ನ್ಯೂಯಾರ್ಕ್: 2020ರ ಜುಲೈನಲ್ಲಿ ಅಮೆರಿಕಾದ ಅಲಬಾಮದಲ್ಲಿ ಐದೂವರೆ ತಿಂಗಳಲ್ಲೇ ಜನಿಸಿದ ಮಗುವು ಅವಧಿಗಿಂತ ಮುಂಚಿತವಾಗಿ ಹುಟ್ಟಿ ಬದುಕುಳಿದ ಮಗು ಎಂಬ ಗಿನ್ನಿಸ್ ದಾಖಲೆಯನ್ನು ತನ್ನ ಹೆಸರಿನಲ್ಲಿ ಬರೆದುಕೊಂಡಿದೆ.
Advertisement
2020 ಜುಲೈ4ರಂದು ಮಿಶೆಲ್ ಬಟ್ಲರ್ ಅವರಿಗೆ ಜನಿಸಿದ ಕುರ್ಟಿಸ್ ಝೈ-ಕೀರ್ತ್ ಗಿನ್ನಿಸ್ ದಾಖಲೆಗೆ ಭಾಜನವಾದ ಮಗುವಾಗಿದೆ. ಸಾಮಾನ್ಯವಾಗಿ ಮಹಿಳೆ ಗರ್ಭ ಧರಿಸಿದ 9 ತಿಂಗಳ ಬಳಿಕ ಮಗುವಿನ ಜನ್ಮ ನೀಡುತ್ತಾರೆ. ಆದರೆ ಐದೂವರೆ ತಿಂಗಳಿಗೆ ಈ ಮಗು ಜನಿಸಿದೆ. ಇದನ್ನೂ ಓದಿ: ಫೇಸ್‍ಬುಕ್ ತೆರೆದರೆ ಕೆನ್ನಗೆ ಬಾರಿಸಲು ಮಹಿಳೆ ನೇಮಿಸಕೊಂಡ ಉದ್ಯಮಿ
Advertisement
Advertisement
ಮಿಶೆಲ್ 2020ರ ನವೆಂಬರ್ 11ರಂದು ತಮ್ಮ ಮಗುವಿನ ಜನ್ಮ ನೀಡಬೇಕಿತ್ತು. ಆದರೆ ಆರೋಗ್ಯ ಪರೀಕ್ಷೆಗೆ 2020ರ ಜುಲೈ 4 ರಂದು ಆಸ್ಪತ್ರೆಗೆ ಬಂದ ಮಿಶೆಲ್ ಅವರನ್ನು ಅಲಬಾಮನ ವಿವಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ವೇಳೆ ಅವರಿಗೆ ತುರ್ತು ಶಸ್ತ್ರಚಿಕಿತ್ಸೆ ನಡೆಸಿದ್ದಾರೆ. ಇದನ್ನೂ ಓದಿ: ಹಿಂದೂ ಪುರಾತನ ದೇವಾಲಯವನ್ನು ಪುನರ್‌ನಿರ್ಮಿಸಲು ಆದೇಶಿದ ಪಾಕ್ ನ್ಯಾಯಮೂರ್ತಿ
Advertisement
ಮಿಶೆಲ್ ಅವರಿಗೆ ಒಂದು ಹೆಣ್ಣು, ಗಂಡು ಮಗು ಜನಿಸಿದ್ದು, ಚಿಕಿತ್ಸೆಗೆ ಸ್ಪಂದಿಸದೆ ಹೆಣ್ಣು ಮಗುಸಾವನ್ನಪ್ಪಿತ್ತು. ಆದರೆ ಹುಟ್ಟಿದಾಗ ಗಂಡು ಮಗು ಕೇವಲ 420 ಗ್ರಾಂ ಅಂದರೆ ಒಂದು ಪುಟ್ಬಾಲ್ ತೂಕ ಕ್ಕಿಂತ ಕಡಿಮೆ ಇತ್ತು. ಈಗ ಇದು ಸಾಮಾನ್ಯ ಮಗುವಿನಂತೆ ಬೆಳೆಯುತ್ತಿದೆ.