ಬೆಂಗಳೂರು: ಗಾಂಜಾ (Cannabis) ದಂಧೆಗೆ ಮಕ್ಕಳನ್ನ ಬಳಸಿಕೊಳ್ಳುತ್ತಿದ್ದ ತಾಯಿಯನ್ನು ಬೆಂಗಳೂರಿನ (Bengaluru) ಕಲಾಸಿಪಾಳ್ಯ ಪೊಲೀಸರು ಬಂಧಿಸಿದ್ದಾರೆ.
ನಗ್ಮಾ ಬಂಧಿತ ಆರೋಪಿ. ಗಾಂಜಾ ದಂಧೆಯನ್ನು ನಡೆಸುತ್ತಿದ್ದ ಪತಿಯನ್ನು 6 ತಿಂಗಳ ಹಿಂದಷ್ಟೇ ಜೆ.ಜೆ ನಗರ ಪೊಲೀಸರು ಬಂಧನ (Arrest) ಮಾಡಿ ಜೈಲಿಗೆ ಕಳಿಸಿದ್ದರು. ಗಂಡನ ದಂಧೆ ಬಗ್ಗೆ ಅರಿತಿದ್ದ ಪತ್ನಿ ನಗ್ಮಾ ಪತಿಯ ಗಾಂಜಾ ದಂಧೆಯನ್ನು ಮುಂದುವರಿಸಿಕೊಂಡು ಹೋಗುತ್ತಿದ್ದಳು. ದೂರದ ವಿಶಾಖಪಟ್ಟಣದಿಂದ ಗಾಂಜಾ ತಂದು ದುಪ್ಪಟ್ಟು ಹಣಕ್ಕೆ ನಗ್ಮಾ ಮಾರಾಟ ಮಾಡಿ ಹಣ ಮಾಡುತ್ತಿದ್ದಳು. ನಗ್ಮಾಳ ಗಾಂಜಾ ದಂಧೆಯ ಮಾಹಿತಿ ತಿಳಿದ ಪೊಲೀಸರು ನಗ್ಮಾಳನ್ನು ಬಂಧಿಸಿ ಜೈಲಿಗೆ ಕಳಿಸಿದ್ದಾರೆ. ಅಲ್ಲಿಗೆ ಗಾಂಜಾ ದಂಧೆಯ ರೂವಾರಿಗಾಳಾದ ದಂಪತಿ ಜೈಲು ಸೇರಿದ್ದಾರೆ.
Advertisement
Advertisement
ದುರಂತ ಅಂದರೆ ವಿಶಾಖಪಟ್ಟಣದಿಂದ ಗಾಂಜಾ ತರಲು ನಗ್ಮಾ ಮಕ್ಕಳನ್ನು ಬಳಸಿಕೊಳ್ಳುತ್ತಿದ್ದಳು. ಪೊಲೀಸರಿಂದ ತಪ್ಪಿಸಿಕೊಳ್ಳಲು ಮಕ್ಕಳನ್ನು ಗಾಂಜಾ ದಂಧೆಗೆ ಬಳಸಿಕೊಳ್ಳುತ್ತಿದ್ದಳು. ಸಾಮಾನ್ಯವಾಗಿ ರೈಲಿನಲ್ಲಿ ಮಕ್ಕಳ ಬ್ಯಾಗ್‌ಗಳನ್ನು ಪೊಲೀಸರು ತಪಾಸಣೆ ಮಾಡುತ್ತಿರಲಿಲ್ಲ. ಇದನ್ನು ಬಂಡವಾಳ ಮಾಡಿಕೊಂಡಿದ್ದ ನಗ್ಮಾ ಕುಟುಂಬ ಸಮೇತವಾಗಿ ವಿಶಾಖಪಟ್ಟಣಂಗೆ ಹೋಗಿ ಒಂದು ದಿನ ಸ್ಟೇ ಆಗಿ ಕುಟುಂಬದೊಂದಿಗೆ ಮನೆಗೆ ಬರುತ್ತಿದ್ದಳು. ಇದನ್ನೂ ಓದಿ: 5 ವರ್ಷದ ಹಿಂದೆ ಹೆಂಡತಿ, ಈಗ ತನ್ನ ಮಗನನ್ನೇ ಕೊಂದ ಪಾಪಿ
Advertisement
Advertisement
ಇದೇ ರೀತಿ ವಿಶಾಖಪಟ್ಟಣದಿಂದ ಮಾರ್ಚ್ 20ರಂದು ಗಾಂಜಾ ತಂದಿದ್ದ ನಗ್ಮಾ ಕಲಾಸಿಪಾಳ್ಯ ಕಾರ್ನೇಷಲ್ ಸರ್ಕಲ್‌ನಲ್ಲಿ ನಿಂತಿದ್ದಳು. ಈ ವೇಳೆ ಕಲಾಸಿಪಾಳ್ಯ ಪೊಲೀಸರ ಕೈಗೆ ಲಾಕ್ ಆಗಿದ್ದಾಳೆ. ನಗ್ಮಾಳನ್ನು ಬಂಧಿಸಿರುವ ಪೊಲೀಸರು, ಆಕೆಯಿಂದ 13 ಲಕ್ಷ ಮೌಲ್ಯದ 26 ಕೆ.ಜಿ ಗಾಂಜಾ ವಶಕ್ಕೆ ಪಡೆದುಕೊಂಡಿದ್ದಾರೆ. ಸದ್ಯ ಗಂಡ ಹೆಂಡತಿ ಇಬ್ಬರು ಗಾಂಜಾ ಕೇಸ್‌ನಲ್ಲಿ ಜೈಲು ಸೇರಿದ್ದು, ಮಕ್ಕಳು ಅಜ್ಜಿ ಜೊತೆ ಇದ್ದಾರೆ. ಇದನ್ನೂ ಓದಿ: ಕರೆಂಟ್ ಕಟ್ ಮಾಡಿದ್ದಕ್ಕೆ ಡಿಸಿಎಂ ಮನೆಗೆ ಬಾಂಬ್ ಬೆದರಿಕೆ ಹಾಕಿದ ಭೂಪ