ಬೆಂಗಳೂರು: ಕೊರೊನಾ ವೈರಸ್ ಸೋಂಕು ಎಲ್ಲೆಡೆ ಹರಡುತ್ತಿರುವ ಹಿನ್ನೆಲೆ ಮೂರು ತಿಂಗಳುಗಳ ಕಾಲ ತಾಯ್ತನ ಮುಂದೂಡಿಕೆ ಮಾಡಿಕೊಂಡರೆ ಒಳ್ಳೆಯದು ಎಂದು ಸ್ತ್ರಿರೋಗ ತಜ್ಞೆ ಡಾ. ಪದ್ಮಿನಿ ಪ್ರಸಾದ್ ಸಲಹೆ ನೀಡಿದ್ದಾರೆ.
ತಾಯ್ತನ ಮಹಿಳೆಯರ ಬಾಳಿನ ಪ್ರಮುಖ ಘಟ್ಟ. ಆದರೆ ಸದ್ಯ ಎಲ್ಲೆಡೆ ಕೊರೊನಾ ವೈರಸ್ ಭೀತಿ ಇರುವ ಕಾರಣಕ್ಕೆ ತಾಯ್ತನದ ಪ್ಲಾನ್ ಮಾಡಿದ ದಂಪತಿ ಇನ್ನು ಮೂರು ತಿಂಗಳ ಕಾಲ ಈ ಪ್ಲಾನ್ ಮುಂದೂಡಿಕೆ ಮಾಡಿದರೆ ಉತ್ತಮ ಅಂತ ಪದ್ಮಿನಿ ಅವರು ಸಲಹೆ ನೀಡಿದ್ದಾರೆ. ಗರ್ಭಧಾರಣೆಯಾದರೆ ಆಸ್ಪತ್ರೆಗೆ ಭೇಟಿ ಕೊಡಬೇಕಾಗುತ್ತೆ. ಈ ಸಮಯದಲ್ಲಿ ಸೋಂಕು ತಗುಲುವ ಭೀತಿ ಇರುತ್ತೆ. ಅಲ್ಲದೇ ಗರ್ಭಧಾರಣೆಯ ಸಮಯದಲ್ಲಿ ಮಹಿಳೆಯರಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಇರುತ್ತದೆ. ಹೀಗಾಗಿ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಂಡರೆ ಒಳ್ಳೆಯದು ಎಂದು ಸೂಚಿಸಿದ್ದಾರೆ.
Advertisement
Advertisement
ಅಷ್ಟೇ ಅಲ್ಲದೇ ಕೊರೊನಾ ಭೀತಿಯಲ್ಲಿ ರೋಗಿಗಳಿಗೆ ಆಪರೇಷನ್ ಮುಂದೂಡಿಕೆ ಮಾಡಿಕೊಳ್ಳಲು ವೈದ್ಯರು ಸಲಹೆ ನೀಡುತ್ತಿದ್ದಾರೆ. ತೀರಾ ಎಮರ್ಜೆನ್ಸಿ ಅಲ್ಲದ ನಿಗದಿಯಾಗಿರುವ ಆಪರೇಷನ್ ಮುಂದೂಡಿಕೆ ಮಾಡಲು ವೈದ್ಯರು ರೋಗಿಗಳಿಗೆ ಸೂಚಿಸುತ್ತಿದ್ದಾರೆ. ಕೊರೊನಾ ಭೀತಿಯಿಂದ ತಾಯ್ತನದ ಪ್ಲಾನ್ ಮುಂದೂಡಿಕೆ ಮಾಡೋದೋ ಬೇಡ್ವೋ ಅಂತಾ ಕನ್‍ಫ್ಯೂಷನ್‍ನಲ್ಲಿ ದಂಪತಿಗಳು ವೈದ್ಯರ ಮೊರೆ ಹೋಗುತ್ತಿದ್ದಾರೆ.
Advertisement
Advertisement
ಆಸ್ಪತ್ರೆ ಆವರಣದಲ್ಲಿ ನೂರಾರು ರೋಗಿಗಳು ಇರುತ್ತಾರೆ. ಅವರಿಗೆ ಸೋಂಕು ತಲುಲಿದ್ದರೆ ಅದು ಗರ್ಭಿಣಿಯರಿಗೆ ಹಾಗೂ ಇತರೆ ರೋಗಿಗಳಿಗೆ ತಗುಲುವ ಸಾಧ್ಯತೆ ಇರುತ್ತೆ. ರೋಗ ನಿರೋಧಕ ಶಕ್ತಿ ಕಡಿಮೆ ಇರುವವರಿಗೆ ಸೋಂಕು ತಗಲಿದರೆ ಗುಣಪಡಿಸಿಕೊಳ್ಳಲು ಕಷ್ಟವಾಗುತ್ತದೆ. ಹೀಗಾಗಿ ಮುನ್ನೆಚ್ಚರಿಲಾ ಕ್ರಮಗಳನ್ನು ತೆಗೆದುಕೊಳ್ಳೋದು ಬಹಳ ಮುಖ್ಯವಾಗುತ್ತೆ. ಆದ್ದರಿಂದ ವೈದ್ಯರು ಆಪರೇಷನ್ ಮಾಡಿಸುವವರಿಗೆ ಹಾಗೂ ಮಗುವನ್ನು ಪಡೆಯಲು ಇಚ್ಛಿಸುವ ದಂಪತಿಗಳಿಗೆ ವೈದ್ಯರು ಹೀಗೆ ಸಲಹೆ ನೀಡುತ್ತಾರೆ ಎಂದು ಪದ್ಮಿನಿ ಅವರು ತಿಳಿಸಿದ್ದಾರೆ.
ಇಂಗ್ಲೆಂಡ್‍ನಲ್ಲಿ ಜನಿಸಿದ ನವಜಾತ ಶಿಶುವಿಗೆ ಕೊರೊನಾ ಸೋಂಕು ತಗುಲಿದ ಹಿನ್ನೆಲೆ ವೈದ್ಯರು ಮಹಿಳೆಯರಿಗೆ ತಮ್ಮ ತಾಯ್ತನವನ್ನು ಮುಂದೂಡಿಕೆ ಮಾಡಿಕೊಳ್ಳಲು ಸಲಹೆ ನೀಡುತ್ತಿದ್ದಾರೆ. ಇಂಗ್ಲೆಂಡ್‍ನಲ್ಲಿ ತಾಯಿಗೆ ಸೋಂಕು ಇದ್ದ ಕಾರಣ ಅದು ಮಗುವಿಗೂ ತಗುಲಿದೆ. ತಾಯಿಗೆ ಹೆರಿಗೆಯ ಮೊದಲು ಕೊರೊನಾ ಸೋಂಕು ತಟ್ಟಿರುವ ಶಂಕೆ ಹಿನ್ನೆಲೆ ವೈದ್ಯಕೀಯ ಪರೀಕ್ಷೆ ಮಾಡಿಸಲಾಗಿತ್ತು. ಆದರೆ ಅದರ ವರದಿ ತಾಯಿ ಮಗುವಿಗೆ ಜನ್ಮ ಕೊಟ್ಟ ನಂತರ ಬಂದಿದೆ. ಹೀಗಾಗಿ ಆಗ ತಾನೆ ಹುಟ್ಟಿದ ಶಿಶುವಿಗೂ ಸೋಂಕು ಹರಡಿದೆ. ವಿಶ್ವದಲ್ಲೇ ಅತೀ ಚಿಕ್ಕ ವಯಸ್ಸಿಗೆ ಕೊರೊನಾ ಸೋಂಕು ತಟ್ಟಿದ ಪ್ರಕರಣ ಇದಾಗಿದ್ದು, ಲಂಡನ್‍ನಲ್ಲಿರುವ ಆಸ್ಪತ್ರೆಯಲ್ಲಿ ತಾಯಿ, ಮಗುವಿಗೆ ಚಿಕಿತ್ಸೆ ನೀಡಲಾಗುತ್ತಿದೆ.