ಪ್ರೀತಿಯೆಂದರೆ ಭಾವನೆ, ಸ್ಪಂದನೆ, ಸಹಾನುಭೂತಿ, ನಿಸ್ವಾರ್ಥ ಗುಣಗಳ ಒಂದು ಸಂಯೋಗ. ಹೃದಯದ ತುಂಬಾ ಪ್ರೀತಿ ಇಟ್ಟುಕೊಂಡಿರುವವರಿಗೆ ಈ ಜಗತ್ತನ್ನೇ ಬದಲಾಯಿಸುವ ಶಕ್ತಿ ಇರುತ್ತೆ. ಎಂತಹ ಕ್ರೂರ ವ್ಯಕ್ತಿತ್ವವನ್ನೂ ಬದಲಾಯಿಸಬಹುದು. ಅವರನ್ನು ದಯೆ, ಸಹಾನುಭೂತಿ ವ್ಯಕ್ತಿಯನ್ನಾಗಿ ಪರಿವರ್ತಿಸಬಹುದು. ಪ್ರೀತಿಯೆಂದರೆ ತನ್ನನ್ನು ತಾನು ಅರ್ಪಿಸಿಕೊಳ್ಳುವುದು, ಪ್ರೀತಿ ಪಾತ್ರರಿಗಾಗಿ ರಿಸ್ಕ್ ತೆಗೆದುಕೊಳ್ಳುವುದು, ಅವರಿಗಾಗಿ ಎಲ್ಲವನ್ನೂ ಮಾಡುವುದು. ಅವರಿಂದ ಏನೂ ಸಿಗದಿದ್ದರೂ, ನಿಸ್ವಾರ್ಥ ಭಾವನೆಯಿಂದ ನಡೆದುಕೊಳ್ಳುವುದು.
ಪ್ರೀತಿಸುವವರಲ್ಲಿ ಇಂತಹ ವಿಶೇಷ ಗುಣಗಳಿರುತ್ತವೆ. ಈ ಗುಣಗಳಿಲ್ಲದಿದ್ದರೆ ಅವರು ನಿಜವಾದ ಪ್ರೇಮಿಗಳಾಗಲು ಸಾಧ್ಯವೇ ಇಲ್ಲ. ಇದು ಹೆಣ್ಣು-ಗಂಡು ಇಬ್ಬರಲ್ಲೂ ಇರಬೇಕು. ಪ್ರೀತಿಸುವ ಹೆಣ್ಣಾಗಲಿ ಅಥವಾ ಗಂಡಾಗಲಿ, ಯಾರಾದರೊಬ್ಬರಲ್ಲಿ ಈ ಗುಣ ಇಲ್ಲದಿದ್ದರೆ ಆ ಪ್ರೀತಿ ಹೆಚ್ಚು ಕಾಲ ಉಳಿಯುವುದೂ ಇಲ್ಲ. ಇದನ್ನೂ ಓದಿ: ಸೊಸೆ ಸ್ನೇಹ ಬಯಸೋ ಅತ್ತೆಗೆ ಈ ಗುಣ ಇರುತ್ತಂತೆ..
Advertisement
Advertisement
ತ್ಯಾಗ
ಪ್ರೇಮಿಗಾಗಿ ನಿಮ್ಮನ್ನು ಮತ್ತು ನಿಮ್ಮ ಎಲ್ಲವನ್ನೂ ತ್ಯಾಗ ಮಾಡುವ ಗುಣವಿದ್ದರೆ, ಅದು ಪ್ರೀತಿಯ ಅತ್ಯುನ್ನತ ಕಾರ್ಯಗಳಲ್ಲಿ ಒಂದಾಗಿದೆ. “ಪ್ರೀತಿ ಮಧುರ.. ತ್ಯಾಗ ಅಮರ” ಎಂಬ ಗಾದೆ ಇದೆ. ಪ್ರೀತಿಗಾಗಿ ನೀವು ಕೆಲವೊಂದನ್ನು ತ್ಯಾಗ ಮಾಡಲೇಬೇಕಾಗುತ್ತದೆ. ಆಗ ಮಾತ್ರ ಪ್ರೀತಿಯಲ್ಲಿ ಯಶಸ್ಸು ಗಳಿಸಲು ಸಾಧ್ಯ. ಈ ತ್ಯಾಗಕ್ಕೂ ಧೈರ್ಯ ಬೇಕು.
Advertisement
Advertisement
ಪ್ರೀತಿಯಲ್ಲಿ ನಿರೀಕ್ಷೆ ಇರಬಾರದು
“ಆಸೆಯೇ ದುಃಖಕ್ಕೆ ಮೂಲ” ಎಂದಷ್ಟೇ ಬುದ್ಧ ಹೇಳಿಲ್ಲ. ಮುಂದುವರಿದು “ನಿರೀಕ್ಷೆಯೇ ನಿರಾಸೆಗೆ ಮೂಲ” ಎಂದು ಕೂಡ ಬುದ್ಧ ಬೋಧನೆ ಮಾಡಿದ್ದಾರೆ. ನಿರೀಕ್ಷಿಗಳು ಈಡೇರದೇ ಕೆಲವೊಮ್ಮೆ ನಿಮಗೆ ನಿರಾಸೆಯಾಗಬಹುದು. ಪ್ರೀತಿಸುವವರು ಕೆಲವೊಮ್ಮೆ ಪ್ರೇಮಿಗಳಿಂದ ಏನನ್ನಾದರೂ ನಿರೀಕ್ಷಿಸುತ್ತಿರುತ್ತಾರೆ. ಅದು ಸಿಗದಿದ್ದಾಗ ಅಥವಾ ಈಡೇರದೇ ಇದ್ದಾಗ ನೊಂದುಕೊಳ್ಳುತ್ತಾರೆ. ನೀವು ಯಾವುದೇ ಷರತ್ತುಗಳು ಅಥವಾ ನಿರೀಕ್ಷೆಗಳಿಲ್ಲದೆ ಯಾರನ್ನಾದರೂ ಪ್ರೀತಿಸುತ್ತಿದ್ದರೆ, ನೀವು ಅವರನ್ನು ಹೆಚ್ಚು ಪ್ರೀತಿಸುತ್ತಿದ್ದೀರಿ ಎಂದೇ ಅರ್ಥ. ಇದನ್ನೂ ಓದಿ: ಮಕ್ಕಳೊಂದಿಗೆ ಜಗಳವಾಡುವ ಮುನ್ನ ಪೋಷಕರು ಈ ಅಂಶಗಳನ್ನು ನೆನಪಿಡಿ..
ಮನ್ನಿಸು
ಪ್ರೀತಿಯೆಂಬ ಉತ್ತಮ ಬಾಂಧವ್ಯವನ್ನು ಉಳಿಸಿಕೊಳ್ಳಲು ಪ್ರೇಮಿಗಳಲ್ಲಿ ʼಮನ್ನಿಸುʼವ ಗುಣ ಇರಲೇಬೇಕು. ನಿಮ್ಮ ಪ್ರೀತಿ ಪಾತ್ರರ ಮೇಲೆ ಅಸಮಾಧಾನ, ಕೋಪ ಮಾಡಿಕೊಳ್ಳಬಾರದೆಂದರೆ ಕ್ಷಮಿಸುವ ಗುಣ ಮುಖ್ಯ. ಕೊನೆಗೆ ಪ್ರೀತಿಯಲ್ಲಿ ನಿಮಗೆ ಅವಳು/ಅವನು ಅನ್ಯಾಯ ಮಾಡಿದರೂ, ಅವರನ್ನು ಕ್ಷಮಿಸುವಂತಿರಬೇಕು. ಕ್ಷಮಿಸುವ ಗುಣದಲ್ಲೇ ನಿಜವಾದ ಪ್ರೀತಿ ಅಡಗಿದೆ.
ಪರಾನುಭೂತಿ
ಪರಾನುಭೂತಿಯು ನಿಮ್ಮ ಪ್ರೀತಿ ಪಾತ್ರರ ಭಾವನೆ ಅರ್ಥ ಮಾಡಿಕೊಳ್ಳುವ, ಅವರ ಬಗ್ಗೆ ಕಾಳಜಿ ವಹಿಸುವ ಗುಣವಾಗಿದೆ. ಪ್ರೇಮಿಯ ಕಷ್ಟ ತನ್ನದೆಂದೇ ಭಾವಿಸಬೇಕು. ಅವರ ಕಷ್ಟದ ಸಂದರ್ಭದಲ್ಲಿ ನೆರವಾಗುವ ಮೂಲಕ ಅಭಯ ನೀಡಬೇಕು. ಪರಾನುಭೂತಿ ಮನೋಭಾವವಿದ್ದರೆ ಮಾತ್ರ ಇದು ಸಾಧ್ಯ.
ಸೇವೆ
ಕೆಲವೇ ಕೆಲವು ಮಂದಿ ವೈಯಕ್ತಿಕ ಲಾಭವನ್ನು ಬಯಸದೆ ಇತರರಿಗೆ ಸಹಾಯ ಮಾಡುವ ನಿಸ್ವಾರ್ಥ ಗುಣವನ್ನು ಹೊಂದಿರುತ್ತಾರೆ. ಕಷ್ಟದ ಸಮಯಗಳಲ್ಲಿ ಇತರರಿಗೆ ಸಹಾಯ ಮಾಡಲು ಪ್ರೀತಿ, ತಿಳಿವಳಿಕೆ ಅಗತ್ಯವಿರುತ್ತದೆ. ಸೌಮ್ಯ ಮನೋಭಾವ, ಸೇವೆ ಗುಣವಿದ್ದರೆ ನೀವು ಪ್ರೇಮಿಗೆ ಇನ್ನಷ್ಟು ಹತ್ತಿರವಾಗುತ್ತೀರಿ. ಇದನ್ನೂ ಓದಿ: ಪ್ರೀತಿ ಪ್ರಬುದ್ಧವಾಗಿರಬೇಕು.. ಅಪ್ರಬುದ್ಧರ ಪ್ರೀತಿ ಹೇಗಿರುತ್ತೆ ಗೊತ್ತಾ?
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k