ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಟೀಕೆಗಳು ಈಗ ವೈಯಕ್ತಿಕ ಮಟ್ಟಕ್ಕೆ ಇಳಿದಿದ್ದು, ಕುಮಾರಸ್ವಾಮಿ ಅವರ ದ್ವಿಪತ್ನಿತ್ನ ವಿಚಾರವನ್ನು ಪ್ರಸ್ತಾಪ ಮಾಡಿ ಬಿಜೆಪಿ ಕಾಲೆಳೆದಿದೆ.
ಆರ್‌ಎಸ್‌ಎಸ್ ಕೆಲಸವನ್ನು ಟೀಕಿಸಿದ್ದ ಕುಮಾರಸ್ವಾಮಿ ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಶಾಖೆಗೆ ಬನ್ನಿ. ನಿಮಗೂ ಆರ್‌ಎಸ್‌ಎಸ್ ಬಗ್ಗೆ ತಿಳಿಸಿಕೊಡಲಾಗುವುದು ಎಂದಿದ್ದರು.
Advertisement
ಮಾನ್ಯ @hd_kumaraswamy ಅವರೇ,
ಈ ದೇಶದಲ್ಲಿ ಪ್ರಜ್ಞಾವಂತರು, ಬುದ್ಧಿವಂತರು ಎಂದು ಭ್ರಮಿಸಿಕೊಂಡವರು ಮಾಡುವ ಕೆಲವು ಪ್ರಜ್ಞಾಪೂರ್ವಕ ತಪ್ಪುಗಳೇನು ಗೊತ್ತೇ?
ಅವುಗಳ ಪಟ್ಟಿಕೊಡುತ್ತೇವೆ, ಒಮ್ಮೆ ಕಣ್ಣಾಡಿಸಿ. ಅವೆಲ್ಲವೂ ಭಾರತೀಯ ದಂಡ ಸಂಹಿತೆಯ ಪ್ರಕಾರ ಅಪರಾಧವೂ ಹೌದು.
— BJP Karnataka (@BJP4Karnataka) October 20, 2021
Advertisement
ನಳಿನ್ ಉತ್ತರಕ್ಕೆ ತಿರುಗೇಟು ನೀಡಿದ್ದ ಕುಮಾರಸ್ವಾಮಿ ಆರ್‌ಎಸ್‌ಎಸ್ ಶಾಖೆಗೆ ಹೋದವರು ವಿಧಾನಸಭೆಯಲ್ಲಿ ನೀಲಿ ಚಿತ್ರ ನೋಡಿದ್ದಾರೆ. ಹೀಗಾಗಿ ನಾನು ಶಾಖೆಗೆ ಬರುವುದಿಲ್ಲ ಎಂದು ಹೇಳಿ ವ್ಯಂಗ್ಯವಾಡಿದ್ದರು. ಈಗ ಬಿಜೆಪಿ ಕುಮಾರಸ್ವಾಮಿ ಅವರಿಗೆ ಇಬ್ಬರು ಪತ್ನಿಯರು ಎಂದು ಪರೋಕ್ಷವಾಗಿ ಉಲ್ಲೇಖಿಸಿ ಟ್ವೀಟ್ ಮಾಡಿದೆ. ಇಬ್ಬರು ಪತ್ನಿಯರು ಇರುವುದು ಅಪರಾಧ ಎಂದು ಕಾಲೆಳೆದಿದೆ. ಇದನ್ನೂ ಓದಿ: ತಾಲಿಬಾನ್ ಸರ್ಕಾರದಲ್ಲಿ ಸೂಸೈಡ್ ಬಾಂಬರ್ ಕುಟುಂಬಕ್ಕೆ ನಗದು ಪರಿಹಾರ, ನಿವೇಶನ ಗಿಫ್ಟ್
Advertisement
√ ಸಿಗ್ನಲ್ ಜಂಪ್
√ ವಿಶ್ವಾಸ ದ್ರೋಹ ( ಬ್ರೀಚ್ ಆಫ್ ಟ್ರಸ್ಟ್ )
√ ಭ್ರಷ್ಟಾಚಾರ
√ ಸ್ವಜನ ಪಕ್ಷಪಾತ
√ ಎಲ್ಲಕ್ಕಿಂತ ಮುಖ್ಯವಾಗಿ ಬೈಗಮಿ
ಬೇರೆಯವರ ತಪ್ಪುಗಳ ಬಗ್ಗೆ ಸದಾ ಆಡಿಕೊಳ್ಳುವ @hd_kumaraswamy ಅವರೇ, ಇದೆಲ್ಲದರ ಬಗ್ಗೆ ತುಂಬಾ ಜಾಗರೂಕರಾಗಿರಬೇಕಲ್ಲವೇ?
— BJP Karnataka (@BJP4Karnataka) October 20, 2021
Advertisement
ಬಿಜೆಪಿ ಟ್ವೀಟ್‌ನಲ್ಲಿ ಏನಿದೆ?
ಪ್ರಜ್ಞಾವಂತರು, ಬುದ್ಧಿವಂತರೆಂದು ಭ್ರಮಿಸಿಕೊಂಡವರು ಮಾಡುವ ಕೆಲವು ಪ್ರಜ್ಞಾಪೂರ್ವಕ ತಪ್ಪುಗಳೇನು ಗೊತ್ತೇ? ಅವುಗಳ ಪಟ್ಟಿಕೊಡುತ್ತೇವೆ, ಒಮ್ಮೆ ಕಣ್ಣಾಡಿಸಿ. ಅವೆಲ್ಲವೂ ಭಾರತೀಯ ದಂಡ ಸಂಹಿತೆಯ ಪ್ರಕಾರ ಅಪರಾಧವೂ ಹೌದು. ಸಿಗ್ನಲ್ ಜಂಪ್, ವಿಶ್ವಾಸ ದ್ರೋಹ (ಬ್ರೀಚ್ ಆಫ್ ಟ್ರಸ್ಟ್ ), ಭ್ರಷ್ಟಾಚಾರ, ಸ್ವಜನ ಪಕ್ಷಪಾತ, ಎಲ್ಲಕ್ಕಿಂತ ಮುಖ್ಯವಾಗಿ ಬೈಗಮಿ. ಬೇರೆಯವರ ತಪ್ಪುಗಳ ಬಗ್ಗೆ ಸದಾ ಆಡಿಕೊಳ್ಳುವ ಎಚ್‌ಡಿಕೆ ಅವರೇ, ಇದೆಲ್ಲದರ ಬಗ್ಗೆ ತುಂಬಾ ಜಾಗರೂಕರಾಗಿರಬೇಕಲ್ಲವೇ ಎಂದು ಪ್ರಶ್ನಿಸಿದೆ.
ಏಕಕಾಲದಲ್ಲಿ ಇಬ್ಬರು ಹೆಂಡತಿಯರು ಅಥವಾ ಗಂಡಂದಿರು ಇದ್ದರೆ ಅದನ್ನು ಬೈಗಮಿ ಎಂದು ಕರೆಯಲಾಗುತ್ತದೆ. ಭಾರತ ದಂಡ ಸಂಹಿತೆ(ಐಪಿಸಿ) ಪ್ರಕಾರ ವಿಚ್ಛೇದನ ನೀಡದೇ ಬೇರೊಬ್ಬ ಮಹಿಳೆ, ಪುರುಷನನ್ನು ಮದುವೆಯಾಗುವುದು ಅಪರಾಧ.