BelgaumDistrictsKarnatakaLatestMain Post

ನಿಂತಿದ್ದ ಟ್ರ್ಯಾಕ್ಟರ್‌ಗೆ ಬೈಕ್ ಡಿಕ್ಕಿ – ಮಸಣ ಸೇರಿದ ಸ್ನೇಹಿತರು

ಚಿಕ್ಕೋಡಿ: ರಸ್ತೆ ಬದಿ ನಿಂತಿದ್ದ ಟ್ರ್ಯಾಕ್ಟರ್ ವಾಹನಕ್ಕೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸ್ನೇಹಿತರು ಮೃತ ಪಟ್ಟಿರುವ ದುರ್ಘಟನೆ ಬೆಳಗಾವಿ (Belgavi) ಜಿಲ್ಲೆ ಹುಕ್ಕೇರಿ ತಾಲೂಕಿನ ರಕ್ಷಿ-ಶಿರಗಾಂವ ರಸ್ತೆಯಲ್ಲಿ ನಡೆದಿದೆ.

ಸವದತ್ತಿ ತಾಲೂಕಿನ ಚಚಡಿ ಗ್ರಾಮದ ಮಲ್ಲನಗೌಡ ಯಲ್ಲನಗೌಡ ಪಾಟೀಲ್(21) ಹಾಗೂ ಸಿದ್ಧಾರೂಢ ವೀರಭದ್ರ ಕರೋಶಿ (24) ಮೃತ ಯುವಕರು. ಇವರಿಬ್ಬರೂ ರಕ್ಷಿ ಕಡೆಯಿಂದ ಶಿರಗಾಂವ ಗ್ರಾಮದ ಕಡೆಗೆ ಬೈಕ್‍ನಲ್ಲಿ ವೇಗವಾಗಿ ಹೋಗುತ್ತಿದ್ದ ವೇಳೆ ರಸ್ತೆ ಬದಿಯ ಟ್ರ್ಯಾಕ್ಟರ್ ವಾಹನಕ್ಕೆ ರಭಸದಿಂದ ಡಿಕ್ಕಿ ಹೊಡಿದಿದೆ. ಇದನ್ನೂ ಓದಿ: ಪೌಷ್ಟಿಕವಾದ ದನದ ಮಾಂಸ ತಿಂದು ಬೆಳೆದವರು ಎಂದಿದ್ದ SDPI ನಾಯಕ ಅಫ್ಸರ್‌ ಅರೆಸ್ಟ್‌

ಪರಿಣಾಮ ತಲೆಗೆ ಬಲವಾದ ಪೆಟ್ಟು ಬಿದ್ದಿತ್ತು. ಸ್ಥಳೀಯರ ಸಹಾಯದಿಂದ ಅಂಬುಲೆನ್ಸ್ (Ambulance) ಮೂಲಕ ಆಸ್ಪತ್ರೆಗೆ (Hospital) ರವಾನಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಬ್ಬರು ಕೂಡ ಸಾವನ್ನಪ್ಪಿದ್ದಾರೆ. ಈ ಸಂಬಂಧ ಹುಕ್ಕೇರಿ (Hukkeri) ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಹಾಸನದಲ್ಲಿ Pay MLA ಅಭಿಯಾನ- BJP ಕಾರ್ಯಕರ್ತರಿಂದ ಪೊಲೀಸರಿಗೆ ದೂರು

Live Tv

Leave a Reply

Your email address will not be published. Required fields are marked *

Back to top button