ಧಾರವಾಡ: ಅನೈತಿಕ ಸಂಬಂಧದಿಂದ ಮಗು ಹುಟ್ಟಿದ ಮಗುವನ್ನು ಬೇಡವೆಂದ ಮಹಿಳೆ ಇದೀಗ ಮಕ್ಕಳ ರಕ್ಷಣಾ ಘಟಕದ ಮೊರೆ ಹೋಗುವ ಮುಲಕ ಮಗುವನ್ನು ವಾಪಸ್ ಪಡೆದ ಘಟನೆಯೊಂದು ಧಾರವಾಡದಲ್ಲಿ ನಡೆದಿದೆ.
ಧಾರವಾಡ ನಗರದ ತಾಯಿಯ ಮನವಿ ಆಲಿಸಿದ ಮಕ್ಕಳ ರಕ್ಷಣಾ ಘಟಕದವರು, ತಾಯಿಗೆ ತನ್ನ ಮಗುವನ್ನ ಕೊಡಿಸುವಲ್ಲಿ ಸಫಲರಾಗಿದ್ದಾರೆ.
ಕಳೆದ ಒಂದೂವರೆ ವರ್ಷದ ಹಿಂದೆ ಧಾರವಾಡ ನಗರದ ಲಕ್ಷ್ಮಿಸಿಂಗನಕೇರೆ ಬಡಾವಣೆಯ ಮಹಿಳೆಯೊಬ್ಬಳಿಗೆ ಅನೈತಿಕ ಸಂಬಂಧದಿಂದ ಗಂಡು ಮಗು ಹುಟ್ಟಿತ್ತು. ಈ ಮಗುವನ್ನು ಮಹಿಳೆಯ ಅಣ್ಣ ತಂದು ತಮ್ಮ ಮನೆಯಲ್ಲಿ ಸಾಕ್ತಿದ್ದರು. ಆದ್ರೆ ಇಷ್ಟು ದಿನ ಸುಮ್ಮನಿದ್ದ ಈ ಮಹಿಳೆ ಇದೀಗ ತನ್ನ ಮಗನ ನೆನಪಾಗಿದೆ. ಹೀಗಾಗಿ ಅಣ್ಣನ ಬಳಿ ಬಂದು ತನ್ನ ಮಗುವನ್ನು ತನಗೆ ವಾಪಸ್ ಕೊಡುವಂತೆ ಕೇಳಿದ್ದಾಳೆ. ಆದ್ರೆ ಅಣ್ಣ ಶಂಕರ್ ಗೋಸಾವಿ ತನಗೆ 4 ಲಕ್ಷ ಕೊಡು ಮಗು ಕೊಡುತ್ತೇನೆ ಅಂತ ಹೇಳಿದ್ದಾನೆ. ಇದರಿಂದ ಮಹಿಳೆ ಮಕ್ಕಳ ರಕ್ಷಣಾ ಘಟಕಕ್ಕೆ ತೆರಳಿ ಮನವಿ ಮಾಡಿಕೊಂಡಿದ್ದಾಳೆ.
ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ಮಹಿಳೆಯ ಅಣ್ಣನ ಮನಗೆ ಹೋಗಿ ಆ ಮಗುವನ್ನು ತಾಯಿಗೆ ಕೊಡಿಸಿದ್ದಾರೆ. ಈ ಮಹಿಳೆಗೆ ಮೊದಲು ಮದುವೆಯಾಗಿತ್ತು. ಗಂಡ ಕುಡುಕನಾಗಿದ್ದರಿಂದ ಅವನ ಜೊತೆ ವಿಚ್ಛೇದನ ಕೊಡಿಸಲಾಗಿತ್ತು. ಸದ್ಯ ಮಗು ಪಡೆದ ಮಹಿಳೆಗೆ ಸಾಧನಾ ಸಂಸ್ಥೆಯಲ್ಲಿ ಆಶ್ರಯ ನೀಡಲಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv