ಬೆಂಗಳೂರು: ಹೆಂಡತಿಯ (Wife) ಕಿರುಕುಳಕ್ಕೆ ಬೇಸತ್ತು ಪತಿ (Husband) ಹಾಗೂ ಆತನ ತಾಯಿ (Mother) ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರಿನಲ್ಲಿ (Bengaluru) ನಡೆದಿದೆ.
ಬೆಂಗಳೂರಿನ ರಾಜಗೋಪಾಲನಗರದ ಶ್ರೀಗಂಧ ನಗರದಲ್ಲಿ ಘಟನೆ ನಡೆದಿದ್ದು, ಮೃತರನ್ನು ಭಾಗ್ಯಮ್ಮ (57) ಹಾಗೂ ಶ್ರೀನಿವಾಸ್ (33) ಎಂದು ಗುರುತಿಸಲಾಗಿದೆ. ಮೃತ ಶ್ರೀನಿವಾಸ್ ಪೋಷಕರಿಗೆ ವಯಸ್ಸಾಗಿತ್ತು. ಹಾಗಾಗಿ ಕಳೆದ ಒಂದು ತಿಂಗಳ ಹಿಂದೆಯಷ್ಟೇ ಶ್ರೀನಿವಾಸ್ ಮಡಿಕೇರಿಯಲ್ಲಿದ್ದ ತನ್ನ ತಂದೆ, ತಾಯಿಯನ್ನು ಬೆಂಗಳೂರಿನ ತನ್ನ ಮನೆಗೆ ಕರೆದುಕೊಂಡು ಬಂದಿದ್ದ. ಆದರೆ ಶ್ರೀನಿವಾಸ್ ಪತ್ನಿ ಸಂಧ್ಯಾಳಿಗೆ ಇದು ಇಷ್ಟವಿರಲಿಲ್ಲ.
ತನ್ನ ತಂದೆ ಅನಾರೋಗ್ಯದ ಹಿನ್ನೆಲೆಯಲ್ಲಿ ಹಾಸಿಗೆ ಹಿಡಿದಿದ್ದಾರೆ. ಹೀಗಾಗಿ ವಯಸ್ಸಾದ ಅತ್ತೆ – ಮಾವನನ್ನು ನೋಡಿಕೊಳ್ಳೋರು ಯಾರು? ತನಗೆ ಅತ್ತೆ, ಮಾವನನ್ನು ನೋಡಿಕೊಳ್ಳೋಕೆ ಕಷ್ಟವಾಗಲಿದೆ ಎಂದು ಸಂಧ್ಯಾ ಗಲಾಟೆ ತೆಗೆದಿದ್ದಳು. ಇದೇ ವಿಚಾರವಾಗಿ ಮಧ್ಯರಾತ್ರಿ ಮೂರು ಗಂಟೆಗೆ ಗಲಾಟೆ ನಡೆದಿತ್ತು ಎಂಬ ಆರೋಪ ಬಂದಿದೆ. ಇದನ್ನೂ ಓದಿ: ಅಯೋಧ್ಯೆ ಮಸೀದಿ ನಿರ್ಮಾಣ ಕಾರ್ಯ 2023ಕ್ಕೆ ಪೂರ್ಣ ಸಾಧ್ಯತೆ – ಟ್ರಸ್ಟ್
ಅದಾದ ಬಳಿಕ ಮೊದಲಿಗೆ ತಾಯಿ ಭಾಗ್ಯಮ್ಮ ಆತ್ಮಹತ್ಯೆಗೆ ಶರಣಾಗಿದ್ದಾಳೆ. ನಂತರ ಶ್ರೀನಿವಾಸ್ ಕೂಡ ಆತ್ಮಹತ್ಯೆಗೆ ಶರಣಾಗಿದ್ದಾನೆ. ಮಧ್ಯಾಹ್ನದ ತನಕ ಬಾಗಿಲು ತೆಗೆಯದಿದ್ದಾಗ ಅನುಮಾನಗೊಂಡು ನೋಡಿದ ವೇಳೆ ಪ್ರಕರಣ ಬೆಳಕಿಗೆ ಬಂದಿದೆ. ಗಲಾಟೆಯಿಂದ ಬೇಸತ್ತು ತಾಯಿ- ಮಗ ಆತ್ಮಹತ್ಯೆಗೆ ಶರಣಾಗಿರುವ ಶಂಕೆ ವ್ಯಕ್ತವಾಗಿದೆ. ಘಟನೆಗೆ ಸಂಬಂಧಿಸಿ ರಾಜಗೋಪಾಲನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇದನ್ನೂ ಓದಿ: ಪಂಜಾಬ್‌ನಲ್ಲಿ ಶಸ್ತ್ರಾಸ್ತ್ರ ನಿಯಂತ್ರಣ ಬಿಗಿ – ಹಿಂಸೆ ವೈಭವೀಕರಿಸುವ ಹಾಡುಗಳು ಬ್ಯಾನ್