ಬೆಂಗಳೂರು: ನನ್ನ ಪತ್ನಿಗೆ ಮಗು ನೋಡಿಕೊಳ್ಳುವುದಕ್ಕೆ ಕಷ್ಟ ಆಗುತ್ತೆ ಎಂದು ಹೇಳಿದ್ರೆ ನಾನೇ ಮಗಳನ್ನು ನೋಡಿಕೊಳ್ಳುತ್ತಿದ್ದೆ ಎಂದು ಜೀತಿ ತಂದೆ ಕಿರಣ್ ಪೊಲೀಸರ ಮುಂದೆ ಕಣ್ಣೀರು ಹಾಕಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ.
Advertisement
ಬೆಂಗಳೂರಿನ ಸಂಪಂಗಿರಾಮನಗರ ತಾಯಿಯಿಂದ ಮಗು ಹತ್ಯೆ ಪ್ರಕರಣ ಸಂಬಂಧ ಇದೀಗ ಆರೋಪಿ ತಾಯಿ ಸುಷ್ಮಾ ಪತಿ ಕಿರಣ್ ಹೇಳಿಕೆಯಿಂದ ಪೊಲೀಸರಿಗೆ ಅನುಮಾನ ಮೂಡಿದೆ. ಸುಷ್ಮಾ ಖಿನ್ನತೆಯಿಂದ ಬಳುತ್ತಿದ್ಲಾ ಅನ್ನೋ ಪ್ರಶ್ನೆ ಮೂಡಿದೆ. ಇದನ್ನೂ ಓದಿ: ಮಗು ಕೊಂದ ಕೇಸ್‍ಗೆ ಟ್ವಿಸ್ಟ್- ತಾಯಿ ಕುಕೃತ್ಯಕ್ಕೆ ಕಾರಣವಾಯ್ತಾ ಪರ್ಸನಲ್ ಮ್ಯಾಟರ್..?
Advertisement
Advertisement
ಹೇಳಿಕೆ ವೇಳೆ ಪೊಲೀಸರ ಎದುರು ಕಣ್ಣೀರು ಹಾಕಿದ ಕಿರಣ್, ಅವಳಿಗೆ ಮಗು ನೋಡಿಕೊಳ್ಳೋಕೆ ಕಷ್ಟ ಅಂತಾ ಹೇಳಿದ್ರೆ ಮಗುವನ್ನು ನಾನೆ ನೊಡಿಕೊಳ್ತಿದ್ದೆ. ಮಗು ಚೂರು ಅಬ್ ನಾರ್ಮಲ್ ಆಗಿತ್ತು. ಆದರೆ ಅದಕ್ಕೆ ಚಿಕಿತ್ಸೆ ಕೂಡ ಕೊಡಿಸುತ್ತಿದ್ದೆವು. ಕಳೆದ ಒಂದು ತಿಂಗಳ ಹಿಂದೆ ಬೆಂಗಳೂರು ಟು ಹೈದರಾಬಾದ್ ರೈಲಿನಲ್ಲಿ ಬಿಟ್ಟು ಬಂದಿದ್ದಳು. ಆದರೆ ತಾಯಿಯೇ ಮಗುವನ್ನು ಹೇಗೆ ಬಿಡಲು ಸಾಧ್ಯ ಅಂತಾ ನಮಗೆ ಸುಶ್ಮಾ ಮೇಲೆ ಅನುಮಾನ ಬರಲಿಲ್ಲ. ಮಗುನೇ ಮಿಸ್ ಆಗಿ ಹೋಗಿರಬಹುದು ಅನ್ಕೊಂಡಿದ್ವಿ. ಈ ವೇಳೆ ಎನ್ ಜಿ ಓ ಒಂದರ ಸಹಾಯದಿಂದ ಮಗು ಮತ್ತೆ ನಮಗೆ ಸಿಕ್ಕಿತ್ತು. ಆಮೇಲೆ ಇವಳೆ ಬಿಟ್ಟು ಬಂದಿದ್ದಾಳೆ ಅನ್ನೋದು ಗೊತ್ತಾಗಿತ್ತು. ಆದರೆ ಮಗುವನ್ನು ಕೊಲೆ ಮಾಡ್ತಾಳೆ ಅಂತಾ ನಾನು ಅನ್ಕೊಂಡಿರಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
Advertisement
ನಡೆದಿದ್ದೇನು..?
ಡೆಂಟಲ್ ಡಾಕ್ಟರ್ ಆಗಿರುವ ಸುಷ್ಮಾ ತನ್ನ 4 ವರ್ಷದ ಮಗುವನ್ನು ತಮ್ಮ ನಿವಾಸ ಅದ್ವೈತ್ ಅಪಾರ್ಟ್ ಮೆಂಟ್‍ನ ನಾಲ್ಕನೇ ಮಹಡಿಯಿಂದ ನೂಕಿ ಕೊಂದಿದ್ದಳು. ಮನೆಯಲ್ಲಿ ಗಂಡ ಸಾಫ್ಟ್‍ವೇರ್ ಇಂಜಿನಿಯರ್, ಹೆಂಡತಿ ಡೆಂಟಲ್ ಡಾಕ್ಟರ್ ಆಗಿದ್ದು, ಆರ್ಥಿಕವಾಗಿ ಎಲ್ಲವಬೂ ಚೆನ್ನಾಗಿಯೇ ಇತ್ತು. ಇವರ 4 ವರ್ಷದ ಹೆಣ್ಣು ಮಗುವನ್ನು ನೋಡಿದ್ದ ಅಕ್ಕಪಕ್ಕದವರಿಗೂ ಮಗು ಬುದ್ಧಿಮಾಂದ್ಯ ಅನ್ನೋ ರೀತಿ ಯಾವುದೇ ಅನುಮಾನ ಕೂಡ ಇರಲಿಲ್ಲ. ಆದರೂ ಮಗುವನ್ನು ಆಟವಾಡಿಸುತ್ತಿದ್ದ ವೈದ್ಯೆ ಸುಷ್ಮಾ ಏಕಾಏಕಿ ಮಗುವನ್ನು ಕೆಳಗೆ ಎಸೆದಿದ್ದಾಳೆ. ಅಲ್ಲದೆ ಕೆಳಗೆ ಬಿದ್ದ ಮಗು ನರಳಾಡಿ ಸಾವನ್ನಪ್ಪುತ್ತಿದ್ದರೂ ಅರಾಮಾಗಿ ನಿಂತು ನೋಡುತ್ತಿದ್ದಲು. ಅದರ ಜೊತೆಗೆ ತಾನು ಕೂಡ ಕಂಬಿ ಮೇಲೆ ನಿಂತು ಎರಡು ನಿಮಿಷಗಳ ಕಾಲ ಕಾದಿದ್ದು, ಬಳಿಕ ಅಕ್ಕಪಕ್ಕದ ನಿವಾಸಿಗಳ ಸಹಾಯದಿಂದ ಬಚಾವ್ ಆಗಿದ್ದಳು.
ಈ ಎಲ್ಲಾ ದೃಶ್ಯಗಳು ಅಪಾರ್ಟ್ ಮೆಂಟ್‍ನಲ್ಲಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಇದೀಗ ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದ್ದು, ತಾಯಿಯ ಕೃತ್ಯಕ್ಕೆ ಜಾಲತಾಣಿಗರು ಆಕ್ರೊಶ ಹೊರಹಾಕಿದ್ದಾರೆ.