ಕೊಪ್ಪಳ: ಸಂತಾನಹರಣ ಚಿಕಿತ್ಸೆಗೆಂದು ಆಸ್ಪತ್ರೆಗೆ ದಾಖಲಾಗಿದ್ದ ತಾಯಿ ಸಾವನ್ನಪ್ಪಿರುವ ಘಟನೆ ಕೊಪ್ಪಳದ (Koppal) ಹಿರೇವಂಕಲಕುಂಟ ಸಮುದಾಯ ಆರೋಗ್ಯ ಕೇಂದ್ರದಲ್ಲಿ ನಡೆದಿದೆ.
ಮೃತ ತಾಯಿಯನ್ನು ಮಲ್ಲಮ್ಮ ಕಲ್ಲೂರ್ (23) ಎಂದು ಗುರುತಿಸಲಾಗಿದೆ. ಮಲ್ಲಮ್ಮ ಅವರಿಗೆ ಎರಡೂವರೆ ವರ್ಷದ ಹಾಗೂ ಐದು ತಿಂಗಳ ಎರಡು ಮಕ್ಕಳಿದ್ದು, ಈ ಹಿನ್ನೆಲೆ ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಲು ನಿರ್ಧರಿಸಿದ್ದರು.ಇದನ್ನೂ ಓದಿ: ರೈತರಿಗೆ ಪರಿಹಾರ ಹಣ ನೀಡದ್ದಕ್ಕೆ ಬಾಗಲಕೋಟೆ ಜಿಲ್ಲಾಧಿಕಾರಿಗಳ ವಸ್ತುಗಳು ಜಪ್ತಿ
ಸೋಮವಾರ (ಸೆ.1) ಸಂತಾನಹರಣ ಚಿಕಿತ್ಸೆಗೆಂದು ಕೊಪ್ಪಳದ (Koppal) ಹಿರೇವಂಕಲಕುಂಟ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಾಗಿದ್ದರು. ಮಂಗಳವಾರ (ಸೆ.2) ಸಂತಾನಹರಣ ಚಿಕಿತ್ಸೆ (Female Sterilization) ವೇಳೆ ವೈದ್ಯರ ಎಡವಟ್ಟಿನಿಂದಾಗಿ ಮಲ್ಲಮ್ಮ ಅವರ ಸ್ಥಿತಿ ಗಂಭೀರವಾಗಿದ್ದು, ಕೂಡಲೇ ಜಿಲ್ಲಾ ಆಸ್ಪತ್ರೆಗೆ ಕಳುಹಿಸಿದ್ದಾರೆ. ಮಾರ್ಗಮಧ್ಯೆಯೇ ಮಲ್ಲಮ್ಮ ಸಾವನ್ನಪ್ಪಿದ್ದಾರೆ.
ಸದ್ಯ ಅನಸ್ತೇಶಿಯಾ ನೀಡದೇ ವೈದ್ಯರು ಶಸ್ತ್ರಚಿಕಿತ್ಸೆ ಮಾಡಿದ್ದಾರೆಂದು ಮಲ್ಲಮ್ಮ ಕುಟುಂಬಸ್ಥರು ಆರೋಪಿಸಿದ್ದು, ಮಲ್ಲಮ ಸಾವಿನಿಂದಾಗಿ ಕುಟುಂಬಸ್ಥರ ಆಕ್ರೋಶದ ಕಟ್ಟೆಯೊಡೆದಿದೆ.ಇದನ್ನೂ ಓದಿ: ದಿ.ಡಾ.ವಿಷ್ಣುವರ್ಧನ್, ಸರೋಜಾದೇವಿಯವರಿಗೆ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿ ಘೋಷಣೆಗೆ ನಟಿಯರ ಮನವಿ