ನವದೆಹಲಿ: ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ತನ್ನನ್ನು ಗುರಿಯಾಗಿಸಿ ಕಾಂಗ್ರೆಸ್ ಕ್ರಿಯೆಟ್ ಮಾಡಿದ್ದ ಟ್ವಿಟ್ಟರ್ ಪೋಲನ್ನು ರಿಟ್ವೀಟ್ ಮಾಡಿದ್ದಾರೆ.
ಇರಾಕ್ ನಲ್ಲಿ ಐಸಿಸ್ ಉಗ್ರರ ದಾಳಿಗೆ ಮೃತಪಟ್ಟ 39 ಭಾರತೀಯರ ಸಾವಿಗೆ ಕೇಂದ್ರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಹೊಣೆಗಾರರು ಎಂದು ಕಾಂಗ್ರೆಸ್ ಆರೋಪಿಸಿ ಪೋಲ್ ರಚಿಸಿತ್ತು. 39 ಜನರ ಸಾವಿಗೆ ಕಾರಣರಾದ ಸುಷ್ಮಾ ಸ್ವರಾಜ್ ತಮ್ಮ ಅಧಿಕಾರದಲ್ಲಿ ವಿಫಲವಾಗಿದ್ದಾರೆಯೇ ಎನ್ನುವ ಪ್ರಶ್ನೆಯನ್ನು ಕಾಂಗ್ರೆಸ್ ಕೇಳಿತ್ತು.
Advertisement
ಮಾರ್ಚ್ 26ರಂದು ಮುಕ್ತಾಯಗೊಂಡ ಈ ಪೋಲ್ ನಲ್ಲಿ 33,879 ಮಂದಿ ವೋಟ್ ಮಾಡಿದ್ದು, 76% ಮಂದಿ ಇಲ್ಲ ಎಂದು ಉತ್ತರಿಸಿದರೆ ಇನ್ನುಳಿದ 24% ಮಂದಿ ಹೌದು ಎಂದು ಉತ್ತರಿಸಿದ್ದರು. ಈ ಪೋಲಿನಲ್ಲಿ ತನ್ನ ಪರವಾಗಿ ಫಲಿತಾಂಶ ಬಂದ ಹಿನ್ನೆಲೆಯಲ್ಲಿ ಸುಷ್ಮಾ ಸ್ವರಾಜ್ ಕಾಂಗ್ರೆಸ್ ಟ್ವೀಟ್ ನ್ನು ರಿಟ್ವೀಟ್ ಮಾಡಿದ್ದಾರೆ.
Advertisement
Advertisement
ಟ್ವಿಟ್ಟರ್ ನಲ್ಲಿ ಕಾಂಗ್ರೆಸ್ ಕೇಳಿದ ಪ್ರಶ್ನೆಗೆ ಜನ ಸಾಮಾನ್ಯರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಸಾವಿನ ಮನೆಯಲ್ಲೂ ರಾಜಕೀಯ ಮಾಡುತ್ತಿರುವುದು ಸರಿಯಲ್ಲ ಎಂದು ಟೀಕಿಸಿದ್ದಾರೆ.
Advertisement
2014 ರಲ್ಲಿ ಇರಾಕ್ ನಿಂದ ಐಸಿಸ್ ಅಪಹರಣ ಮಾಡಿದ್ದ 39 ಮಂದಿ ಭಾರತೀಯರನ್ನು ಐಸಿಸ್ ಉಗ್ರರು ಹತ್ಯೆ ಮಾಡಿದ್ದಾರೆ ಎಂದು ವಿದೇಶಾಂಗ ಸಚಿವೆ ಮಾರ್ಚ್ 20ರಂದು ಸುಷ್ಮಾ ಸ್ವರಾಜ್ ರಾಜ್ಯಸಭೆಯಲ್ಲಿ ತಿಳಿಸಿದ್ದರು. ಮೊಸುಲ್ ನಿಂದ ಅಪಹರಣ ಮಾಡಿದವರ ಹತ್ಯೆ ಕುರಿತು ಖಚಿತ ಮಾಹಿತಿ ಪಡಿಸಿಕೊಳ್ಳಲು ಆಳವಾದ ರೇಡಾರ್ ಬಳಕೆ ಮಾಡಲಾಗಿದೆ. 39 ಮೃತದೇಹಗಳಲ್ಲಿ 38 ಮಂದಿಯ ಡಿಎನ್‍ಎ ಸ್ಯಾಪಲ್ ಮ್ಯಾಚ್ ಆಗಿದೆ. 39ನೇ ಮೃತ ದೇಹದ ಡಿಎನ್‍ಎ ಶೇ. 70 ರಷ್ಟು ಮ್ಯಾಚ್ ಆಗಿದೆ ಎಂದು ತಿಳಿಸಿದ್ದರು.
ಕಳೆದ ವರ್ಷ ಜುಲೈನಲ್ಲಿ ಸದನಕ್ಕೆ ಮಾಹಿತಿ ನೀಡಿದ್ದ ಸುಷ್ಮಾ ಸ್ವರಾಜ್ ಅವರು, ಅಪಹರಣಕ್ಕೆ ಒಳಗಾಗಿರುವ 39 ಮಂದಿಯ ಖಚಿತ ಮಾಹಿತಿ ದೊರೆಯದ ಹೊರತು ಅವರು ಮೃತ ಪಟ್ಟಿದ್ದಾರೆ ಎಂದು ಪ್ರಕಟಿಸಲು ಸಾಧ್ಯವಿಲ್ಲ ಎಂದು ತಿಳಿಸಿದ್ದರು. ಆದರೆ ಇಂದು ಖಚಿತ ಮಾಹಿತಿಯ ಮೇಲೆ 39 ಮಂದಿಯ ಹತ್ಯೆಯಾಗಿರುವುದನ್ನು ದೃಢಪಡಿಸಿದರು. ಇದನ್ನೂ ಓದಿ: ಇರಾಕ್‍ನಲ್ಲಿ ಐಸಿಸ್‍ನಿಂದ ಹತ್ಯೆಯಾಗಿದ್ದ 39 ಭಾರತೀಯರ ಮೃತ ದೇಹ ಪತ್ತೆ ಮಾಡಿದ್ದು ಹೇಗೆ?
ಹತ್ಯೆಯಾದ ಭಾರತೀಯ ಮೃತದೇಹದ ಅವಶೇಷಗಳನ್ನು ಭಾರತಕ್ಕೆ ತರಲಾಗುವುದು. ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ವಿಕೆ ಸಿಂಗ್ ಇರಾಕ್ ಗೆ ತೆರಳಿ ಅಲ್ಲಿಂದ ಮೃತರ ಅವಶೇಷಗಳನ್ನು ಅಮೃತಸರ, ಪಾಟ್ನಾ ಹಾಗೂ ಕೋಲ್ಕತ್ತಾಗಳಿಗೆ ತರಲಿದ್ದಾರೆ ಎಂದು ಮಾಹಿತಿ ನೀಡಿದರು.
Do you think the death of 39 Indians in Iraq is Sushma Swaraj’s biggest failure as Foreign Minister? #IndiaSpeaks
— Congress (@INCIndia) March 26, 2018