ನೂತನ ಸಂಸತ್ ಭವನ ಪ್ರವೇಶದ ಅನುಭವ ಹಂಚಿಕೊಂಡ ಸಂಸದೆ, ನಟಿ ಸುಮಲತಾ

Public TV
1 Min Read
Sumalatha Ambarish 4

ದೆಹಲಿಯಲ್ಲಿ (Delhi) ಇಂದು ನಡೆದ ನೂತನ ಸಂಸತ್ ಭವನ (Parliament House) ಉದ್ಘಾಟನಾ ಸಮಾರಂಭದಲ್ಲಿ ನಟಿ, ಸಂಸದೆ ಸುಮಲತಾ ಅಂಬರೀಶ್ (Sumalatha Ambarish) ಭಾಗಿಯಾಗಿದ್ದಾರೆ. ನೂತನ ಕಟ್ಟಡ ಲೋಕಾರ್ಪಣೆಯ ನಂತರ ಸಂಸದರು ಕಟ್ಟಡ ಒಳಗೆ ಪ್ರವೇಶ ಮಾಡಿ, ಕೆಲವರು ಮಾತು ಕೂಡ ಆಡಿದ್ದಾರೆ. ಈ ಎಲ್ಲ ಅನುಭವನ್ನು ಸುಮಲತಾ ಅಂಬರೀಶ್ ತಮ್ಮ ಸೋಷಿಯಲ್ ಮೀಡಿಯಾ ಪೇಜ್ ನಲ್ಲಿ ಬರೆದುಕೊಂಡಿದ್ದಾರೆ.

Sumalatha Ambarish 3

‘ಲೋಕಸಭಾ ಸದಸ್ಯಳಾಗಿ ಇಂದು ನೂತನ ಸಂಸತ್ ಭವನದ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳುವ ಸೌಭಾಗ್ಯ ನನ್ನದಾಗಿತ್ತು. ಇದು ನಮ್ಮ ದೇಶಕ್ಕೆ ಐತಿಹಾಸಿಕ ದಿನವಾಗಿದೆ ಹಾಗೂ ನಾನು ಅದರ ಭಾಗವಾಗಿರುವುದಕ್ಕೆ ಹೆಮ್ಮೆಪಡುತ್ತೇನೆ’ ಎಂದು ಅವರು ಫೇಸ್ ಬುಕ್ ಪೇಜ್ ನಲ್ಲಿ ಸುಮಲತಾ ಬರೆದುಕೊಂಡಿದ್ದಾರೆ. ಇದನ್ನೂ ಓದಿ:‘RRR’ ರೈಟರ್ ವಿಜೇಂದ್ರ ಪ್ರಸಾದ್‌ ಜೊತೆ ಕೇದರನಾಥ್‌ಗೆ ಕಂಗನಾ ಭೇಟಿ

Sumalatha Ambarish 1

ಅಲ್ಲದೇ, ‘ಹೊಸ ಸಂಸತ್ ಕಟ್ಟಡವು ನಮ್ಮ ರಾಷ್ಟ್ರದ ಪ್ರಗತಿ ಮತ್ತು ಸಮೃದ್ಧಿಯ ಸಂಕೇತವಾಗಿದೆ. ಸಂಸತ್ ಭವನವು ಅತ್ಯಾಧುನಿಕ ಸೌಲಭ್ಯದಿಂದ ಕೂಡಿದ್ದು ಅದು ದೇಶದ ಜನರಿಗೆ ಉತ್ತಮ ಸೇವೆ ಸಲ್ಲಿಸಲು ಅನುವು ಮಾಡಿಕೊಡುತ್ತದೆ ಎನ್ನುವ ವಿಶ್ವಾಸ ನನ್ನದು’ ಎಂದು ವಿಶ್ವಾಸವನ್ನೂ ವ್ಯಕ್ತ ಪಡಿಸಿದ್ದಾರೆ ಸುಮಲತಾ ಅಂಬರೀಶ್.

Sumalatha Ambarish 2

ಇದೇ ಸಂದರ್ಭದಲ್ಲಿ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ (HD Deve Gowda) ಅವರನ್ನೂ ಭೇಟಿ ಮಾಡಿರುವ ಸಂಸದೆ, ಹಿರಿಯರ ಆರೋಗ್ಯವನ್ನು ವಿಚಾರಿಸಿದೆ ಎಂದು ತಿಳಿಸಿದ್ದಾರೆ. ಅದೊಂದು ನೆನಪಿನಲ್ಲಿ ಇಡುವಂತಹ ಭೇಟಿ ಕೂಡ ಆಗಿತ್ತು ಎಂದು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

Share This Article