ಬೆಂಗಳೂರು: ಮಂಡ್ಯ ಸಂಸದೆ ಸುಮಲತಾ (Sumalatha) ಅವರು ಬಿಜೆಪಿ ಸರ್ಕಾರಕ್ಕೆ ಬೆಂಬಲ ವ್ಯಕ್ತಪಡಿಸಿದ್ದರೂ ಪಕ್ಷ ಸೇರಲು ಈಗ ಸಾಧ್ಯವಿಲ್ಲ. ಪಕ್ಷೇತರ ಸಂಸದೆ ಆಗಿರುವ ಕಾರಣ ಈಗಲೇ ಸುಮಲತಾ ಬಿಜೆಪಿ (BJP) ಸೇರಲು ಅವರಿಗೆ ಕಾನೂನು ತೊಡಕು ಎದುರಾಗುತ್ತಿದೆ.
ಹೌದು. ಲೋಕಸಭೆ ಚುನಾವಣೆಯ ಸಮಯದಲ್ಲಿ ಮೈಸೂರಿನಲ್ಲಿ ಭಾಷಣ ಮಾಡಿದ ಪ್ರಧಾನಿ ನರೇಂದ್ರ ಮೋದಿ (PM Narendra Modi) ಮಂಡ್ಯದಲ್ಲಿ ಸುಮಲತಾ ಅವರನ್ನು ಗೆಲ್ಲಿಸಿ ಎಂದು ಪ್ರಚಾರ ಮಾಡಿದ್ದರು. ಹೀಗಾಗಿ ಚುನಾವಣೆಯಲ್ಲಿ ಗೆದ್ದ ಬಳಿಕ ಸುಮಲತಾ ಬಿಜೆಪಿ ಸೇರಬಹುದು ಎಂಬ ಮಾತು ಕೇಳಿ ಬಂದಿತ್ತು. ಆದರೆ ಅವರು ಬಿಜೆಪಿಗೆ ಸೇರ್ಪಡೆಯಾಗಿರಲಿಲ್ಲ. ಈಗ ವಿಧಾನಸಭಾ ಚುನಾವಣೆ (Vidhan Sabha Election) ಹತ್ತಿರ ಬರುತ್ತಿದ್ದಂತೆ ಸುಮಲತಾ ಅಧಿಕೃತವಾಗಿ ಬಿಜೆಪಿಯನ್ನು ಬೆಂಬಲಿಸಿದ್ದರೂ ಸಂವಿಧಾನದ 10ನೇ ಶೆಡ್ಯೂಲ್‌ನಲ್ಲಿರುವ (Schedule 10 of Indian Constitution) ನಿಯಮದಿಂದಾಗಿ ಈಗ ಪಕ್ಷವನ್ನು ಸೇರಲು ಸಾಧ್ಯವಿಲ್ಲ. ಇದನ್ನೂ ಓದಿ: ನಾನು ರಾಜಕೀಯದಲ್ಲಿ ಇರುವವರೆಗೆ ಅಭಿಷೇಕ್ ರಾಜಕೀಯಕ್ಕೆ ಬರಲ್ಲ: ಸುಮಲತಾ
Advertisement
Advertisement
10ನೇ ಶೆಡ್ಯೂಲ್‌ನಲ್ಲಿ ಏನಿದೆ?
ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದ ಬಳಿಕ ಪಕ್ಷಾಂತರ ಮಾಡುವುದನ್ನು ತಪ್ಪಿಸಲು 1985ರಲ್ಲಿ ಸಂವಿಧಾನಕ್ಕೆ 52ನೇ ತಿದ್ದುಪಡಿ ಮಾಡಿ ಸಂಸತ್ತು ಮತ್ತು ರಾಜ್ಯ ಶಾಸಕಾಂಗದಲ್ಲಿ ಪಕ್ಷಾಂತರವನ್ನು ನಿಷೇಧಿಸಿತು. ರಾಜೀವ್ ಗಾಂಧಿ (Rajiv Gandhi) ಅವರು ಪ್ರಧಾನಿಯಾಗಿದ್ದ ಅವಧಿಯ 1985ರ ಜನವರಿ 30ರಂದು ಪಕ್ಷಾಂತರ ನಿಷೇಧ ಕಾನೂನು (Anti-Defection Law) ಜಾರಿಗೆ ತರಲಾಯಿತು. 2003ರಲ್ಲಿ ಕೇಂದ್ರದಲ್ಲಿ ಅಟಲ್ ಬಿಹಾರಿ ವಾಜಪೇಯಿ (Atal Bihari Vajpayee) ಪ್ರಧಾನಿಯಾಗಿದ್ದಾಗ ಈ ಕಾಯ್ದೆಗೆ ಮತ್ತಷ್ಟು ಬಲ ತುಂಬಲಾಯಿತು. ಇದರ ಅಡಿಯಲ್ಲಿ ಪಕ್ಷಾಂತರ ಮಾಡುವವರನ್ನು ಅನರ್ಹರೆಂದು ಘೋಷಿಸಲಾಗಿದೆ. ಅಷ್ಟೇ ಅಲ್ಲದೇ ಸ್ವತಂತ್ರವಾಗಿ ಸ್ಪರ್ಧಿಸಿ ಆಯ್ಕೆಯಾಗುವ ಸದಸ್ಯರು ಪಕ್ಷವೊಂದನ್ನು ಸೇರಲು ಹಲವು ನಿಯಮಗಳನ್ನು ಸೇರಿಸಲಾಯಿತು.
Advertisement
Advertisement
ನಿಯಮ ಏನು?
ಆಯ್ಕೆಯಾದ ಆರು ತಿಂಗಳೊಳಗೆ ಯಾವುದಾದರೊಂದು ರಾಜಕೀಯ ಪಕ್ಷವನ್ನು ಮುಕ್ತವಾಗಿ ಸೇರ್ಪಡೆಯಾಗಬಹುದು. ಮೊದಲ ಆರು ತಿಂಗಳ ಅವಧಿ ಅಂತ್ಯವಾದ ಬಳಿಕ ರಾಜಕೀಯ ಪಕ್ಷವೊಂದನ್ನು ಅಧಿಕೃತವಾಗಿ ಸೇರಲು ಅವಕಾಶಗಳಿಲ್ಲ.
ಲೋಕಸಭೆ ಅಥವಾ ರಾಜ್ಯಸಭೆ ಪೈಕಿ ಒಂದು ಸದನಕ್ಕೆ ನಾಮನಿರ್ದೇಶಿತವಾದ ಸದಸ್ಯರು ಅಥವಾ ಸ್ವತಂತ್ರ ಅಭ್ಯರ್ಥಿಯಾಗಿ ಆಯ್ಕೆಯಾಗುವ ಸದಸ್ಯರು, ಹೀಗೆ ಆಯ್ಕೆಯಾದ 6 ತಿಂಗಳ ನಂತರ ಯಾವುದಾದರೂ ರಾಜಕೀಯ ಪಕ್ಷಕ್ಕೆ ಸೇರ್ಪಡೆಗೊಂಡರೆ ಅವರು ಅನರ್ಹಗೊಳ್ಳುತ್ತಾರೆ. ಅನರ್ಹಗೊಂಡ ಬಳಿಕ 6 ವರ್ಷದವರೆಗೆ ಚುನಾವಣೆಗೆ ಸ್ಪರ್ಧೆ ಮಾಡಲು ಸಾಧ್ಯವಿಲ್ಲ. ಇದನ್ನೂ ಓದಿ: ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರಕ್ಕೆ ನನ್ನ ಸಂಪೂರ್ಣ ಬೆಂಬಲ: ಸುಮಲತಾ
ಸುಮಲತಾ ಮುಂದೇನು?
ಚುನಾವಣೆಯಿಂದ ಗೆದ್ದ 6 ತಿಂಗಳ ಒಳಗಡೆ ಬಿಜೆಪಿ ಸೇರ್ಪಡೆಯಾಗದ ಕಾರಣ ಸುಮಲತಾ ಅವರು ಈಗ ಯಾವುದೇ ಪಕ್ಷದ ಸದಸ್ಯರಾದರೆ ಅವರನ್ನು ಲೋಕಸಭೆ ಸ್ಪೀಕರ್ ಅನರ್ಹಗೊಳಿಸಬಹುದು. ಒಂದು ವೇಳೆ ರಾಜೀನಾಮೆ ನೀಡಿ ಬಿಜೆಪಿಯನ್ನು ಬೆಂಬಲಿಸಿದರೆ ಅನರ್ಹರಾಗುವುದಿಲ್ಲ. ಆದರೆ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಕಾನೂನು ತೊಡಕಿರುವ ಹಿನ್ನಲೆ ಅಧಿಕೃತವಾಗಿ ಬಿಜೆಪಿ ಸೇರ್ಪಡೆಯಾಗುತ್ತಿಲ್ಲ ಬದಲಿಗೆ ಪ್ರಧಾನಿ ನರೇಂದ್ರ ಮೋದಿ ಅವರ ಬಿಜೆಪಿ ಸರ್ಕಾರಕ್ಕೆ ಬೆಂಬಲ ನೀಡುತ್ತಿದ್ದೇನೆ ಎಂದು ಬಹಿರಂಗವಾಗಿಯೇ ಘೋಷಿಸಿದ್ದಾರೆ.
ಪಕ್ಷ ಸೇರದೇ ಇನ್ನು ಮುಂದೆ ಬಾಹ್ಯವಾಗಿ ಬಿಜೆಪಿಯನ್ನು ಬೆಂಬಲಿಸಿದರೂ ಬಿಜೆಪಿಯ ಸಂಸದೀಯ ಪಕ್ಷದ ಸಭೆಯಲ್ಲಿ ಸುಮಲತಾ ಭಾಗವಹಿಸಲು ಸಾಧ್ಯವಿಲ್ಲ. ಬಾಹ್ಯ ಬೆಂಬಲ ನೀಡಿದರೂ ಬಿಜೆಪಿ ಹೊರಡಿಸುವ ವಿಪ್ ಅನ್ವಯವಾಗುವುದಿಲ್ಲ.
ಸಮ್ಮಿಶ್ರ ಸರ್ಕಾರಕ್ಕೆ ರಾಜಕೀಯ ಪಕ್ಷಗಳು ಬೆಂಬಲಿಸುವಂತೆ ಸ್ವತಂತ್ರ ಅಭ್ಯರ್ಥಿ ಬೆಂಬಲ ಘೋಷಿಸಬಹುದು. ಆದರೆ ಯಾವುದೇ ಪಕ್ಷವನ್ನು ಮೊದಲ 6 ತಿಂಗಳ ಅವಧಿ ಮುಕ್ತಾಯವಾದ ಬಳಿಕ ಸೇರಲು ಸಾಧ್ಯವಿಲ್ಲ.