ಬೆಂಗಳೂರು: ತನ್ನಿಬ್ಬರು ಮಕ್ಕಳಿಗೆ ವಿಷವುಣಿಸಿ ತಾಯಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರಿನ ಹೆಬ್ಬಾಳದಲ್ಲಿ ನಡೆದಿದೆ.
ಪುಷ್ಪಾವತಿ ಆತ್ಮಹತ್ಯೆ ಮಾಡಿಕೊಂಡ ಮಹಿಳೆ. ಪುಷ್ಪಾವತಿ ಸೋಮವಾರ ರಾತ್ರಿ 8 ಗಂಟೆ ಸುಮಾರಿಗೆ ಏಕಾಏಕಿ ತನ್ನಿಬ್ಬರು ಮಕ್ಕಳಾದ ಎಂಟು ವರ್ಷದ ಮಗ ಜೀವನ್ ಹಾಗೂ ಐದು ತಿಂಗಳ ಮಗಳಿಗೆ ವಿಷವುಣಿಸಿ ಡೇತ್ ಬರೆದಿಟ್ಟು ಬಳಿಕ ಆಕೆ ಕೂಡ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಪುಷ್ಪಾವತಿ ಡೇತ್ ನೋಟ್ ನಲ್ಲಿ ನನಗೆ ಜೀವನ ಬೇಸರವಾಗಿದೆ ಎಂದು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಕಳೆದ 10 ವರ್ಷಗಳ ಹಿಂದೆ ಕಂಪನಿಯೊಂದರಲ್ಲಿ ಡ್ರೈವರ್ ಆಗಿ ಕೆಲಸ ಮಾಡಿಕೊಂಡಿದ್ದ ನಾಗರಾಜ್ ಎಂಬವರನ್ನು ಮದುವೆ ಆಗಿದ್ದಳು. ಮೂಲತಃ ಶಿವಮೊಗ್ಗದ ತಿರ್ಥಹಳ್ಳಿಯವರಾದ ಇವರು ಬೆಂಗಳೂರಿನ ಹೆಬ್ಬಾಳ ಬಳಿಯ ಮನೋರಾಯನ ಪಾಳ್ಯದಲ್ಲಿ ವಾಸವಾಗಿದ್ದರು.
ಮದುವೆಯಾದ ನಂತರ ಪುಷ್ಪಾವತಿ ತನ್ನ ಪೋಷಕರ ಸಂಪರ್ಕವನ್ನು ಕಳೆದುಕೊಂಡು ಪತಿಯ ಜೊತೆ ವಾಸಿಸುತ್ತಿದ್ದಳು. ಮದುವೆಯಾದ ಅಂದಿನಿಂದ ಇಲ್ಲಿಯವರೆಗೆ ಒಮ್ಮೆಯೂ ಜಗಳವಾಗಿರಲಿ, ಇವರಿಬ್ಬರ ನಡುವೆ ಮನಸ್ತಾಪವಿರದೇ ಹಾಲು-ಜೇನಿನಂತೆ ಜೀವನ ನಡೆಸುತ್ತಿದ್ದರು. ಆದರೆ ಸೋಮವಾರ ಪುಷ್ಪಾವತಿ ಏಕಾಏಕಿ ಮಕ್ಕಳಿಗೆ ವಿಷ ಕೊಟ್ಟು ತಾನೂ ಆತ್ಮಹತ್ಯೆ ಮಾಡಿಕೊಂಡು, ಇಡೀ ಕುಟುಂಬಸ್ಥರಿಗೆ ಅರಗಿಸಿಕೊಳ್ಳಲಾಗದ ಶಾಕ್ ಕೊಟ್ಟು ಇಹಲೋಕ ತ್ಯಜಿಸಿದ್ದಾಳೆ.
ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಹೆಬ್ಬಾಳ ಪೊಲೀಸರು ಪತಿ ನಾಗರಾಜ್‍ನನ್ನು ವಶಕ್ಕೆ ಪಡೆದು ಮೃತದೇಹಗಳನ್ನು ಅಂಬೇಡ್ಕರ್ ಆಸ್ಪತ್ರೆಗೆ ಮರಣೋತ್ತರ ಪರಿಕ್ಷೇಗೆ ರವಾನಿಸಿದ್ದಾರೆ. ಸದ್ಯ ಆತ್ಮಹತ್ಯೆಗೆ ಅಸಲಿ ಕಾರಣ ತಿಳಿದುಬಂದಿಲ್ಲ.