– ಬೆಲೆ ಎಷ್ಟು? ಗುಣವೈಶಿಷ್ಟ್ಯ ಏನು?
ನವದೆಹಲಿ: ಲಿನೊವೋ ಒಡೆತನದ ಮೊಟೊರೊಲ ಸ್ಮಾರ್ಟ್ ಫೋನ್ ತಯಾರಿಕಾ ಸಂಸ್ಥೆಯು ತನ್ನ ನೂತನ ಜೆಡ್ 3, 5ಜಿ ಆವೃತ್ತಿಯ ನೂತನ ಸ್ಮಾಟ್ ಫೋನನ್ನು ಅಮೇರಿಕಾದ ಚಿಕಾಗೋದಲ್ಲಿ ಅನಾವರಣಗೊಳಿಸಿದೆ.
ವಿಶ್ವದ ಹಳೆಯ ಮೊಬೈಲ್ ತಯಾರಿಕಾ ಸಂಸ್ಥೆಯಾದ ಮೊಟೊರೊಲಾ ಸದ್ಯ ಲಿನೊವೋ ಕಂಪೆನಿಯ ಒಡೆತನದಲ್ಲಿ ಸ್ಮಾರ್ಟ್ ಫೋನ್‍ಗಳನ್ನು ತಯಾರಿಸುತ್ತಿದೆ. ಅತ್ಯಾಧುನಿಕ ಸೌಲಭ್ಯಗಳನ್ನು ಒಳಗೊಂಡಂತೆ ನೂತನ ಫೀಚರ್ ಹೊಂದಿರುವ ಮೊಟೊರೊಲಾ ಈಗ ತನ್ನ 5ಜಿ ಆವೃತ್ತಿಯ ನೂತನ ಮೊಟೊರೊಲಾ ಜೆಡ್ 3 ಸ್ಮಾರ್ಟ್ ಫೋನನ್ನು ಮಾರುಕಟ್ಟೆಗೆ ಬಿಡುಗಡೆಮಾಡಿದೆ.
Advertisement
Advertisement
ಮೊಟೊರೊಲಾ ಜೆಡ್ 3, 5ಜಿ ಸ್ಮಾರ್ಟ್ ಫೋನ್‍ನಲ್ಲಿ ಸೆಲ್ಫಿಗಾಗಿ 8ಎಂಪಿ ಸ್ಮಾರ್ಟ್ ಟೋನ್ ಹೆಚ್‍ಡಿಆರ್ ಕ್ಯಾಮೆರಾ ಹೊಂದಿದ್ದು, ಹಿಂದುಗಡೆ 12ಎಂಪಿ+12ಎಂಪಿ ಹೊಂದಿರುವ ಡ್ಯುಯಲ್ ಕ್ಯಾಮೆರಾವಿದೆ. ಸೆರಾಮಿಕ್ ಬ್ಲಾಕ್ ಬಣ್ಣಗಳಲ್ಲಿ ಈ ಸ್ಮಾರ್ಟ್ ಫೋನ್ ಲಭ್ಯವಿದೆ. 2019ರ ವೇಳೆಗೆ ಭಾರತದಲ್ಲಿ ಈ ಸ್ಮಾರ್ಟ್ ಫೋನ್ ಲಭ್ಯವಿರಲಿದೆ ಎನ್ನಲಾಗಿದೆ.
Advertisement
ಬೆಲೆ ಎಷ್ಟು?
4ಜಿಬಿ RAM/64 ಜಿಬಿ ಆಂತರಿಕ ಮೆಮೊರಿಯ ಸ್ಮಾರ್ಟ್ ಫೋನಿಗೆ ಅಮೆರಿಕಾದಲ್ಲಿ 480 ಡಾಲರ್ ನಿಗದಿಪಡಿಸಿದೆ. (ಅಂದಾಜು 32,000 ರೂಪಾಯಿ)
Advertisement
ಜೆಡ್ 3 ಸ್ಮಾರ್ಟ್ ಫೋನಿನ ಗುಣ ವೈಶಿಷ್ಟ್ಯಗಳು:
ಬಾಡಿ ಮತ್ತು ಡಿಸ್ಪ್ಲೇ: 156.5 x 76.5 x 6.8 ಮಿ.ಮೀ., 156 ಗ್ರಾಂ ತೂಕ, 5ಜಿ ಆವೃತ್ತಿಯ ಸಿಂಗಲ್ ಸಿಮ್(ನ್ಯಾನೋ ಸಿಮ್) ವಿತ್ ಮೆಮೊರಿ ಕಾರ್ಡ್ ಸೌಲಭ್ಯ, 6.1 ಇಂಚಿನ ಸೂಪರ್ ಅಮಾಲಾಯಿಡ್ ಕೆಪಾಸಿಟೆಟಿವ್ ಟಚ್ ಸ್ಕ್ರೀನ್(1080×160 ಪಿಕ್ಸೆಲ್, 18:9 ಅನುಪಾತ 402ಪಿಪಿಐ)
ಪ್ಲಾಟ್‍ಫಾರಂ ಮತ್ತು ಮೆಮೊರಿ:
ಆಂಡ್ರಾಯ್ಡ್ 8.1 (ಓರಿಯೋ), ಕ್ವಾಲಕಂ ಎಂಎಸ್‍ಎಂ 8998 ಸ್ನ್ಯಾಪ್ ಡ್ರಾಗನ್ 835 ಆಕ್ಟಾ ಕೋರ್ ಪ್ರೊಸೆಸರ್ 2.35 ಗೀಗಾಹಟ್ರ್ಸ್ ಸ್ಪೀಡ್, ಅಡ್ರಿನೋ 540 ಗ್ರಾಫಿಕ್ಸ್ ಪ್ರೊಸೆಸರ್, 1 ಟಿಬಿವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ, 4ಜಿಬಿ RAM/64 ಜಿಬಿ ಆಂತರಿಕ ಮೆಮೊರಿ ಹೊಂದಿದೆ.
ಕ್ಯಾಮೆರಾ ಹಾಗೂ ಇತರೆ ಫೀಚರ್ ಗಳು:
ಮುಂಭಾಗ 8ಎಂಪಿ ಹೆಚ್‍ಡಿಆರ್ ಕ್ಯಾಮೆರಾ, ಹಿಂಭಾಗ 12ಎಂಪಿ+12ಎಂಪಿ ಆಟೋಮ್ಯಾಟಿಕ್ ಹೆಚ್‍ಡಿಆರ್ ಜೊತೆಗೆ, ಆಟೋ ಬ್ಯಾಕ್‍ಗ್ರೌಂಡ್ ಬ್ಲರ್ ಪ್ಯೂಚರ್ ಹಾಗೂ ಹೆಚ್‍ಡಿ ವಿಡಿಯೋ ರೆಕಾರ್ಡಿಂಗ್ ಸೌಲಭ್ಯ ಹೊಂದಿದ್ದು, ಮುಂಭಾಗ ಹಾಗೂ ಹಿಂಭಾಗದಲ್ಲಿ ಗೊರಿಲ್ಲಾ ಸ್ಕ್ರೀನ್ ಪ್ರೊಟೆಕ್ಷನ್, ಫೇಸ್ ಡಿಟೆಕ್ಷನ್ ಅನ್‍ಲಾಕ್, ಫಿಂಗರ್ ಪ್ರಿಂಟ್ ಲಾಕ್ ಹಾಗೂ 3,000 ಎಂಎಹೆಚ್ ತೆಗೆಯಲು ಅಸಾಧ್ಯವಾದ ಬ್ಯಾಟರಿಯನ್ನು ಹೊಂದಿದೆ.
https://www.youtube.com/watch?v=tWaGF1pz1uo&feature=youtu.be
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews