1 ತಿಂಗಳ ಮಟ್ಟಿಗೆ ಕೆಲ್ಸದಿಂದ ಮನೆಗೆ ಬಂದಾಗ ತಾಯಿಯ ರಹಸ್ಯ ಬಯಲು

Public TV
2 Min Read
room e1559542923353

– ಮಗನ ಸ್ನೇಹಿತನ ಜೊತೆ ತಾಯಿಯ ಅಕ್ರಮ ಸಂಬಂಧ
– ಸ್ನೇಹಿತನ ಜೊತೆಗೂಡಿ ಮಗನನ್ನು ಕೊಂದ ತಾಯಿ
– ವ್ಯಕ್ತಿಯನ್ನು ವಶಕ್ಕೆ ಪಡೆದಾಗ ಪ್ರಕರಣ ಬೆಳಕಿಗೆ

ಚಂಡೀಗಢ: ನಿತ್ಯದ ತಪಾಸಣೆ ವೇಳೆ ಪೊಲೀಸರು ಅನುಮಾನ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ ವೇಳೆ ಸ್ಫೋಟಕ ಕೊಲೆ ಪ್ರಕರಣವೊಂದು ಗುರುಗ್ರಾಮದಲ್ಲಿ ಬೆಳಕಿಗೆ ಬಂದಿದೆ.

ವಿಚಾರಣೆ ವೇಳೆ ತಾಯಿಯ ಸೂಚನೆ ಮೇರೆಗೆ 23 ವರ್ಷದ ಮಗ ಸೇರಿದಂತೆ ಅನೇಕ ಅಪರಾಧಗಳನ್ನು ಮಾಡಿದ್ದಾಗಿ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ.

1552047088 Gurugram traffic police

ಹರಿಯಾಣದ ಜಝರ್ ಜಿಲ್ಲೆಯ ಚಮನ್‍ಪುರ ಗ್ರಾಮದ ನಿವಾಸಿ 44 ವರ್ಷದ ಮೀನಾದೇವಿ ಮಗನಾದ ಪ್ರಮೋದ್ ನನ್ನು ಕೊಲೆ ಮಾಡಿಸಿದ ತಾಯಿ. ಮೃತ ಪ್ರಮೋದ್ ಗುರುಗ್ರಾಮದಲ್ಲಿ ಬೌನ್ಸರ್ ಆಗಿ ಕೆಲಸ ಮಾಡುತ್ತಿದ್ದನು. ಆರೋಪಿ ಒಬ್ಬಳೆ ವಾಸಿಸುತ್ತಿದ್ದಳು. ಆದರೆ ತನ್ನ ಪ್ರಿಯಕರನ ಜೊತೆ ಪ್ರದೀಪ್ ಅನೈತಿಕ ಸಂಬಂಧವನ್ನು ಮುಂದುವರಿಸಲು ಸ್ವಂತ ಮಗನನ್ನೇ ಕೊಲೆ ಮಾಡಿದ್ದಾಳೆ ಎಂದು ಎಂದು ಪೊಲೀಸರು ಹೇಳಿದ್ದಾರೆ.

ಏನಿದು ಪ್ರಕರಣ?
ವಿಧವೆ ಮೀನಾದೇವಿಗೆ ಮಗನ ಸ್ನೇಹಿತ ಪ್ರದೀಪ್ ಎಂಬಾತನ ಪರಿಚಯವಾಗಿತ್ತು. ದಿನಕಳೆದಂತೆ ಇಬ್ಬರು ನಡುವೆ ಅಕ್ರಮ ಸಂಬಂಧ ಬೆಳೆದಿದೆ. ಅನೇಕ ದಿನಗಳ ನಂತರ ಮಗ ಪ್ರಮೋದ್ ಒಂದು ತಿಂಗಳ ಮಟ್ಟಿಗೆ ತಾಯಿ ವಾಸಿಸುತ್ತಿದ್ದ ಮನೆಗೆ ಬಂದಿದ್ದಾನೆ. ಈ ವೇಳೆ ತನ್ನ ತಾಯಿಯ ಅಕ್ರಮ ಸಂಬಂಧದ ಬಗ್ಗೆ ಅನುಮಾನಗೊಂಡಿದ್ದಾನೆ. ಮಗ ಸ್ನೇಹಿತನ ಜೊತೆಗೆ ತನಗೆ ಇರುವ ಅಕ್ರಮ ಸಂಬಂಧದ ವಿಚಾರ ತಿಳಿದಿದ್ದಾನೆ ಎನ್ನುವುದು ಮೀನಾದೇವಿಗೆ ಗೊತ್ತಾಗಿದೆ. ಇದಾದ ಬಳಿಕ ಮೀನಾದೇವಿ ಹಾಗೂ ಪ್ರಿಯಕರ ಪ್ರದೀಪ್ ಇಬ್ಬರು ಸೇರಿ ಪ್ರಮೋದ್ ಕೊಲೆಗೆ ಪ್ಲಾನ್ ಮಾಡಿದ್ದರು.

lovers 1

ಅದರಂತೆಯೇ ಫೆಬ್ರವರಿ 19ರ ರಾತ್ರಿ ಮನೆ ಮುಂಭಾಗವೇ ಪ್ರದೀಪ್ ಸ್ನೇಹಿತನೊಬ್ಬ ಪ್ರಮೋದ್‍ಗೆ ಗುಂಡು ಹೊಡೆದು ಪರಾರಿಯಾಗಿದ್ದಾನೆ. ಗುಂಡೇಟು ತಿಂದ ಪ್ರಮೋದ್ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಅಷ್ಟೇ ಅಲ್ಲದೇ ತಾನೆ ಕೊಲೆ ಮಾಡಿಸಿ ಮರುದಿನ ಈ ಕುರಿತು ತನಿಖೆ ಮಾಡುವಂತೆ ತಾಯಿ ಪೊಲೀಸರಿಗೆ ದೂರು ನೀಡುವ ನಾಟಕವಾಡಿದ್ದಾಳೆ. ಗುರುಗ್ರಾಮ ಪೊಲೀಸರು ಈ ಪ್ರಕರಣದ ತನಿಖೆ ಶುರುಮಾಡಿದ್ದಾರೆ.

ಬುಧವಾರ ರಾತ್ರಿ ಪೊಲೀಸರು ದಿನನಿತ್ಯದ ತಪಾಸಣೆ ಮಾಡುವಾಗ ಅನುಮಾನದ ಮೇರೆಗೆ ಪ್ರಮೋದ್‍ಗೆ ಗುಂಡು ಹೊಡೆದಿದ್ದ ವ್ಯಕ್ತಿಯನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದ್ದಾರೆ. ಆಗ ಪ್ರಮೋದ್ ಕೊಲೆ ಜೊತೆಗೆ ಇತರೆ ಅಪರಾಧಗಳನ್ನು ಒಪ್ಪಿಕೊಂಡಿದ್ದಾನೆ. ಆಗ ಪ್ರಮೋದ್ ಕೊಲೆಯ ರಹಸ್ಯ ಬಯಲಾಗಿದೆ. ಸದ್ಯಕ್ಕೆ ಪೊಲೀಸರು ಮೀನಾ ದೇವಿ, ಪ್ರದೀಪ್ ಮತ್ತು ಆತನ ಇಬ್ಬರು ಸ್ನೇಹಿತರಾದ ಸೌರಭ್ ಮತ್ತು ಮೊನುರನ್ನು ಪೊಲೀಸರು ಬಂಧಿಸಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *