ಪಣಜಿ: ಬಾಲಿವುಡ್ ಕಿರುತೆರೆ ನಾಗಿನ್ ಮೌನಿರಾಯ್ ಇಂದು ಗೋವಾದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಮೌನಿ ರಾಯ್ ಇಂದು ಗೋವಾದಲ್ಲಿ ಸೂರಜ್ ನಂಬಿಯಾರ್ ಅವರೊಂದಿಗೆ ಅದ್ದೂರಿಯಾಗಿ ವಿವಾಹವಾಗಿದ್ದಾರೆ. ವಧು ಮೌನಿ ಫೋಟೋವನ್ನ ಗಾಯಕ ಮನ್ಮೀತ್ ಸಿಂಗ್ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದು, ಮೌನಿ ಕ್ಯೂಟ್ ಆಗಿ ಕಾಣಿಸುತ್ತಿದ್ದಾರೆ. ಫೋಟೋದಲ್ಲಿ ಮೌನಿರಾಯ್ ಅವರು ಕೆಂಪು ಮತ್ತು ಚಿನ್ನದ ಕಸೂತಿ ಹೊಂದಿರುವ ಬಿಳಿ ಸೀರೆ ಮತ್ತು ಕಾಂಟ್ರಾಸ್ಟ್ ಕೆಂಪು ಕುಪ್ಪಸವನ್ನು ಧರಿಸಿದ್ದು, ದಕ್ಷಿಣ ಭಾರತದ ಸಾಂಪ್ರದಾಯಿಕ ಆಭರಣಗಳಲ್ಲಿ ಮುದ್ದಾಗಿ ಕಾಣಿಸುತ್ತಿದ್ದಾರೆ. ಇದನ್ನೂ ಓದಿ: ಮದುವೆಗೂ ಮುನ್ನವೇ ವರನ ಜೊತೆಗಿರುವ ಫೋಟೋ ಶೇರ್ ಮಾಡಿದ ಮೌನಿ ರಾಯ್
View this post on Instagram
ಮೌನಿ ಮದುವೆ ಫೋಟೋ ಮತ್ತು ವಿಡಿಯೋವನ್ನು ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಫೋಟೋದಲ್ಲಿ, ಸೂರಜ್ ಕುರ್ತಾ ಮತ್ತು ಬಿಳಿ ಧೋತಿಯಲ್ಲಿ ಸುಂದರವಾಗಿ ಕಾಣುತ್ತಿದ್ದಾರೆ. ನಾಗಿನ್ ಧಾರವಾಹಿಯ ಸಹನಟ ಅರ್ಜುನ್ ಬಿಜ್ಲಾನಿ, ಮೌನಿ ಮತ್ತು ಸೂರಜ್ ವರ್ಮಲಾ ಬದಲಾಯಿಸಿಕೊಳ್ಳುವ, ಮಂಗಳಸೂತ್ರ ಕಟ್ಟುವ ಫೋಟೋಗಳನ್ನು ಶೇರ್ ಮಾಡಿದ್ದಾರೆ.
View this post on Instagram
ಮೌನಿರಾಯ್ ಅವರು ಮದುವೆಯಾಗುವ ಕೆಲವು ಗಂಟೆಗಳ ಹಿಂದೆ ಸೂರಜ್ ಜೊತೆಗೆ ತೆಗೆಸಿಕೊಂಡಿದ್ದ ಫೋಟೋವನ್ನು ಇನ್‍ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದರು. ಈ ಫೋಟೋದಲ್ಲಿ ಸೂರಜ್ ಬಿಳಿ ಬಣ್ಣದ ಕುರ್ತಾ ಧರಿಸಿದ್ದರೆ, ಮೌನಿರಾಯ್ ಕೆಂಪು ಬಣ್ಣದ ಸೂಟ್ ಜೊತೆಗೆ ದುಪ್ಪಟ್ಟಾ ತೊಟ್ಟು ಮಿಂಚಿದ್ದಾರೆ. ಇದನ್ನೂ ಓದಿ: ಅದ್ದೂರಿಯಾಗಿ ನಡೆಯುತ್ತಿದೆ ಮೌನಿ ರಾಯ್ ಅರಿಶಿನ ಶಾಸ್ತ್ರ
View this post on Instagram
ನಿನ್ನೆ ಮೌನಿ ಅದ್ದೂರಿಯಾಗಿ ಹಲ್ದಿ ಮತ್ತು ಮೆಹಂದಿ ಶಾಸ್ತ್ರ ಮಾಡಿಕೊಂಡಿದ್ದಾರೆ. ಈ ಸಮಾರಂಭದ ಅಮೂಲ್ಯ ಕ್ಷಣಗಳನ್ನು ಅರ್ಜುನ್ ಬಿಜ್ಲಾನಿ ಸ್ಟೋರಿಯಲ್ಲಿ ಹಂಚಿಕೊಂಡಿದ್ದರು.