧರಣಿಯನ್ನ ವ್ಯಕ್ತಪಡಿಸುವುದು ನಮ್ಮ ಹಕ್ಕು. ಆ ಹಕ್ಕನ್ನ ಬಿಜೆಪಿ ಹತ್ತಿಕ್ಕುವ ಕೆಲಸ ಮಾಡಿದೆ. ಸಂಸತ್ ಭವನ ಭದ್ರತೆ ಇಲ್ಲದಂತಾಗಿದೆ. ಇಡೀ ದೇಶವೇ ಚಿಂತನೆ ಮಾಡುವ ವಿಚಾರ. ಪ್ರತಿ ಸಲ ಪ್ರಧಾನಿ ಭದ್ರತೆ ಬಗ್ಗೆ ಹೇಳ್ತಿರ್ತಾರೆ. ಅವರ ಲೋಪ ಮುಚ್ಚಿಕೊಳ್ಳಲು ಹೀಗೆ ಮಾಡ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.
ಈ ಬಾರಿ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆ ವಿಚಾರದ ಬಗ್ಗೆಯೂ ಪ್ರತಿಕ್ರಿಯಿಸಿ, ನನಗೇನು ಅಭ್ಯಂತರ ಇಲ್ಲ. ಪಕ್ಷ ಎಲ್ಲಿ ಸ್ಪರ್ಧೆ ಮಾಡುವಂತೆ ಹೇಳುತ್ತದೆಯೋ ನನಗೆ ಗೊತ್ತಿಲ್ಲ. ಹಿಂದೆಯೂ ಕೂಡ ನಾನು ಹೇಳಿದ್ದೆ. ಸ್ಪರ್ಧೆ ಬಗ್ಗೆ ನನಗೆ ಅಂತ ಆಸಕ್ತಿ ಇಲ್ಲ ಅಂತ. ಪಕ್ಷ ಏಲ್ಲಾದ್ರೂ ನಿಲ್ಲಬೇಕು ಅಂತ ಒತ್ತಾಯ ಮಾಡಿದ್ರೆ ನಿಲ್ಲಬೇಕಾಗಲಿದೆ. ಎಲ್ಲಿ ನಿಲ್ಲಬೇಕು ಅನ್ನೋದು ನನ್ನ ತೀರ್ಮಾನ ಅಲ್ಲ. ಪಕ್ಷದ, ಕಾರ್ಯಕರ್ತರು, ಹೈಕಮಾಂಡ್ ತೀರ್ಮಾನ. ಬೆಂಗಳೂರು ಮಾತ್ರವಲ್ಲ. ದೇಶದಲ್ಲೇ ಇಂಡಿಯಾ ಒಕ್ಕೂಟ ಅಧಿಕಾರಕ್ಕೆ ಬರಲಿದೆ ಎಂದಿದ್ದಾರೆ. ಇದನ್ನೂ ಓದಿ: ಹಿಜಬ್ ವಿಚಾರ ಸುಪ್ರೀಂ ಕೋರ್ಟ್‍ನಲ್ಲಿರುವಾಗ ಅನುಮತಿ ಕೊಡೋದು ಎಷ್ಟು ಸರಿ?: ರವಿಕುಮಾರ್