ಭೋಪಾಲ್: ಮಧ್ಯಪ್ರದೇಶದ ಬಿಜೆಪಿ ಸಂಸದರೊಬ್ಬರು ಶಾಲೆಯ ಶೌಚಾಲಯವನ್ನ ಸ್ವಚ್ಛಗೊಳಿಸಿದ್ದು, ಭಾರೀ ಸುದ್ದಿಯಾಗಿದೆ. ಇದರ ವಿಡಿಯೋ ಕೂಡ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
Advertisement
ಸಂಸದರದ ಜನಾರ್ದನ ಮಿಶ್ರಾ ಕೈಯಲ್ಲೇ ಟಾಯ್ಲೆಟ್ ಸ್ವಚ್ಛಗೊಳಿಸಿದ್ದು, ಕಮೋಡ್‍ನಲ್ಲಿ ಕಟ್ಟಿದ್ದ ಮಣ್ಣು ಹಾಗೂ ಕಸವನ್ನ ತೆಗೆದಿದ್ದಾರೆ. ಮಿಶ್ರಾ ಅವರ ಕಾರ್ಯಕ್ಕೆ ಜನರಿಂದ ಶ್ಲಾಘನೆ ವ್ಯಕ್ತವಾಗಿದೆ. ರಾಜಸ್ಥಾನ ಸಚಿವ ಕಾಳಿಚರಣ್ ಶರಾಫ್ ಸಾರ್ವಜನಿಕ ಸ್ಥಳದಲ್ಲಿ ಮೂತ್ರವಿಸರ್ಜನೆ ಮಾಡಿದ್ದ ಘಟನೆಯನ್ನ ಇದರ ಜೊತೆ ಜನ ಹೋಲಿಕೆ ಮಾಡ್ತಿದ್ದಾರೆ.
Advertisement
Advertisement
ಕಳೆದ ವಾರ ಮಿಶ್ರಾ ಅವರು ತನ್ನ ಕ್ಷೇತ್ರದ ಶಾಲೆಯೊಂದಕ್ಕೆ ಭೇಟಿ ನೀಡಿದ್ದರು. ಶಾಲೆಯಲ್ಲಿ ವಿದ್ಯಾರ್ಥಿಗಳು ಶೌಚಾಲಯವನ್ನ ಬಳಸದೇ ಹೊರಗಡೆ ಹೋಗ್ತಿದ್ದಿದ್ದು ಕಂಡುಬಂದಿತ್ತು. ಇದರಿಂದ ಕೋಪಗೊಂಡ ಮಿಶ್ರಾ ಶಾಲೆಯ ಶೌಚಾಲಯಗಳಿಗೆ ಹೋಗಿ ಪರಿಶೀಲಿಸಿದ್ರು. ತುಂಬಾ ಸಮಯದಿಂದ ಶೌಚಾಲಯವನ್ನ ಸ್ವಚ್ಛ ಮಾಡದೇ ಇದ್ದಿದ್ದು ಕಾಣಿಸಿತ್ತು.
Advertisement
ಶಾಲೆಯವರು ಟಾಯ್ಲೆಟ್‍ಗಳನ್ನ ಸರಿಯಾಗಿ ನಿರ್ವಹಣೆ ಮಾಡದಿರೋದನ್ನ ಕಂಡು ಅಸಮಾಧಾನಗೊಂಡ ಮಿಶ್ರಾ, ಸ್ವತಃ ತಾವೇ ಕ್ಲೀನ್ ಮಾಡಿದ್ರು. ಸಂಸದರು ಎಡಗೈ ಮೂಲಕ ಟಾಯ್ಲೆಟ್‍ನಲ್ಲಿ ಸಿಲುಕಿಕೊಂಡಿದ್ದ ಕಸವನ್ನು ತೆಗೆಯೋದನ್ನ ವಿಡಿಯೋದಲ್ಲಿ ಕಾಣಬಹುದು.
ಸ್ವತಃ ಸಂಸದರೇ ವಿಡಿಯೋವನ್ನ ಟ್ವೀಟ್ ಮಾಡಿದ್ದು, ಇದೀಗ ವೈರಲ್ ಆಗಿದೆ. ಇದನ್ನೂ ಓದಿ: ಬಿಜೆಪಿ ಮಂತ್ರಿಯಿಂದಲೇ ರಸ್ತೆ ಬದಿ ಮೂತ್ರ ವಿಸರ್ಜನೆ – ಫೋಟೋ ವೈರಲ್
#WATCH: BJP MP Janardan Mishra clean a school toilet in Rewa's Khajuha Village after it had clogged and been out of use due to accumulation of soil. #MadhyaPradesh (15.02.2018) pic.twitter.com/O0kx7OJ19d
— ANI (@ANI) February 17, 2018