ವಿದ್ಯುತ್ ಅವಘಡ: ಮಕ್ಕಳನ್ನು ಉಳಿಸಲು ಹೋಗಿ ತಾಯಿಯೂ ಬಲಿ – ಒಂದೇ ಮನೆಯಲ್ಲಿ 3 ಸಾವು

2 Min Read
Electric Shock Koppal Mother Children

ಕೊಪ್ಪಳ: ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ತಾಯಿ ಮತ್ತು ಇಬ್ಬರು ಮಕ್ಕಳು ಬಲಿಯಾಗಿರುವ ಹೃದಯ ವಿದ್ರಾವಕ ಘಟನೆಯೊಂದು ಕನಕಗಿರಿ ತಾಲೂಕಿನ ಹುಲಿಹೈದರ್ ಗ್ರಾಮದಲ್ಲಿ ನಡೆದಿದೆ.

28 ವರ್ಷದ ಶೈಲಾ, ಪವನ್(2) ಮತ್ತು ಸಾನ್ವಿ(3) ವಿದ್ಯುತ್ ವಾಯರ್‍ನಿಂದ ಪ್ರಾಣ ಕಳೆದು ಕೊಂಡ ದುರ್ದೈವಿಗಳು. ಮೂವರ ಪ್ರಾಣ ಹೋಗೋಕೆ ಮನೆಯಲ್ಲಿದ್ದ ವಿದ್ಯುತ್ ವಾಯರ್ ಕಾರಣ ಎಂದು ಸ್ಥಳೀಯರು ದೂರುತ್ತಿದ್ದಾರೆ.  ಇದನ್ನೂ ಓದಿ: ಉತ್ತರ ಕರ್ನಾಟಕದಲ್ಲಿ ನಾಲ್ಕು ದಿನ ಗುಡುಗು ಗಾಳಿ ಸಹಿತ ಮಳೆ: ಹವಾಮಾನ ಇಲಾಖೆ 

ನಡೆದಿದ್ದೇನು?
ತಾಯಿ ಶೈಲಾ ಮನೆಯಲ್ಲಿ ಮಕ್ಕಳನ್ನು ಬಿಟ್ಟು ಬಟ್ಟೆ ತೊಳೆಯೋಕೆ ಹೋಗಿದ್ರು. ಇತ್ತ ತಂದೆ ಉಮೇಶ್ ವ್ಯಾಪಾರ ಮಾಡಲು ಸಂತೆಗೆ ಹೋಗಿದ್ರು. 2 ವರ್ಷದ ಪವನ್ ಮನೆಯಲ್ಲಿದ್ದ ವಿದ್ಯುತ್ ವಾಯರ್ ಹಿಡಿದುಕೊಂಡಿದ್ದಾನೆ. ಇದರ ಪರಿಣಾಮ ಪವನ್ ಒದ್ದಾಡೋದನ್ನ ಅಕ್ಕ ಸಾನ್ವಿ ಬಿಡಸಲು ಹೋಗಿ ಪ್ರಾಣ ಕಳೆದುಕೊಂಡಿದ್ದಾರೆ. ಇತ್ತ ಮಕ್ಕಳನ್ನ ಉಳಿಸೋಕೆ ಹೋದ ತಾಯಿ ಕೂಡಾ ಪ್ರಾಣ ಕಳೆದುಕೊಂಡಿದ್ದಾರೆ.

ಒಂದೇ ಮನೆಯಲ್ಲಿ ಮೂರು ಜೀವಗಳು ಬಲಿಯಾಗಿರೋದ್ರಿಂದ ಇಡೀ ಹುಲಿಹೈದರ್ ಗ್ರಾಮ ಕಣ್ಣೀರು ಹಾಕುತ್ತಿದೆ. ಮಕ್ಕಳು, ಹೆಂಡತಿಯನ್ನು ಕಳೆದುಕೊಂಡ ಉಮೇಶ್ ರೋಧನಾ ಕೇಳಲಾಗುತ್ತಿಲ್ಲ. ಇಲ್ಲಿ ಇನ್ನೊಂದು ಆಶ್ಚರ್ಯಕರ ಘಟನೆ ನಡೆದಿದೆ.

ಇನ್ನೊಬ್ಬ ಮಗ ಬಾಚವ್!
ಶೈಲಾ ಉಮೇಶ್ ದಂಪತಿಗೆ ಮೂರು ಮಕ್ಕಳು. ಸಾನ್ವಿ, ಪವನ್ ಹಾಗೂ ಸೂರಯ್ಯ. ಉಮೇಶ್ ಸಂತೆ, ಸಂತೆಗೆ ಹೋಗಿ ಕುರಿ ಮಾರಾಟ ಮಾಡೋ ಕೆಲಸ ಮಾಡ್ತಾರೆ. ಇಂದು ಕೂಡಾ ಸಂತೆಗೆ ಹೋಗಿದ್ರು. ವಾಪಸ್ ಬರೋ ಅಷ್ಟರಲ್ಲಿ ಮೂರು ಜೀವಗಳು ಬಲಿಯಾಗಿವೆ. ಇಲ್ಲಿ ಒಂದು ವರ್ಷದ ಮಗ ಸೂರಯ್ಯ ಆಶ್ಚರ್ಯಕರ ರೀತಿಯಲ್ಲಿ ಬದುಕುಳಿದ್ದಾನೆ. ವಾಯರ್ ಹಿಡಿದುಕೊಂಡು ಮೂವರು ಪ್ರಾಣ ಕಳೆದುಕೊಂಡಿದ್ದಾರೆ.

ಇತ್ತ ಸೂರಯ್ಯ ಕೂಡಾ ಮನೆಯಲ್ಲಿ ಬಿದ್ದಿರೋ ವಾಯರ್ ಹಿಡಿದುಕೊಳ್ಳಲು ಹೊರಟಿದ್ದ, ಆದರೆ ಶೈಲಾ ಒದ್ದಾಡಿರೋದನ್ನ ನೋಡಿದ ಸ್ಥಳೀಯರು ಮನೆಗೆ ಓಡೋಡಿ ಬಂದಿದ್ರು. ಆಗ ಅಲ್ಲಿರೋ ನಾಗಪ್ಪ ಅನ್ನೋ ವ್ಯಕ್ತಿ ತನ್ನ ಧೋತಿ ಹಾಕಿ ಸೂರಯ್ಯನನ್ನ ಬದುಕಿಸಿದ್ದಾನೆ. ಒಂದು ವೇಳೆ ಇವರು ಸಮಯಕ್ಕೆ ಸರಿಯಾಗಿ ಮಗುವನ್ನು ಧೋತಿಯಲ್ಲಿ ಎಳೆದುಕೊಳ್ಳದೆ ಇದಿದ್ರೆ, ಮಗುವು ಬಲಿಯಾಗಬೇಕಾಗಿತ್ತು.

ಕಾರಣವೇನು?
ಉಮೇಶ್ ತಮ್ಮ ಮಕ್ಕಳಿಗಾಗಿ ಏರ್ ಕೂಲರ್ ತಂದಿದ್ದರು. ಅದಕ್ಕೆ ಮನೆಯ ಮೇಲಿಂದ ವಿದ್ಯುತ್ ಕನೆಕ್ಷನ್ ಕೊಡಿಸಲಾಗಿತ್ತು. ಇದೇ ಈ ಅವಘಡಕ್ಕೆ ಕಾರಣವಾಗಿದೆ. ಇದನ್ನೂ ಓದಿ: ಎನ್‍ಕೌಂಟರ್‌ನಲ್ಲಿ ಮೂರು ಭಯೋತ್ಪಾದಕರ ಪೈಕಿ ಒಬ್ಬ ಬದುಕುಳಿದ 

ವಿದ್ಯುತ್‍ಗೆ ಮೂವರು ಬಲಿಯಾಗಿರೋದು ತಿಳಿಯುತ್ತಲೇ ಕನಕಗಿರಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಪ್ರಸ್ತುತ ಮೃತದೇಹಗಳನ್ನು ಕನಕಗಿರಿ ಪ್ರಾಥಮಿಕ ಆರೋಗ್ಯ ವೈದ್ಯಕೀಯ ಪರೀಕ್ಷೆಗೆ ರವಾನೆ ಮಾಡಿದರು.

Share This Article
Exit mobile version