Bengaluru CityCoronaDistrictsKarnatakaLatestMain Post

263 ಪಾಸಿಟಿವ್, 7 ಸಾವು – ಇಂದು 2,25,152 ಜನರಿಗೆ ಲಸಿಕೆ

ಬೆಂಗಳೂರು: ರಾಜ್ಯದಲ್ಲಿ ಇಂದು ಇಂದು ಒಟ್ಟು 2,25,152 ಜನರಿಗೆ ಕೊರೊನಾ ಲಸಿಕೆ ನೀಡಲಾಗಿದ್ದು, 7 ಮರಣ ಪ್ರಕರಣ ದಾಖಲಾಗಿದೆ. ಒಟ್ಟು 7,165ಕ್ಕೆ ಸಕ್ರಿಯ ಪ್ರಕರಣಗಳ ಸಂಖ್ಯೆ ಏರಿಕೆಯಾಗಿದೆ.

ರಾಜ್ಯದಲ್ಲಿ 327 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. 263 ಹೊಸ ಪ್ರಕರಣಗಳು ದಾಖಲಾಗಿದೆ. ಈವರೆಗೆ ರಾಜ್ಯದಲ್ಲಿ ಒಟ್ಟು 30,00,934 ಜನರಿಗೆ ಕೊರೊನಾ ಬಂದಿದೆ. 29,55,465 ಜನರು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಕೋವಿಡ್-19 ಮರಣ ಪ್ರಮಾಣ ಶೇ.2.66 ರಷ್ಟಿದ್ದರೆ, ಪಾಸಿಟಿವಿಟಿ ರೇಟ್ ಶೇ.0.36 ರಷ್ಟಿದೆ. ಇದನ್ನೂ ಓದಿ: ರೈಲು ವಿಳಂಬ – ಅಭ್ಯರ್ಥಿಗಳಿಗೆ ಟ್ರಾಫಿಕ್ ರಹಿತ ಸಾರಿಗೆ ವ್ಯವಸ್ಥೆ

ಇಂದು ಬೆಂಗಳೂರು ನಗರದಲ್ಲಿ ಸೋಂಕಿತರ ಸಂಖ್ಯೆ 158 ಇದ್ದು, 182 ಜನರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ನಗರದಲ್ಲಿ ಸೋಂಕಿನಿಂದ ಒಬ್ಬರು ಸಾವನ್ನಪ್ಪಿದ್ದಾರೆ.

ಒಟ್ಟು 71,308 ಸ್ಯಾಂಪಲ್ (ಆರ್‌ಟಿ-ಪಿಸಿಆರ್ 51,436 + 19,872 ರ್ಯಾಪಿಡ್ ಆಂಟಿಜನ್)ಗಳನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದೆ. ಇದನ್ನೂ ಓದಿ: ‘ಸುಶಾಂತ್ ಸ್ಟಾರ್ ಅಲ್ಲ’ ಎಂದು ಸಿನಿಮಾ ಮಾಡಲು ನಿರ್ಮಾಪಕರು ಮುಂದೆ ಬಂದಿರಲಿಲ್ಲ: ಅಭಿಷೇಕ್ ಕಪೂರ್

ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ, ಬಾಗಲಕೋಟೆ 0, ಬಳ್ಳಾರಿ 0, ಬೆಳಗಾವಿ 10, ಬೆಂಗಳೂರು ಗ್ರಾಮಾಂತರ 2, ಬೆಂಗಳೂರು ನಗರ 158, ಬೀದರ್ 1, ಚಾಮರಾಜನಗರ 0, ಚಿಕ್ಕಬಳ್ಳಾಪುರ 1, ಚಿಕ್ಕಮಗಳೂರು 11, ಚಿತ್ರದುರ್ಗ 4, ದಕ್ಷಿಣ ಕನ್ನಡ 13, ದಾವಣಗೆರೆ 0, ಧಾರವಾಡ 6, ಗದಗ 0, ಹಾಸನ 02, ಹಾವೇರಿ 0, ಕಲಬುರಗಿ 2, ಕೊಡಗು 14, ಕೋಲಾರ 0, ಕೊಪ್ಪಳ 0, ಮಂಡ್ಯ 1, ಮೈಸೂರು 16, ರಾಯಚೂರು 2, ರಾಮನಗರ 0, ಶಿವಮೊಗ್ಗ 7, ತುಮಕೂರು 7, ಉಡುಪಿ 2, ಉತ್ತರ ಕನ್ನಡ 4, ವಿಜಯಪುರ ಮತ್ತು ಯಾದಗಿರಿಯಲ್ಲಿ ಶೂನ್ಯ ಪಾಸಿಟಿವ್ ಪ್ರಕರಣ ದಾಖಲಾಗಿದೆ.

Leave a Reply

Your email address will not be published.

Back to top button