ಕೊಪ್ಪಳ: ತನ್ನ ಮೂವರು ಮಕ್ಕಳನ್ನು ಸಾಯಿಸಿದ ಬಳಿಕ ತಾಯಿ ತಾನೂ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಹೃದಯ ವಿದ್ರಾಹಕ ಘಟನೆಯೊಂದು ಕೊಪ್ಪಳದಲ್ಲಿ ನೆಡದಿದೆ.
ಕೂಕುನೂರು ತಾಲೂಕಿನ ಯರೇ ಹಂಚಿನಾಳ ಗ್ರಾಮದಲ್ಲಿ ಸೋಮವಾರ ತಡರಾತ್ರಿ ಈ ಘಟನೆ ಸಂಭವಿಸಿದೆ. ಈ ಘಟನೆಯಲ್ಲಿ ಮೂವರು ಮಕ್ಕಳು ಸೇರಿದಂತೆ ತಾಯಿ ಯಲ್ಲಮ್ಮ ಕೂಡ ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪಿದ್ದಾಳೆ.
ಹಿರಿಯ ಮಗಳದಾ ಅಕ್ಷತಾಳನ್ನು ನೀರು ತುಂಬಿಸುವ ಹಂಡೆಯಲ್ಲಿ ಮುಳುಗಿಸಿ ಮತ್ತು ಎರಡು ವರ್ಷದ ಮಗ ನಾಗರಾಜನನ್ನು ನೀರಿರುವ ಬಕೆಟ್ ನಲ್ಲಿ ಮುಳುಗಿಸಿ, ನಾಲ್ಕು ವರ್ಷದ ಮಗಳು ಕಾವ್ಯಳನ್ನು ನೀರಿನ ಟ್ಯಾಂಕಿಯಲ್ಲಿ ಮುಳುಗಿಸಿ ಸಾಯಿಸಿದ್ದಾಳೆ. ನಂತರ ತಾನೂ ಮನೆಯಲ್ಲೇ ನೇಣು ಬೀಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಸ್ಥಳಕ್ಕೆ ಕೂಕುನೂರು ಪೊಲೀಸರು ಆಗಮಿಸಿ ಪರಿಶೀಲನೆ ನೆಡಸಿದ್ದಾರೆ. ಯಲ್ಲಮ್ಮಾ ಆತ್ಮಹತ್ಯೆಗೆ ಪತಿಯ ಕಿರುಕುಳವೇ ಕಾರಣ ಎನ್ನಲಾಗಿದೆ. ಯಲ್ಲಮ್ಮಾ ಪತಿ ಉಮೇಶ್ ದಿನನಿತ್ಯ ಕುಡಿದು ಬಂದು ಪತ್ನಿ ಮೇಲೆ ಹಲ್ಲೆ ಮಾಡುತ್ತಿದ್ದನು. ಅಷ್ಟೇ ಅಲ್ಲದೆ ಪತ್ನಿಯ ಶೀಲ ಶಂಕಿಸಿ ಕಿರುಕುಳ ನೀಡುತ್ತಿದ್ದನು ಎಂಬ ಆರೋಪ ಕೇಳಿ ಬಂದಿದೆ.
ಪತಿಯ ಕಿರುಕುಳದಿಂದ ಯಲ್ಲಮ್ಮ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಹೇಳಲಾಗುತ್ತದೆ. ಆದರೆ ಪೊಲೀಸರ ತನಿಖೆ ನಂತರ ಘಟನೆಗೆ ನಿಜವಾದ ಕಾರಣ ಏನು ಎಂಬುದು ತಿಳಿಯಬೇಕಿದೆ.