ಶ್ರೀನಗರ: ಕಾಶ್ಮೀರದ ಪೂಂಚ್‍ನ ಸುರನ್ ಕೋಟ್ ಪ್ರದೇಶದಲ್ಲಿ ಮೋಸ್ಟ್ ವಾಂಟೆಡ್ ಪಾಕಿಸ್ತಾನಿ ಭಯೋತ್ಪಾದಕ ಅಬು ಜರಾನ್ ನನ್ನು ಹತ್ಯೆ ಮಾಡಿರುವುದಾಗಿ ಭಾರತೀಯ ಸೇನೆ ಹೇಳಿಕೊಂಡಿದೆ.
Advertisement
ಉಗ್ರರು ಭದ್ರತಾ ಪಡೆಗಳ ಮೇಲೆ ಗುಂಡು ಹಾರಿಸುವ ಮೂಲಕ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರು. ಆದರೆ ಈ ಪಾಕಿಸ್ತಾನಿ ಭಯೋತ್ಪಾದಕನನ್ನು ಭದ್ರತಾ ಪಡೆ ಹೊಡೆದುರುಳಿಸಿದ್ದು ಅವನೊಂದಿಗೆ ಇದ್ದ ಇನ್ನೊಬ್ಬ ಉಗ್ರ ಪರಾರಿಯಾಗಿದ್ದಾನೆ. ನಂತರದಲ್ಲಿ ಹತ್ಯೆಗೈದ ಅಬು ಜರಾನ್ ಬಳಿಯಿದ್ದ ಎಕೆ-47 ಬಂದೂಕು, ತುಂಬಿದ 4 ಮ್ಯಾಗಜಿನ್, ಒಂದು ಗ್ರೆನೇಡ್ ಮತ್ತು ಕೆಲವು ಭಾರತೀಯ ಕರೆನ್ಸಿ ವಶಪಡಿಸಿಕೊಳ್ಳಲಾಗಿದೆ. ಇದನ್ನೂ ಓದಿ: 263 ಪಾಸಿಟಿವ್, 7 ಸಾವು – ಇಂದು 2,25,152 ಜನರಿಗೆ ಲಸಿಕೆ
Advertisement
ಈ ಭಯೋತ್ಪಾದಕ ಪಾಕಿಸ್ತಾನದಲ್ಲಿ ತರಬೇತಿ ಪಡೆದಿದ್ದು, ಈ ವರ್ಷದ ಆಗಸ್ಟ್‍ನಲ್ಲಿ ಅಬು ಜರಾನ್ ಕಣಿವೆ ರಾಜ್ಯದಲ್ಲಿ ಇರುವ ಬಗ್ಗೆ ಮಾಹಿತಿ ಸಿಕ್ಕಿತ್ತು. ಈ ಉಗ್ರಗಾಮಿಗಳು ಕಾಶ್ಮೀರದಲ್ಲಿ ಮತ್ತೆ ಉಗ್ರ ಚಟುವಟಿಕೆ ಆರಂಭಿಸಲು ಪ್ರಯತ್ನಿಸುತ್ತಿದ್ದರು ಎಂದು ಸೇನೆ ತಿಳಿಸಿದೆ. ಇದನ್ನೂ ಓದಿ: 100 ರೇಷನ್ ಕಾರ್ಡ್ ತಾಂಡಾಗಳಿಗೊಂದು ನ್ಯಾಯ ಬೆಲೆ ಅಂಗಡಿ
Advertisement
Advertisement
ಉಗ್ರರು ಕಳೆದ ಕೆಲವು ತಿಂಗಳಿಂದ ದಟ್ಟ ಕಾಡಿನಲ್ಲಿ ಆಶ್ರಯ ಪಡೆಯುತ್ತಿದ್ದರು. ಅವರಿಗೆ ಆಹಾರ, ಬಟ್ಟೆ ಮತ್ತು ಸಂವಹನಕ್ಕಾಗಿ ಮೊಬೈಲ್ ಅಗತ್ಯವಿತ್ತು. ಈ ಕಾರಣಕ್ಕೆ ಉಗ್ರರು ಸ್ಥಳೀಯ ನಿವಾಸಿಗಳನ್ನು ಸಂಪರ್ಕಿಸುತ್ತಿದ್ದರು. ಸ್ಥಳೀಯ ನಿವಾಸಿಗಳು ಉಗ್ರರ ಚಲನವಲನಗಳ ಬಗ್ಗೆ ಸೇನೆಗೆ ಮಾಹಿತಿ ನೀಡಿದ್ದರು. ಖಚಿತ ಮಾಹಿತಿಯನ್ನು ಪಡೆದಿದ್ದ ಸೇನೆ ಇಂದು ಉಗ್ರರ ಅಡಗುದಾಣಕ್ಕೆ ನುಗ್ಗಿ ಎನ್‍ಕೌಂಟರ್ ಮಾಡಿ ಹತ್ಯೆ ಮಾಡಿದೆ.
ಕಾಶ್ಮೀರ ಪೊಲೀಸರು ಮತ್ತು ಸ್ಥಳೀಯರ ಬೆಂಬಲದಿಂದಾಗಿ ಈ ವರ್ಷ ಹತ್ಯೆಯಾದ 8ನೇ ಉಗ್ರ ಅಬು ಜರಾನ್ ಆಗಿದ್ದಾನೆ. ಇತ್ತೀಚಿಗಷ್ಟೇ ರಾಜೌರಿ ಸೆಕ್ಟರ್ ಗಡಿ ನಿಯಂತ್ರಣ ರೇಖೆ ಬಳಿ ಉಗ್ರರಿಗೆ ಮಾಹಿತಿ ನೀಡುತ್ತಿದ್ದ ಹಾಜಿ ಆರೀಫ್ ನನ್ನು ಹತ್ಯೆ ಮಾಡಲಾಗಿತ್ತು.