ಪಾಟ್ನಾ: ಛತ್ ಪೂಜೆಗಾಗಿ (Chhath Puja) ತಯಾರಿಸಿದ್ದ ಪ್ರಸಾದವನ್ನು ತಿಂದಳೆಂಬ ಕಾರಣಕ್ಕೆ ತಾಯಿಯೇ (Mother) ತನ್ನ ನಾಲ್ಕು ವರ್ಷದ ಮಗಳಿಗೆ (Daughter) ಹಲ್ಲೆ ನಡೆಸಿದ ಪರಿಣಾಮ ಚಿಕಿತ್ಸೆ ಫಲಿಸದೇ ಬಾಲಕಿ ಮೃತಪಟ್ಟಿರುವ ಘಟನೆ ಬಿಹಾರದ (Bihar) ಸಮಸ್ತಿಪುರ (Samastipur) ಜಿಲ್ಲೆಯಲ್ಲಿ ನಡೆದಿದೆ.
ಮೃತ ಬಾಲಕಿಯನ್ನು ರಾಜು ಪಾಸ್ವಾನ್ ಅವರ ನಾಲ್ಕು ವರ್ಷದ ಪುತ್ರಿ ಸುಹಾನಿ ಕುಮಾರಿ ಎಂದು ಗುರುತಿಸಲಾಗಿದೆ. ಗಂಭೀರವಾಗಿ ಗಾಯಗೊಂಡಿದ್ದ ಬಾಲಕಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದು, ಆರೋಪಿ ತಾಯಿಯನ್ನು ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ: ಮೂರು ಎಫ್ಐಆರ್ ರದ್ದು ಕೋರಿ ಹೈಕೋರ್ಟ್ ಮೆಟ್ಟಿಲೇರಿದ ನಟ ಧನ್ವೀರ್
ಬಾಲಕಿಯ ತಂದೆ ನೀಡಿರುವ ಮಾಹಿತಿಯ ಪ್ರಕಾರ, ಕುಟುಂಬದವರು ಛತ್ ಪೂಜೆಯ ಸಿದ್ಧತೆಯಲ್ಲಿ ತೊಡಗಿದ್ದರು. ಮನೆಯ ಇತರ ಸದಸ್ಯರು ಹಬ್ಬದ ವ್ಯವಸ್ಥೆಗಾಗಿ ಸಮೀಪದ ಘಾಟ್ಗೆ ತೆರಳಿದ್ದರು. ಈ ವೇಳೆ ರೀನಾ ಕುಮಾರಿ ಮನೆಯಲ್ಲಿ ಪೂಜೆಗೆ ನೈವೇದ್ಯವಾಗಿ ಅರ್ಪಿಸಲು ಆಹಾರ ಪದಾರ್ಥಗಳನ್ನು ಸಿದ್ಧಪಡಿಸುತ್ತಿದ್ದರು. ಇದನ್ನೂ ಓದಿ: ಥಾಯ್ಲೆಂಡ್ನ ವಾಣಿಜ್ಯ ಕಟ್ಟಡದಲ್ಲಿ ಭೀಕರ ಅಗ್ನಿ ಅವಘಡ – 11 ಮಂದಿ ಸಾವು, 16 ಜನರಿಗೆ ಗಾಯ
ಈ ಸಂದರ್ಭದಲ್ಲಿ ಬಾಲಕಿ ಸುಹಾನಿ ಪೂಜೆಗಾಗಿ ತಯಾರಿಸಿದ್ದ ಆಹಾರ ಪದಾರ್ಥವೊಂದನ್ನು ಮುಟ್ಟಿ ತಿಂದಿದ್ದಾಳೆ ಎನ್ನಲಾಗಿದೆ. ಇದರಿಂದ ಕೋಪಗೊಂಡ ತಾಯಿ ರೀನಾ ಕುಮಾರಿ ಮಗುವಿನ ಮೇಲೆ ಹಲ್ಲೆ ನಡೆಸಿದ್ದಾಳೆ. ಹಲ್ಲೆಯ ಬಳಿಕ ಬಾಲಕಿಯ ಆರೋಗ್ಯ ಸ್ಥಿತಿ ಹದಗೆಡಲು ಆರಂಭಿಸಿದೆ. ನಂತರ ರೀನಾ ಕುಮಾರಿ ಬಾಲಕಿಯನ್ನು ಚಿಕಿತ್ಸೆಗಾಗಿ ಖಾಸಗಿ ನರ್ಸಿಂಗ್ ಹೋಮ್ಗೆ ಕರೆದೊಯ್ದಿದ್ದಾಳೆ. ಆದರೆ ಬಾಲಕಿಯನ್ನು ಪರೀಕ್ಷಿಸಿದ ವೈದ್ಯರು ಆಕೆ ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ. ಇದನ್ನೂ ಓದಿ: ಐಸಿಸಿ ಅಧ್ಯಕ್ಷರಾಗಿ 2ನೇ ಅವಧಿಗೆ ಅವಿರೋಧವಾಗಿ ಜಯ್ ಶಾ ಮರು ನೇಮಕ
ಪೊಲೀಸರ ಮುಂದೆ ಮಾತನಾಡಿರುವ ತಂದೆ ರಾಜು ಪಾಸ್ವಾನ್, ಮಗಳ ಸಾವಿನಿಂದ ಇಡೀ ಕುಟುಂಬ ತೀವ್ರ ಆಘಾತಕ್ಕೊಳಗಾಗಿದೆ ಎಂದು ತಿಳಿಸಿದ್ದಾರೆ. ಮಗಳೇ ಇಲ್ಲದ ಮೇಲೆ ತನಗೆ ಛತ್ ಪೂಜೆಯ ಸಂಭ್ರಮವೇ ಇಲ್ಲ ಎಂದು ನೋವು ತೋಡಿಕೊಂಡಿದ್ದಾರೆ. ಪತ್ನಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿಸಿರುವ ಅವರು, ಇನ್ನು ಮುಂದೆ ಆಕೆಯ ಅಗತ್ಯವಿಲ್ಲ, ಮಕ್ಕಳನ್ನು ತಾವೇ ಬೆಳೆಸುವುದಾಗಿ ಹೇಳಿದ್ದಾರೆ. ಇದನ್ನೂ ಓದಿ: ವಿಶ್ವಸಂಸ್ಥೆಯಲ್ಲಿ ಮರಣದಂಡನೆ ರದ್ಧತಿ ನಿರ್ಣಯಕ್ಕೆ ಭಾರತದ ವಿರೋಧ
ರಾಜು ಪಾಸ್ವಾನ್ ಮತ್ತು ರೀನಾ ಕುಮಾರಿ ದಂಪತಿಗೆ ಮೂವರು ಮಕ್ಕಳಿದ್ದಾರೆ. ಏಳು ವರ್ಷದ ಶಿವಾನಿ ಕುಮಾರಿ, ನಾಲ್ಕು ವರ್ಷದ ಸುಹಾನಿ ಕುಮಾರಿ ಹಾಗೂ ಒಂದೂವರೆ ವರ್ಷದ ರಾಜಾ ಕುಮಾರ್ ಎಂಬ ಮೂವರು ಮಕ್ಕಳಿದ್ದಾರೆ. ಇದೀಗ ಸುಹಾನಿಯ ಸಾವಿನಿಂದ ಕುಟುಂಬದಲ್ಲಿ ಶೋಕ ಆವರಿಸಿದೆ. ಇದನ್ನೂ ಓದಿ: ಬಂಗಾಳಕೊಲ್ಲಿಯಲ್ಲಿ ಚಂಡಮಾರುತ ಭೀತಿ; ಆಂಧ್ರ, ತಮಿಳುನಾಡು ಸೇರಿ 4 ರಾಜ್ಯಗಳಲ್ಲಿ ಭಾರೀ ಮಳೆ ಎಚ್ಚರಿಕೆ
ಘಟನೆಯ ಮಾಹಿತಿ ತಿಳಿದ ತಕ್ಷಣ ಠಾಣಾಧಿಕಾರಿ ರಾಕೇಶ್ ಕುಮಾರ್ ಪೊಲೀಸ್ ತಂಡದೊಂದಿಗೆ ಸ್ಥಳಕ್ಕೆ ಧಾವಿಸಿದ್ದಾರೆ. ಬಾಲಕಿಯ ಮೃತದೇಹವನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗಾಗಿ ಸಮಸ್ತಿಪುರದ ಸದರ್ ಆಸ್ಪತ್ರೆಗೆ ರವಾನಿಸಿದ್ದಾರೆ. ನಾಲ್ಕು ವರ್ಷದ ಬಾಲಕಿ ಮೃತಪಟ್ಟಿರುವ ಬಗ್ಗೆ ಮಾಹಿತಿ ಬಂದಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ತಾಯಿಯನ್ನು ಬಂಧಿಸಲಾಗಿದೆ. ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಠಾಣಾಧಿಕಾರಿ ತಿಳಿಸಿದ್ದಾರೆ. ಇದನ್ನೂ ಓದಿ: ಸ್ನೇಹಿತನ ಜೊತೆ ಓಡಾಡಿದ್ದ ಇಂಡಿಗೋ ಉದ್ಯೋಗಿ ಶವವಾಗಿ ಪತ್ತೆ
