ಚೆನ್ನೈ: ಮಹಿಳೆಯೊಬ್ಬಳು ತನ್ನ ಮಗುವನ್ನು ಮಾರಾಟ ಮಾಡಿ ಹಿಂದಿರುಗುತ್ತಿದ್ದಾಗ ದರೋಡೆಕೋರರಿಬ್ಬರು ಮಾರಾಟದ ಹಣವನ್ನು ದೋಚಿಕೊಂಡು ಹೋದ ಘಟನೆ ತಮಿಳುನಾಡಿನಲ್ಲಿ ನಡೆದಿದೆ.
ಯಾಸ್ಮಿನ್ (28) ಹಣ ಕಳೆದುಕೊಂಡ ಮಹಿಳೆ. ಪತಿ ಬಿಟ್ಟು ಹೋಗಿದ್ದರಿಂದ ಯಾಸ್ಮಿನ್ ಆರ್ಥಿಕವಾಗಿ ಕಷ್ಟದಲ್ಲಿದ್ದಳು. ಇದರಿಂದಾಗಿ ಗರ್ಭಪಾತ ಮಾಡಿಸಿಕೊಳ್ಳಲು ಖಾಸಗಿ ಆಸ್ಪತ್ರೆಗೆ ಬಂದಿದ್ದಳು. ಆ ಸಂದರ್ಭದಲ್ಲಿ ಎನ್ನೂರಿನ ನಿವಾಸಿ ಜಯಗೀತಾ ಪರಿಚಯವಾದರು. ಜಯಗೀತಾ ತನಗೆ ಪರಿಚಯವಿರುವ ಒಬ್ಬರಿಗೆ ಮಗು ಮಾರಾಟ ಮಾಡಿದರೆ ಸಾಕಷ್ಟು ಹಣ ನೀಡುವುದಾಗಿ ತಿಳಿಸಿದ್ದಳು.
ಇತ್ತ ಮೊದಲೇ ಆರ್ಥಿಕ ಸಂಕಷ್ಟದಲ್ಲಿದ್ದ ಯಾಸ್ಮಿನ್ ಹಣದಾಸೆಯಿಂದ ಇದಕ್ಕೆ ಒಪ್ಪಿಗೆ ಸೂಚಿಸಿದ್ದಳು. ಅಂತೆಯೇ ಮಗು ಜನಿಸಿದ ಹತ್ತು ದಿನದ ನಂತರ ಅವರು ಹೇಳಿದ ಸ್ಥಳಕ್ಕೆ ಯಾಸ್ಮಿನ್ ತೆರಳಿದ್ದಳು. ಅಲ್ಲಿ ಧನಮ್ ಮತ್ತು ಇಬ್ಬರು ಪುರುಷರನ್ನು ಜಯಗೀತಾ ಪರಿಚಯಿಸಿದ್ದಾಳೆ. ಯಾಸ್ಮಿನ್ ತನ್ನ ಗಂಡು ಮಗುವನ್ನು ಧನಮ್‍ಗೆ ನೀಡಿ, ಅವರಿಂದ 2.5 ಲಕ್ಷ ರೂ.ಗಳನ್ನು ಪಡೆದಳು. ಇದನ್ನೂ ಓದಿ: OMICRON ಸೋಂಕಿಗೆ ಪ್ರತ್ಯೇಕ ಆಸ್ಪತ್ರೆ: ದೆಹಲಿ ಸರ್ಕಾರ
ಇದಾದ ಕೆಲವು ನಿಮಿಷಗಳ ನಂತರ ಅವಳು ತನ್ನ ಹಿರಿಯ ಮಗಳು ಶರ್ಮಿಳಾಳೊಂದಿಗೆ ಆಟೋದಲ್ಲಿ ಹೋಗುತ್ತಿದ್ದಾಗ ಇಬ್ಬರು ಪುರುಷರು ದ್ವಿಚಕ್ರ ವಾಹನದಲ್ಲಿ ಅವಳನ್ನು ಹಿಂಬಾಲಿಸಿದ್ದಾರೆ. ಪುರಸಾವಲ್ಕಮ್‍ನಲ್ಲಿ ಇಬ್ಬರು ವ್ಯಕ್ತಿಗಳು ಹಣವನ್ನು ದರೋಡೆ ಮಾಡಿ ಪರಾರಿಯಾಗಿದ್ದಾರೆ. ಹಣ ಮತ್ತು ಮಗುವನ್ನು ಕಳೆದುಕೊಂಡು ಮಹಿಳೆ ಕಂಗಾಲಾಗಿದ್ದಾಳೆ. ಈ ಬಗ್ಗೆ ವೆಪೇರಿ ಪೊಲೀಸರಿಗೆ ದೂರು ನೀಡಿದ ಮಹಿಳೆ ತಾನು ಯಾರಿಗೆ ಮಗು ಮಾರಾಟ ಮಾಡಿದ್ದೇನೊ, ಅವರೇ ಹಣವನ್ನು ಕದಿದ್ದಾರೆ ಎಂಬ ಶಂಕೆಯನ್ನು ವ್ಯಕ್ತಪಡಿಸಿದ್ದಾಳೆ. ಇದನ್ನೂ ಓದಿ: ಕೇಂದ್ರ ತೆಗೆದುಕೊಳ್ಳೋ ತೀರ್ಮಾನದ ಮೇಲೆ ಬೂಸ್ಟರ್ ಡೋಸ್ ನೀಡೋ ಬಗ್ಗೆ ತೀರ್ಮಾನ: ಸುಧಾಕರ್