ತುಮಕೂರು: ಮನೆಯೊಳಗೆ ಇದ್ದ ಚಿರತೆಗೆ ಸೆಡ್ಡುಹೊಡೆದು ಸತತ 7 ಗಂಟೆ ಕಾಲ ಶೌಚಾಲಯದಲ್ಲಿ ಬಂಧಿಯಾಗಿ ಸುರಕ್ಷಿತವಾಗಿ ಹೊರಕ್ಕೆ ಬಂದ ತುಮಕೂರಿನ ಗಟ್ಟಿಗಿತ್ತಿ ಅತ್ತೆ-ಸೊಸೆಗೆ ಅಭಿನಂದನೆಯ ಮಾಹಾಪೂರ ಹರಿದು ಬರುತಿದೆ.
ಅತ್ತೆ ವನಜಾಕ್ಷಿ ಸೊಸೆ ವಿನುತಾ ಹಾಗೂ ಮಾವ ರಂಗನಾಥ್ ಅವರು ತೋರಿದ ಧೈರ್ಯಕ್ಕೆ ಮೆಚ್ಚಿ ನಗರದ ಜನತೆ ಸನ್ಮಾನಿಸಿದ್ದಾರೆ. ಜಯನಗರ ಬಡಾವಣೆ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಗಟ್ಟಿಗಿತ್ತಿ ಅತ್ತೆ ಮತ್ತು ಸೊಸೆಗೆ ಭಾನುವಾರ ಸನ್ಮಾನಿಸಲಾಯಿತು. ಇದನ್ನೂ ಓದಿ: ಮನೆಗೆ ನುಗ್ಗಿದ ಚಿರತೆ – ಭಯಗೊಂಡು ಶೌಚಾಲಯದಲ್ಲಿ ಅಡಗಿಕೊಂಡ್ರು ಅತ್ತೆ, ಸೊಸೆ
Advertisement
Advertisement
ಯಾವುದೇ ಸಂಕಷ್ಟ ಬಂದರೂ ಧೃತಿಗೆಡದೇ ಧೈರ್ಯದಿಂದ ಇದ್ದರೆ ಆ ಸಂಕಷ್ಟದಿಂದ ಸುಲಭವಾಗಿ ಪಾರಾಗಬಹುದು ಇದಕ್ಕೆ ಈ ಅತ್ತೆ-ಸೊಸೆಯೆ ಸಾಕ್ಷಿ ಎಂದು ಅಭಿನಂದಿಸಿ ಪ್ರಮಾಣ ಪತ್ರ ನೀಡಲಾಗಿದೆ. ಶಾಸಕ ರಫೀಕ್ ಅಹಮದ್ ಈ ಅಭಿನಂದನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಚಿರತೆ ಸಂಕಷ್ಟದಿಂದ ಪಾರಾದ ರಂಗನಾಥ್ ಅವರ ಕುಟುಂಬದ ಧೈರ್ಯವನ್ನು ಕೊಂಡಾಡಿದರು.
Advertisement
ಅಂದಹಾಗೆ ಜನವರಿ 20 ರಂದು ಇವರ ಮನೆಗೆ ಚಿರತೆ ನುಗ್ಗಿತ್ತು. ಭಯಗೊಂಡು ಮನೆಯವರು ಶೌಚಾಲಯದಲ್ಲಿ ಅಡಗಿಕೊಂಡಿದ್ದರು. ಸತತ 11 ಗಂಟೆಯ ಕಾರ್ಯಚರಣೆ ಮೂಲಕ ಚಿರತೆಯನ್ನು ಮನೆಯಲ್ಲೇ ಸೆರೆಹಿಡಿಯಲಾಗಿತ್ತು. ಇದನ್ನೂ ಓದಿ: ಆಪರೇಷನ್ ಚೀತಾ ಸಕ್ಸಸ್-ಅಡುಗೆ ಮನೆಯ ಅಟ್ಟದ ಮೇಲೆ ಕುಳಿತಿದ್ದ ಚಿರತೆ