Connect with us

Districts

ಹೆತ್ತ ತಾಯಿಯೇ ಪ್ರಿಯಕರನೊಂದಿಗೆ ಸೇರಿ 5 ವರ್ಷದ ಮಗಳಿಗೆ ಬಾಸುಂಡೆ ಬರುವಂತೆ ಥಳಿಸಿದ್ಳು

Published

on

ಕೊಪ್ಪಳ: ಹೆತ್ತ ತಾಯಿಯೇ ಪ್ರಿಯಕರನೊಂದಿಗೆ ಸೇರಿ ಮಗಳಿಗೆ ಥಳಿಸಿರೋ ಅಮಾನವೀಯ ಘಟನೆ ಕೊಪ್ಪಳದಲ್ಲಿ ನಡೆದಿದೆ.

ಗಂಗಾವತಿಯ ಹಿರೇಜಂತಕಲ್ ನಲ್ಲಿ ಹದಿನೈದು ದಿನದ ಹಿಂದೆ ಈ ಘಟನೆ ನಡೆದಿದ್ದು, ಬಾಲಕಿಗೆ ಬಾಸುಂಡೆ ಬರುವ ಹಾಗೆ ಥಳಿಸಿರೋ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬಳಿಕ ಈ ಘಟನೆ ಬೆಳಕಿಗೆ ಬಂದಿದೆ.

ಷರೀಫ್ ಹಾಗೂ ಫಾತೀಮಾಗೆ ಹತ್ತು ವರ್ಷದ ಹಿಂದೆ ಮದುವೆಯಾಗಿ ಮೂರು ಮಕ್ಕಳಿದ್ದಾರೆ. ಆದರೆ ಫಾತೀಮಾ ಇತ್ತೀಚಿಗೆ ರಾಜಾಭಕ್ಷಿ ಎಂಬಾತನೊಂದಿಗೆ ಅನೈತಿಕ ಸಂಬಂಧವಿಟ್ಟುಕೊಂಡಿದ್ದಳಂತೆ. ಈ ಅನೈತಿಕ ಸಂಬಂಧವಿರೋ ವಿಷಯ ಪತಿ ಷರೀಫ್‍ಗೆ ಗೊತ್ತಾದಾಗ ತಲಾಖ್ ನೀಡಿದ್ದಾರೆ.

ವಿಚ್ಛೇಧನ ನೀಡಿದ್ದರಿಂದ ಮಕ್ಕಳಿಗೆ ಹದಿನೆಂಟು ವರ್ಷ ಆಗೋವರಿಗೂ ತಾಯಿ ಬಳಿ ಇರಲಿ ಅಂತ ಬಿಟ್ಟಿದ್ದಾರೆ. ಅಪ್ರಾಪ್ತ ಮಕ್ಕಳೊಂದಿಗೆ ಪ್ರಿಯಕರನ ಜೊತೆ ಫಾತೀಮಾ ವಾಸವಾಗಿದ್ದಾಳೆ. ಆದರೆ ಮಕ್ಕಳು ಇರೋದ್ರಿಂದ ತಮಗೆ ತೊಂದರೆಯಾಗುತ್ತದೆ ಅಂತ ಪ್ರಿಯಕರ ರಾಜಾಭಕ್ಷಿ ಹಾಗೂ ಫಾತೀಮಾ ಸೇರಿ ಐದು ವರ್ಷದ ಮಗಳು ಪರ್ವೀನ್‍ಗೆ ಹಿಗ್ಗಾಮುಗ್ಗಾ ಥಳಿಸಿದ್ದಾಳೆ. ಇದರ ಫೋಟೋವನ್ನ ರಾಜಾಭಕ್ಷಿ ಸಾಮಾಜಿಕ ಜಾಲತಾಣಗಳಲ್ಲಿ ಅಪ್‍ಲೋಡ್ ಕೂಡ ಮಾಡಿದ್ದಾನೆ.

ಮೊದಲನೇ ಗಂಡ ಷರೀಫ್ ಸಾಮಾಜಿಕ ಜಾಲತಾಣಗಳಲ್ಲಿ ಫೋಟೋ ನೋಡಿದ ಬಳಿಕ ಮಕ್ಕಳಿಗೆ ಹೊಡೆದಿರೋ ವಿಷಯ ಗೊತ್ತಾಗಿದೆ. ಅನೈತಿಕ ಸಂಬಂಧಕ್ಕೆ ಮಕ್ಕಳಿಂದ ತೊಂದರೆಯಾಗುತ್ತೆಂದು ಈ ರೀತಿಯಾಗಿ ಮಕ್ಕಳಿಗೆ ಥಳಿಸಿದ್ದಾಳೆ ಅಂತ ಆರೋಪಿಸಿ, ನಗರದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

https://youtu.be/6nIkT5aOVqI

 

Click to comment

Leave a Reply

Your email address will not be published. Required fields are marked *