– ಹಲವು ಜನರ ದೇಹದಲ್ಲಿ ಜೀವಂತವಾಗಿದೆ ಮಗಳ ಅಂಗಗಳು
– ಈ ಕೆಲಸದಿಂದ ನೆಮ್ಮದಿ – ಭಾವನಾ
ಗಾಂಧಿನಗರ: 2016ರಲ್ಲಿ ಬ್ರೈನ್ ಡೆಡ್ ಆಗಿದ್ದ 16 ವರ್ಷದ ಮಗಳ ಅಂಗಾಂಗವನ್ನು ಪೋಷಕರು ದಾನ ಮಾಡಿದ್ದರು. ಇದಾದ ಬಳಿಕ ಮೂರು ವರ್ಷದಲ್ಲಿ 32 ಕುಟುಂಬದಿಂದ ಅಂಗಾಂಗ ದಾನ ಮಾಡಲು ಬಾಲಕಿಯ ತಾಯಿ ಪ್ರೇರಣೆ ನೀಡಿದ್ದಾರೆ.
2016ರಂದು ಭಾವನಾ ಬೇನ್ ಅವರ 16 ವರ್ಷದ ಮಗಳು ರಾಧಿಕಾ ಅನಾರೋಗ್ಯದಿಂದ ಬಳಲುತ್ತಿದ್ದಳು. ತಕ್ಷಣ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ವೈದ್ಯರು ರಾಧಿಕಾಳನ್ನು ಪರೀಕ್ಷಿಸಿದಾಗ ಆಕೆಯ ಮೆದುಳಿನಲ್ಲಿ ಉಂಡೆಯಂತೆ ಇರುವುದು ತಿಳಿದು ಬಂದಿತ್ತು. ಆಗ ವೈದ್ಯರು ರಾಧಿಕಾಳಿಗೆ ಶಸ್ತ್ರಚಿಕಿತ್ಸೆ ಮಾಡಿದ್ದರು. ಶಸ್ತ್ರಚಿಕಿತ್ಸೆ ಮಾಡಿದ ಕೆಲವು ಗಂಟೆಗಳ ನಂತರ ಆ ಉಂಡೆ ಒಡೆದು ಹೋಗಿದ್ದು, ರಾಧಿಕಾಳ ಬ್ರೈನ್ ಡೆಡ್ ಆಗಿತ್ತು.
Advertisement
Advertisement
ಈ ದುಃಖದ ಸಮಯದಲ್ಲಿ ವೈದ್ಯರಾದ ವಿರೋಜಾ, ಕರಾಮಟ್ ಹಾಗೂ ವಂಜಾರ ಅವರು ಭಾವನಾ ಬಳಿ ಹೋಗಿ ರಾಧಿಕಾಳ ಅಂಗಾಂಗ ದಾನ ಮಾಡುವಂತೆ ಸಲಹೆ ನೀಡಿದ್ದರು. ಭಾವನಾ ವೈದ್ಯರ ಸಲಹೆಯನ್ನು ಕೇಳಿ ರಾಧಿಕಾಳ ಅಂಗಾಂಗ ದಾನ ಮಾಡಲು ನಿರ್ಧರಿಸಿದ್ದರು. ಆಗ ವೈದ್ಯರು ರಾಧಿಕಾಳ ಹೃದಯ, ಕಿಡ್ನಿ, ಕಣ್ಣು ಹಾಗೂ ಲಿವರ್ ಅನ್ನು ಅವಶ್ಯಕತೆ ಇರುವ ಜನರಿಗೆ ನೀಡಲು ಸುರಕ್ಷಿತವಾಗಿ ಇಟ್ಟುಕೊಂಡಿದ್ದರು.
Advertisement
ರಾಧಿಕಾ ಈಗ ಬದುಕಿಲ್ಲ. ಆದರೆ ಇಂದಿಗೂ ಆಕೆಯ ಅಂಗಗಳು ಹಲವು ಜನರ ದೇಹದಲ್ಲಿ ಜೀವಂತವಾಗಿದೆ. ರಾಧಿಕಾಳ ಅಂಗಾಂಗ ದಾನ ಮಾಡಿದ ನಂತರ ವೈದ್ಯರು ಭಾವನಾ ಬಳಿ ಹೋಗಿ, ಅಂಗಾಂಗ ದಾನ ಮಾಡಲು ಜನರಿಗೆ ಪ್ರೇರಣೆ ನೀಡಿ. ಇದರಿಂದ ಹಲವು ಜನರ ಜೀವ ಉಳಿಯುತ್ತದೆ ಎಂದು ಹೇಳಿದ್ದರು. ವೈದ್ಯರ ಮಾತು ಕೇಳಿ ಭಾವನಾ ಹಲವು ಜನರಿಗೆ ಅಂಗಾಂಗ ದಾನದ ಬಗ್ಗೆ ಪ್ರೇರಣೆ ನೀಡುತ್ತಿದ್ದಾರೆ.
Advertisement
ಈ ಬಗ್ಗೆ ಪ್ರತಿಕ್ರಿಯಿಸಿದ ಭಾವನಾ ಬೇನ್, ಯಾವುದೇ ರೋಗಿಯ ಬ್ರೈನ್ ಡೆಡ್ ಆಗಿದೆ ಎಂಬ ವಿಷಯ ನನಗೆ ತಿಳಿದ ತಕ್ಷಣ ನಾನು ಆಸ್ಪತ್ರೆಗೆ ಹೋಗುತ್ತೇನೆ. ಬಳಿಕ ರೋಗಿಯ ಕುಟುಂಬಸ್ಥರ ಜೊತೆ ಮಾತನಾಡಿ, ಅಂಗಾಂಗ ದಾನ ಮಾಡುವಂತೆ ಪೇರಣೆ ನೀಡುತ್ತೇನೆ. ನಾನು ಹಾಗೂ ನನ್ನ ಪತಿ ಮನ್‍ಸುಖ್ ಇಬ್ಬರು ಬೇರೆ ಬೇರೆ ಕಂಪೆನಿಯಲ್ಲಿ ಕೆಲಸ ಮಾಡುತ್ತೇವೆ. ನನ್ನ ಈ ಕೆಲಸಕ್ಕೆ ನನ್ನ ಪತಿ ಮಾತ್ರವಲ್ಲದೆ ನನ್ನ ಮಗ ಕೂಡ ಸಹಕರಿಸುತ್ತಾನೆ ಎಂದರು.
ಇದೇ ವೇಳೆ 3 ವರ್ಷಗಳಲ್ಲಿ 32 ಮಂದಿಗೆ ಅಂಗಾಂಗ ದಾನ ಮಾಡಲು ಪ್ರೇರಣೆ ನೀಡಿದ್ದೇನೆ. ಈಗಲೂ ನಾವು ಈ ಕೆಲಸವನ್ನು ಮುಂದುವರಿಸುತ್ತಿದ್ದೇವೆ. ಈ ಕೆಲಸದಿಂದ ನೆಮ್ಮದಿ ಸಿಗುತ್ತದೆ. ಅದನ್ನು ಹೇಳಿಕೊಳ್ಳುವುದಕ್ಕೆ ಸಾಧ್ಯವಿಲ್ಲ. ನನ್ನ ಮಗಳು ರಾಧಿಕಾ ನಮ್ಮ ಜೊತೆಯಿಲ್ಲ. ಆದರೆ ಇಂದಿಗೂ ಆಕೆ ಹಲವು ಜನರ ದೇಹದಲ್ಲಿ ಜೀವಂತವಾಗಿದ್ದಾಳೆ ಎಂದು ಹೇಳುವ ಮೂಲಕ ಭಾವನಾ ಬೇನ್ ಭಾವುಕರಾದರು.